ಅಭಿವೃದ್ಧಿ ಕಾರ್ಯಗಳಿಂದ ಕರ್ತವ್ಯ ನಿಭಾವಣೆ: ವರ್ತೂರ್ ಪ್ರಕಾಶ್
ಕೋಲಾರ: ನಗರದ ಕೆಲ ವಾರ್ಡ್ಗಳಲ್ಲಿ ಜನತೆ ನನನು ಆಶೀರ್ವದಿಸದಿದ್ದರೂ ಒಬ್ಬ ಶಾಸಕನಾಗಿ ನಿರ್ವಹಿಸಬೇಕಾದ ಜವಾಬ್ದಾರಿಗಳನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿರುವುದಾಗಿ ಶಾಸಕ ವರ್ತೂರು ಪ್ರಕಾಶ್ ಪ್ರಕಟಿಸಿದರು.
ನಗರದ 13ನೇ ವಾರ್ಡ್ ಮತ್ತು ಬೆಮೆಲ್ ಲೇಔಟ್ನ ಹಿರಿಯ ನಾಗರೀಕರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಗರದಲ್ಲಿ ಕೆಲ ವಾರ್ಡ್ಗಳಲ್ಲಿ ಅಭಿವೃದ್ಧಿಗಿಂತ ಜಾತಿಗೆ ಒತ್ತು ನೀಡಿದರೆಂಬ ಅಸಮಾಧಾನ ನನಲ್ಲಿತ್ತು. ಆದರೆ, ಸಮಾನತೆ ಹಾದಿಯಲ್ಲಿ ನಡೆಯುವ ನನಗೆ ಈ ಅಸಮಾಧಾನ ಹೆಚ್ಚಿನ ದಿನಗಳು ಉಳಿಯಲಿಲ್ಲ. ಹಾಗಾಗಿ, ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿ ಈ ವಾರ್ಡ್ಗಳ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವುದಾಗಿ ತಿಳಿಸಿದರು.
ನನ ಬಳಿ ಮನುಕುಲ ಎಂಬ ಜಾತಿ ಹೊರತುಪಡಿಸಿದರೆ ಇನ್ಯಾವ ಜಾತಿಯೂ ಇಲ್ಲ, ಜನತೆ ಇದನು ಗಮನಿಸಿಯೇ ನನನು ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಮಾನವಿಯತೆಯ ಮುಂದೆ ಜಾತಿ ದೊಡ್ಡದಲ್ಲವೆಂದು ತಿಳಿಸಿದರು.
ನಗರದ 13, 14, 15ನೇ ವಾರ್ಡ್ಗಳಿಗೆ ಶೀಘ್ರದಲ್ಲೇ ಸಿಮೆಂಟ್, ಡಾಂಬರು ರಸ್ತೆ ಕಾಂಗಾರಿಗಳಿಗೆ ಚಾಲನೆ ನೀಡುವುದಾಗಿ ತಿಳಿಸಿದ ಅವರು, ಈಗಾಗಲೇ ಬೋರ್ವೆಲ್ ಕೊರೆದು ಕುಡಿಯುವ ನೀರಿನ ಸಮಸ್ಯೆಯನು ಬಗೆಹರಿಸಿರುವುದಾಗಿ ತಿಳಿಸಿದರು.
ವಕೀಲ ಅಮರೇಂದ್ರ ಮಾತನಾಡಿದರು. ಬೆಮೆಲ್ ಲೇಔಟ್ನ ಹಿರಿಯ ನಾಗರೀಕರು ಶಾಸಕರನು ಸನ್ಮಾನಿಸಿದರು. ದೀಕ್ಷಿತ್, ಗೋವಿಂದರಾಜ್, ಗೋಪಾಲಕೃಷ್ಣ, ಶ್ರೀನಿವಾಸಗೌಡ, ವರದರಾಜ್, ರಮನಾಥ್, ಶಿವಪ್ರಕಾಶ್, ಚಿನಪ್ಪ, ಲಕ್ಷ್ಮಣ್, ಡ್ರಿಪ್ ನಾರಾಯಣಸ್ವಾಮಿ, ಪವರ್ ನಾರಾಯಣಸ್ವಾಮಿ ಇದ್ದರು.