ಐಟಿ ದಾಳಿ ಸಮರ್ಥಿಸಿಲ್ಲ; ಡಿ.ಎಸ್.ವೀರಯ್ಯ ಸ್ಪಷ್ಟನೆ
ಕ.ಪ್ರ.ವಾರ್ತೆ ಕೋಲಾರ ಜು. 21
ಆದಿಚುಂಚನಗಿರಿಮಠ, ಶಿಕ್ಷಣ ಸಂಸ್ಥೆಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ತಮ್ಮ ಹೇಳಿಕೆ ವಿರುದ್ಧ ಕೆಲವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ತಾವೆಂದೂ ಆದಾಯ ತೆರಿಗೆ ದಾಳಿಯನ್ನು ಸಮರ್ಥಿಸಿ ಹೇಳಿಕೆ ನೀಡಿಲ್ಲ ಎಂದಿರುವ ಅವರು, ಆದಿಚುಂಚನಗಿರಿ ಮಠ ಸೇರಿದಂತೆ ನಮ್ಮ ಧಾರ್ಮಿಕ ಮಠ ಹಾಗೂ ಗುರುಗಳ ಕುರಿತು ತಮಗೆ ಅಪಾರ ಗೌರವವಿದೆ ಎಂದಿದ್ದಾರೆ. ಇತ್ತೀಚೆಗೆ ತಾವು ಆದಾಯ ತೆರಿಗೆ ದಾಳಿಯನ್ನು ಸಮರ್ಥಿಸಿದಂತೆ ಹೇಳಿಕೆ ನೀಡಿರುವುದಾಗಿಯೂ ಮತ್ತು ಅದಕ್ಕೆ ಕೆಲವರು ಟೀಕೆ ಮಾಡಿರುವುದನ್ನು ನೋಡಿ ಆಶ್ಚರ್ಯವಾಯಿತು. ಇಂತಹ ತಪ್ಪು ತಾವೆಂದೂ ಮಾಡಿಲ್ಲ ಎಂದಿದ್ದಾರೆ. ತಾನು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತನಾಗಿದ್ದು, ರಾಷ್ಟ್ರೀಯತೆ, ಧರ್ಮಕ್ಕೆ ಅಪಚಾರ ಎಸಗುವಂತಹ ಹೇಳಿಕೆ ನೀಡಿರುವುದಿಲ್ಲ ಎಂದು ತಿಳಿಸಿದ್ದಾರೆ.
ಲಕ್ಷಾಂತರ ಮಂದಿಗೆ ಅನ್ನದಾನ, ವಿದ್ಯಾದಾನ ಮಾಡುತ್ತಿರುವ ಮಠಗಳ ಕುರಿತು ಕಾಂಗ್ರೆಸ್ ಸರ್ಕಾರಕ್ಕೆ ನಂಬಿಕೆ ಇಲ್ಲ, ಸಾಮಾಜಿಕ ಸೇವೆ ಮಾಡುತ್ತಿರುವ ಮಠಗಳ ಮೇಳೆ ದಾಳಿ ನಡೆಸುವ ಮೂಲಕ ಕಾಂಗ್ರೆಸ್ ದೊಡ್ಡ ತಪ್ಪು ಮಾಡಿದ್ದು, ಜನತೆ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಎಚ್ಚರಿಸಿದ್ದಾರೆ.