ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೋಟೆ ತಿಮ್ಮನಾಯಕನಹಳ್ಳಿಯಲ್ಲಿ ದುಷ್ಕರ್ಮಿಗಳ ನಿಧಿಶೋಧನೆ ಯತ್ನ

Rashmi Kasaragodu
Updated On : 22 Jul 2013, 1:17 am

ಟೇಕಲ್: ಸಮೀಪದ ಕೋಟೆ ತಿಮ್ಮನಾಯಕನಹಳ್ಳಿಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಆಂಜನೇಯಸ್ವಾಮಿ ಕಲ್ಯಾಣ ಮಂಟಪದ ಮಧ್ಯಭಾಗದಲ್ಲಿ ದುಷ್ಕರ್ಮಿಗಳು ನಿಧಿಶೋಧನೆಗಾಗಿ ಗುರುವಾರ ರಾತ್ರಿ ಅಗೆದಿದ್ದು, ತಡವಾಗಿ ವರದಿಯಾಗಿದೆ.
ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ಕೋಟೆ ತಿಮ್ಮನಾಯಕನಹಳ್ಳಿಯಲ್ಲಿ ಪುರಾತನ ಸೀತಾರಾಮ ಆಂಜನೇಯಸ್ವಾಮಿ, ಹೊನ್ನಮ್ಮ, ಚೆನ್ನಮ್ಮ ದೇವಾಲಯಗಳಲ್ಲಿ ಸುಮಾರು ಕಡೆ ನಿಧಿ ಇರುವ ಗುಮಾನಿಯಿಂದ  ದುಷ್ಕರ್ಮಿಗಳು ನಾಲ್ಕೈದು ಬಾರಿ ನಿಧಿಶೋಧ ಪ್ರಯತ್ನ ಮಾಡುತ್ತಾ ಬರುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಕೋಟೆ ಒಳಭಾಗದಲ್ಲಿರುವ ಗರುಡಗಂಭವನ್ನು ಉರುಳಿಸಿ ನಿಧಿಶೋಧ ಮಾಡಲಾಗಿತ್ತು.  
ಇಂತಹ ನಿಧಿಶೋಧದ ಘಟನೆಗಳು ಟೇಕಲ್ ಸುತ್ತಮುತ್ತ ಬಹಳವಾಗಿ ನಡೆಯುತ್ತಿದ್ದರು ಸಹ ಕಂದಾಯ ಮತ್ತು ಪೊಲೀಸ್ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿವೆ. ಹಿಂದಿನ ಕಾಲದ ರಾಜರು ಕಟ್ಟಿಸಿದ ಪುರಾತನ ದೇವಾಲಯಗಳನ್ನು ಸಂರಕ್ಷಿಸುವಲ್ಲಿ ತಾಲೂಕು ಆಡಳಿತ ನಿಷ್ಪ್ರಯೋಜಕವಾಗಿದ್ದು, ಜಿಲ್ಲಾಡಳಿತ ಈ  ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಜನತೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement