ಶಿ.ಮ.ಮಂಜುನಾಥ್ಗೆ ರಂಗಶ್ರೀ ಕಾವ್ಯ ಸೌರಭ ಪ್ರಶಸ್ತಿ
ಚಿಂತಾಮಣಿ: ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಾಯಲ್. ಶಿ.ಮ.ಮಂಜುನಾಥ್ ಅವರಿಗೆ ರಾಜ್ಯ ಮಟ್ಟದ ರಂಗಶ್ರೀ ಕಾವ್ಯ ಸೌರಭ ಪ್ರಶಸ್ತಿ ದೊರೆತಿದೆ. ಬೆಂಗಳೂರಿನ ರಂಗಶ್ರೀ ಕಲಾ ಸಂಸ್ಥೆಯು ಆಯೋಜಿಸಿದ್ದ ರಾಜ್ಯ ಮಟ್ಟದ ಸ್ವರಚಿತ ಕವನ ಸ್ಪರ್ಧೆಯಲ್ಲಿ ಮಂಜುನಾಥ್ ಅವರ ಮೌನ ಗೀತೆ ಎಂಬ ಕವಿತೆಯು ಆಯ್ಕೆಯಾಗಿದ್ದು ಈ ಸಂಬಂಧವಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಬಿ.ಎನ್.ಹರೀಶ್ ತಿಳಿಸಿದ್ದಾರೆ. ಜುಲೈ 24 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ಮಂಜುನಾಥ್ಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುವುದೆಂದು ವಿವರಿಸಿದ್ದಾರೆ.