ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಕ್ರಮ ಖಾತೆಗೆ ಶಿಫಾರ್ಸು ಮಾಡಿಲ್ಲ: ನಗರಸಭೆ ಆಯುಕ್ತರ ಸ್ಪಷ್ಟನೆ

Vishwanath S
Updated On : 24 Jul 2013, 12:37 pm

ಕೋಲಾರ: ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಇಲ್ಲವೇ ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಅವರು ಯಾವುದೇ ಅಕ್ರಮ ಖಾತೆ ಮಾಡುವುದಕ್ಕೆ ತಮಗೆ ಶಿಫಾರಸ್ಸು ಮಾಡಿಲ್ಲವೆಂದು ನಗರಸಭೆಯ ಆಯುಕ್ತ ಮಹೇಂದ್ರ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಸಕ ಆರ್. ವರ್ತೂರ್ ಪ್ರಕಾಶ್ ಅವರು, ಕಳೆದ ಎರಡು ದಿನಗಳ ಹಿಂದೆ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಹಾಗೂ ನಜೀರ್ ಅಹಮ್ಮದ್ ಅವರು ನಗರಸಭೆ ಆಯುಕ್ತರ ಮೇಲೆ ಒತ್ತಡ ತಂದು ಸರ್ಕಾರಿ ಮತ್ತು ಕೆರೆ ಜಮೀನು ನಂಗಲು ಯತ್ನಿಸುತ್ತಿರುವ ಭೂಗಳ್ಳರಿಗೆ ಸಹಾಯ ಮಾಡುವಂತೆ ತಾಕೀತು ಮಾಡಿದ್ದಾರೆಂದು ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶವಿಲ್ಲವೆಂದು ತಿಳಿಸಿದ್ದಾರೆ.
ಕಾನೂನು ಮೀರಿ ಕೆಲಸ ಮಾಡುವಂತೆ ಯಾರೂ ಸಹ ನನಗೆ ಸೂಚಿಸಿಲ್ಲ, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಅವರು ನಗರದ ಸಿ.ಬೈರೇಗೌಡ ಬಡಾವಣೆಯಲ್ಲಿನ ನಿವೇಶನಕ್ಕೆ ಸಂಬಂಧಿಸಿದಂತೆ ಖಾತೆ ಸರಿಯಿದ್ದಲ್ಲಿ ನೀವೇ ಖಾತೆ ಮಾಡಿಕೊಡಿ, ಒಂದು ವೇಳೆ ಅಕ್ರಮವೆಂದು ಕಂಡು ಬಂದಲ್ಲಿ ಮುಂದಿನ ಕ್ರಮಕ್ಕೆ ತಹಸೀಲ್ದಾರ್ ಅವರಿಗೆ ಕಡತ ಕಳುಹಿಸುವಂತೆ ಸಲಹೆ ನೀಡಿದ್ದಾರೆಯೇ ಹೊರತು ಖಾತೆ ಮಾಡಿಕೊಡುವಂತೆ ಸೂಚಿಸಿಲ್ಲವೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement