ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು
ಮಾಲೂರು: ಪ್ರೈವುಡ್ ತಯಾರಿಕಾ ಕಾರ್ಖಾನೆಯಲ್ಲಿ ನಡೆದ ಆಕಸ್ಮಿಕ ಅವಘಡದಲ್ಲಿ ಕಾರ್ಮಿಕನೊಬ್ಬ ಯಂತ್ರಕ್ಕೆ ಸಿಕ್ಕಿ ಸಾವನ್ನಪ್ಪಿದ್ದ ಘಟನೆ ಇಲ್ಲಿನ ಕೈಗಾರಿಕಾ ಪ್ರಾಂಗಣದಲ್ಲಿ ಭಾನುವಾರ ಬೆಳಗ್ಗಿನ ಜಾವ ಘಟಿಸಿದೆ. ಮೃತನನ್ನು ಉತ್ತರಾಖಂಡ್ ಮೂಲಕ ಆನಂದ್ ಸಿಂಗ್ (38) ಎಂದು ಗುರುತಿಸಲಾಗಿದೆ. ಇಲ್ಲಿನ ಕೈಗಾರಿಕಾ ಪ್ರಾಂಗಣದ ಅಸೋಷಿಯಟ್ ಡೆಕೋರ್ ಪ್ರೈವುಡ್ ಕಾರ್ಖಾನೆಯಲ್ಲಿ ಸೀನಿಯರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ರಾತ್ರಿ ಪಾಳಿಯಲ್ಲಿದ್ದ ಆನಂದ್ ಸಿಂಗ್ ಭಾನುವಾರ ಬೆಳಗ್ಗಿನ ಜಾವ 5.30ರ ಸುಮಾರಿಗೆ ಮೈನ್ಸ್ವೀಚ್ ಆಫ್ ಮಾಡದೆ ಯಂತ್ರದ ಬಳಿ ನಿರ್ಲಕ್ಷದಿಂದ ನಿಂತಿದ್ದ ಎನ್ನಲಾಗಿದೆ. ಸೆಸ್ಸರ್ವುಳ್ಳ ಅತಿ ಆಧುನಿಕ ಯಂತ್ರದ ಬಳಿ ಕೈ ಇಟ್ಟಿದ್ದ ಆನಂದ್ನ ಕೈ ಸೆಳೆಯುತ್ತಲ್ಲದೆ ತಲೆಯನ್ನೂ ತುಂಡರಿಸಿದೆ. ಪೊಲೀಸ್ ಇನ್ಸ್ಪೆಕ್ಟರ್ ಕೇಶವಮೂರ್ತಿ, ಎಸ್ಐ ಶಿವಸ್ವಾಮಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.