ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಲಾರಿಗೆ ಸಿಲುಕಿ ಕಾರ್ಮಿಕ ಸಾವು

Rashmi Kasaragodu
Updated On : 21 Jul 2013, 1:16 am


ಚಿಂತಾಮಣಿ: ಬೋರ್ವೆಲ್ ಕೊರೆಯುವ ಲಾರಿ ಚಾಲಕನ ನಿರ್ಲಕ್ಷ್ಯ ಚಾಲನೆಯಿಯಿಂದ ಚಕ್ರಕ್ಕೆ ಸಿಲುಕಿ ಒಬ್ಬ ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟು ಮತ್ತೊಬ್ಬ ಕಾರ್ಮಿಕ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಬಟ್ಲಹಳ್ಳಿ ಪೊಲೀಸ್ಠಾಣೆ ವ್ಯಾಪ್ತಿಯ ಪಾತಕೋಟೆ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾತಕೋಟೆ ಗ್ರಾಮದ ನಾರಾಯಣರೆಡ್ಡಿ ಎಂಬುವರಿಗೆ ಕೊಳವೆ ಬಾವಿ ಕೊರೆಯಲು ಶುಕ್ರವಾರ ಸಂಜೆ ಗ್ರಾಮಕ್ಕೆ ಲಾರಿ ಬಂದಿತ್ತು ಎನ್ನಲಾಗಿದೆ. ಮಳೆ ಸುರಿದ ಪರಿಣಾಮ, ಬೋರ್ವೆಲ್ ಕೂಲಿ ಕಾರ್ಮಿಕರಾದ ರಾಮುಲು ಮತ್ತು ರಾಮಕುಮಾರ್ ಎಂಬುವರು ಮಳೆಯಲ್ಲಿ ನೆನೆಯದಂತೆ ಲಾರಿ ಕೆಳಗೆ ಕುಳಿತಿದ್ದರು. ಇದನ್ನು ತಿಳಿಯದ ಚಾಲಕ ಶಿವಕುಮಾರ್ ಲಾರಿ ಚಾಲನೆ ಮಾಡಿದ್ದಾನೆ, ಪರಿಣಾಮ ರಾಮುಲು (22) ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ರಾಮಕುಮಾರ್ ಗಂಭೀರ ಗಾಯಗಳಾಗಿ ಸಾವು ನೋವಿನ ಜೊತೆ ಹೋರಾಟ ನಡೆಸುತಿದ್ದ ಈತನನ್ನು  ಬೆಂಗಳೂರು ನಿಮ್ಹಾನ್ಸ್ಗೆ ರವಾನಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement