ಡಿಸಿಸಿ ಬ್ಯಾಂಕ್ ಮ್ಯಾನೇಜರ್ ವಜಾ
ಕೋಲಾರ: ರೈತರ ಸಾಲ ಮನ್ನಾ ಮತ್ತು ಪರಿಹಾರದ ಹಣ 39.50 ಲಕ್ಷ ರು.ಗಳನ್ನು ದುರುಪಯೋಗ ಆರೋಪ ಹೊತ್ತಿದ್ದ ಬಾಗೇಪಲ್ಲಿ ಡಿಸಿಸಿ ಬ್ಯಾಂಕಿನ ಮ್ಯಾನೇಜರ್ ಎ.ವಿ. ಶ್ರೀನಿವಾಸ್ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಸರ್ಕಾರದ ಹಣವನ್ನು ರೈತರಿಗೆ ನೀಡದೆ ದುರುಪಯೋಗ ಮಾಡಿಕೊಂಡಿದ್ದ ಎ.ವಿ. ಶ್ರೀನಿವಾಸ್ ಅವರನ್ನು ಅಮಾನತುಪಡಿಸಿ ವಿಚಾರ ನಡೆಸಲಾಗಿತ್ತು. ಆರೋಪ ಸಾಬೀತು ಆಗಿರುವ ಹಿನ್ನೆಲೆಯಲ್ಲಿ ಸಿಇಒ ವೆಂಕಟೇಶಪ್ಪನವರು ಆರೋಪಿಯನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.