'ಆರೋಗ್ಯ ಶಿಬಿರ ಪ್ರಯೋಜನ ಪಡೆಯಿರಿ'
ಶಿಡ್ಲಘಟ್ಟ: ಆರೋಗ್ಯವೇ ಭಾಗ್ಯ. ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನು ನಡೆಸಬೇಕೆಂದು ಶಾಸಕ ರಾಜಣ್ಣ ಹೇಳಿದರು.
ಇಲ್ಲಿನ ಮಳ್ಳೂರಿನಲ್ಲಿ ಕೆ.ಆರ್.ಪುರಂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಹಳ್ಳಿಗಳಲ್ಲಿ ಪಟ್ಟಣದ ದೊಡ್ಡ ಆಸ್ಪತ್ರೆಗಳಿಗೆ ಹೋಗಲು ಬಡವರು ಆರ್ಥಿಕ ಮುಗ್ಗಟಿನಿಂದ ಬಳಲುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಉಚಿತ ಆರೋಗ್ಯ ಶಿಬಿರಗಳನು ನಡೆಸುವ ಮೂಲಕ ಅವರಿಗೆ ಆರೋಗ್ಯ ತಪಾಸಣೆ ಅವಕಾಶ ಕಲ್ಪಿಸಬೇಕು ಎಂದರು.
ಆಸ್ಪತ್ರೆಯ ಡಾ. ಸಾಂಬಶಿವ ಮಾತನಾಡಿ, ಆರೋಗ್ಯ ನಿರ್ಲಕ್ಷಿಸಿದರೆ, ಸಣ್ಣ ಸಮಸ್ಯೆ ಮುಂದೆ ಪ್ರಾಣಹರಣಕ್ಕೂ ಕಾರಣವಾಗಬಲ್ಲದು. ಜಾಗೃತಿ ವಹಿಸಬೇಕು. ಚಿಕುನ್ಗುನ್ಯಾ, ಡೆಂಘೀಜ್ವರ, ಮಲೇರಿಯಾದಂಥ ಸಾಂಕ್ರಾಮಿಕ ರೋಗಗಳನು ತಡೆಗಟ್ಟಲು ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಎಂದರು.
ಮುನಿಯಪ್ಪ, ಅಪ್ಸರ್ ಪಾಷಾ, ಲಕ್ಷಣ್, ಪಿ.ವಿ. ನಾಗರಾಜ್, ಡಾ. ಸಾಯಿಪ್ರಕಾಶ್, ಡಾ. ರಾಜಣ್ಣ, ಮಂಜುನಾಥ್ ಇದ್ದರು.