ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಂಚೆ ಚೀಟಿ, ನೋಟು, ಚಿನ್ನ, ಬೆಳ್ಳಿ ನಾಣ್ಯಗಳ ಪ್ರದರ್ಶನ

Rashmi Kasaragodu
Updated On : 22 Jul 2013, 1:19 am

ಚಿಂತಾಮಣಿ: ಪಟ್ಟಣದ ಪ್ರತಿಷ್ಠಿತ ರಾಯಲ್ ವಿದ್ಯಾ ಸಂಸ್ಥೆಯಲ್ಲಿ ದಶಕಗಳ ಹಿಂದಿನ ಅಂಚೆ ಚೀಟಿ ಹತ್ತಾರು ದೇಶಗಳ ಕರೆನ್ಸಿ ನೋಟು, ಚಿನ್ನ, ಬೆಳ್ಳಿ ನಾಣ್ಯಗಳು ಅಂಚೆ ಚೀಟಿಗಳಿಂದ ರೂಪುಗೊಂಡ ವಿಶ್ವದ ಗಣ್ಯ ವ್ಯಕ್ತಿ ಭಾವಚಿತ್ರಗಳು ನೋಡುಗರ ಮನಸೆಳೆದವು.  ಸಂಸ್ಥೆಯಲ್ಲಿ ಶಿಟ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದ ನಿವೃತ್ತ ಹೆಚ್.ಎ.ಎಲ್ ನೌಕರ ಪ್ರಭಾಕರ್ ಕಳೆದ 30 ವರ್ಷಗಳಿಂದ ದಶಕಗಳ ಹಿಂದಿನ ಅಂಚೆ ಚೀಟಿ ಹತ್ತಾರು ದೇಶಗಳ ಕರೆನ್ಸಿ ನೋಟು, ಚಿನ್ನ, ಬೆಳ್ಳಿ ನಾಣ್ಯಗಳು ಅಂಚೆ ಚೀಟಿಗಳು ಸೇರಿದಂತೆ ಇತಿಹಾಸ ಬಗ್ಗೆ ಶಾಲಾ ಮಕ್ಕಳಿಗೆ ಮಾಹಿತಿ ನೀಡಿ ಮಕ್ಕಳಲ್ಲಿ ಗತ ವೈಭವದ ಬಗ್ಗೆ ಸಂಗ್ರಹಿಸಿರುವ ಭಾವಚಿತ್ರ ಹಾಗೂ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಇತಿಹಾಸ ಮಾಹಿತಿಯು ಮಕ್ಕಳಿಗೆ ಬಹಳ ಅರ್ಥಪೂರ್ಣವಾಗಿ ಪ್ರದರ್ಶನಕ್ಕಿಟ್ಟಿರುವ ಮೂಲಕ ಕಾರ್ಯಕ್ರಮವೂ ನೋಡುಗರರನ್ನು ಕೈಬೀಸಿ ಕರೆಯುತ್ತಿತ್ತು.  ಈ ಹವ್ಯಾಸಿಗಾರನ ಅಮೋಘ ಪ್ರದರ್ಶನಕ್ಕೆ ರಾಯಲ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ. ರಾಮಕೃಷ್ಣ ಹಾಗೂ ಮುಖ್ಯಶಿಕ್ಷಕಿ ಪ್ರೇಮಲತ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ವಿದ್ಯಾರ್ಥಿಗಳ ಜೊತೆ ಪೋಷಕರು, ಸಾರ್ವಜನಿಕರು ಅಪರೂಪ ದೃಶ್ಯಗಳನ್ನು ನೋಡಲು ಮುಂದಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement