ಉದ್ಯೋಗ ಮೇಳ ಆಯೋಜನೆಗೆ ಚಿಂತನೆ: ಶಾಸಕ ರಾಜಣ್ಣ ಇಂಗಿತ
ಶಿಡ್ಲಘಟ್ಟ: ವಿದ್ಯಾವಂತ ನಿರುದ್ಯೋಗಿಗಳಿಗೆ ಕೆಲಸ ಸಿಕ್ಕರೆ ಗೌರವವಾಗಿ ಬದುಕಬಹುದು ಎಂದು ಶಾಸಕ ಎಂ. ರಾಜಣ್ಣ ಹೇಳಿದರು.
ಇಲ್ಲಿನ ಜೂನಿಯರ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಭಾರ್ತಿ ಏರ್ಟೆಲ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ಬಹಳಷ್ಟು ಮಂದಿ ನಿರುದ್ಯೋಗಿಗಳಿದ್ದಾರೆ. ಅವರಿಗೆ ಕೆಲಸ ಸಿಕ್ಕಿದರೆ ಅವರ ಕುಟುಂಬ ನಿರ್ವಹಣೆಗೆ ಉಪಯೋಗವಾಗುವುದು. ಮುಂದೆಯೂ ಇಂಥ ಉದ್ಯೋಗ ಮೇಳ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದರು.
ನಿರುದ್ಯೋಗಿಗಳಿಗೆ ಕರಕುಶಲ ತರಬೇತಿ ನೀಡಲು ಅನೇಕ ಕಂಪೆನಿಗಳು ಮುಂದಾಗಿವೆ. ಮುಂದೆ ನಿರುದ್ಯೋಗಿಗಳಿಗೆ ಅನೇಕ ತರಹದ ಯೋಜನೆಗಳನ್ನು ಹಾಕಿಕೊಂಡಿದು,್ದ ಆದಷ್ಟು ಶೀಘ್ರವಾಗಿ ಯೋಜನೆ ಅನುಷ್ಟಾನಕ್ಕೆ ತರಲು ಪ್ರಯತ್ನಿಸುವುದಾಗಿ ಹೇಳಿದರು.
ಅಪ್ಸರ್ ಪಾಷ, ಪಿ.ವಿ. ನಾಗರಾಜ್, ಬಂಕ್ ಮುನಿಯಪ್ಪ, ಏರ್ಟೆಲ್ ಸೀನಿಯರ್ ಮ್ಯಾನೇಜರ್ ಆರ್.ಸಿ.ಗೀರಿಶ್, ಪ್ರಾಜೆಕ್ ಮ್ಯಾನೇಜರ್ ಶ್ರೀಕುಮಾರ್, ಮ್ಯಾನೇಜರ್ ಹರೀಶ್, ಅಸಿಸ್ಟೆಂಟ್ ಮ್ಯಾನೇಜರ್ ಅಜಪ್ಪ ಹಾಜರಿದ್ದರು.