ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವೀರಯ್ಯ ವಿರುದ್ಧ ಕೆಜೆಪಿ ಗರಂ

Rashmi Kasaragodu
Updated On : 21 Jul 2013, 1:16 am

ಕೋಲಾರ: ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲಿನ ಆದಾಯ ತೆರಿಗೆ ದಾಳಿಯನ್ನು ಸಮರ್ಥಿಸಿ ವಿಧಾನಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ನೀಡಿರುವ ಹೇಳಿಕೆಯನ್ನು ಜಿಲ್ಲಾ ಕೆಜೆಪಿ ಮುಖಂಡರು ಖಂಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಕೆಜೆಪಿ ಮುಖಂಡರಾದ ಎಸ್.ಎನ್.ಶ್ರೀರಾಮ್, ಸಿ.ಡಿ.ರಾಮಚಂದ್ರೇಗೌಡ, ನರೇಂದ್ರ ಮತ್ತು ಒಕ್ಕಲಿಗ ಯುವ ವೇದಿಕೆ ಪ್ರದೀಪ್ಗೌಡ ಅವರು, ಇತ್ತೀಚೆಗೆ ಆದಿಚುಂಚನಗಿರಿ ಮಠದ ಮೇಲೆ ಐಟಿ ದಾಳಿ ನಡೆದ ಘಟನೆ ಸಮರ್ಥಿಸಿಕೊಂಡು ಐಟಿ ಇಲಾಖೆಗೆ ಪರಮಾಧಿಕಾರವಿದ್ದು,ದಾಳಿ ನಡೆಸಬಹುದು ಎಂದು ಹೇಳಿಕೆ ನೀಡಿರುವುದು ವೀರಯ್ಯ ಧರ್ಮ ವಿರೋಧಿ ವರ್ತನೆಗೆ ಸಾಕ್ಷಿಯಾಗಿದೆ ಎಂದರು.
ಬಾಲಿಷತನದ ಹೇಳಿಕೆ ಸಲ್ಲ: ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂಬ ಅವರ ಹೇಳಿಕೆ ಬಾಲಿಷತನದಿಂದ ಕೂಡಿದೆ ಎಂದು ಕಿಡಿಕಾರಿದ್ದಾರೆ.
ತಕ್ಕ ಪಾಠ ಕಲಿಸಬೇಕು: ಮಠ ಮಾನ್ಯಗಳು, ಧಾರ್ಮಿಕ ಶ್ರದ್ಧಾ ಕೇಂದ್ರಗಳ ಕುರಿತು ಅಪಾರ ನಂಬಿಕೆ ಇಟ್ಟುಕೊಂಡಿರುವ ರಾಷ್ಟ್ರೀಯ ಪಕ್ಷವೊಂದರ ಸದಸ್ಯರಾಗಿದ್ದುಕೊಂಡು ಇಂತಹ ಧರ್ಮವಿರೋಧಿ ಹೇಳಿಕೆ ನೀಡಿರುವ ಇಂತಹವರಿಗೆ ಜನತೆ ತಕ್ಕ ಪಾಠ ಕಲಿಸಲು ಸಿದ್ದರಾಗಿದ್ದಾರೆ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement