ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಾಗಿ ಬೆಳೆಗಾರರಿಗೆ ಪರಿಹಾರ ಧನ ವಿತರಣೆ

Vishwanath S
Updated On : 24 Jul 2013, 12:37 pm

ಕ.ಪ್ರ.ವಾರ್ತೆ ,  ಮಾಲೂರು ,  ಜು.23
ಕೃಷಿಯಲ್ಲಿ ನಷ್ಟ ಹೊಂದಿರುವ ರೈತರಿಗೆ ಸರ್ಕಾರ ಪರಿಹಾರ ಧನ ನೀಡುವ ಮೂಲಕ ರೈತರ ನೆರವಿಗೆ ಬಂದಿದ್ದು,ರೈತರು ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಕೃಷಿ ಚಟುವಟಿಕೆಗಳನ್ನು ಮುಂದುವರೆಸಬೇಕು ಎಂದು ಗ್ರಾಮ ಪಂಚಾಯ್ತಿಯ ಹಿರಿಯ ಸದಸ್ಯ ಭುವನಹಳ್ಳಿ ಅಬ್ಬಯ್ಯಪ್ಪ ಹೇಳಿದರು.
ತಾಲೂಕಿನ ಭುವನಹಳ್ಳಿಯಲ್ಲಿ ಕಳೆದ ಬಾರಿ ಮಳೆ ಇಲ್ಲದೆ ಬೆಳೆ ನಷ್ಟ ಹೊಂದಿದ್ದ ರಾಗಿ ಬೆಳೆಗಾರರಿಗೆ ಪರಿಹಾರ ಧನ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡುತ್ತ ಬಯಲುಸೀಮೆ ರೈತರು ನದಿ-ಹೊಳೆ ಇಲ್ಲದೆ ಮಳೆ ನೀರನ್ನು ಆಶ್ರಯಿಸಿ ಕೃಷಿ ಮಾಡುತ್ತಿದ್ದು, ಮಳೆಯ ಕಣ್ಣಾಮುಚ್ಚಾಲೆಯಲ್ಲಿ ಬೆಳೆ ನಷ್ಟವಾಗುತ್ತಿದೆ. ಪ್ರತಿ ವರ್ಷ ಬೆಳೆ ನಷ್ಟದಿಂದ ರೈತ ಕೃಷಿಯಿಂದಲೇ ವಿಮುಕ್ತನಾಗುತ್ತಿದ್ದಾನೆ. ಈ ನಿಟ್ಟಿನಲ್ಲಿ ಸರ್ಕಾರವು ರೈತರಿಗೆ ಧೈರ್ಯ ತುಂಬಲು ಬೆಳೆ ನಷ್ಟಕ್ಕೆ ಪರಿಹಾರ ಧನ ವಿತರಿಸುತ್ತಿದ್ದು, ರೈತರು ಬೆಳೆ ನಷ್ಟದಿಂದ ಎದೆಗುಂದದೆ ಕೃಷಿಯಲ್ಲಿ ಮುಂದುವರೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಕಳೆದ 2012-13ರ ಸಾಲಿನಲ್ಲಿ ರಾಗಿ ಬೆಳೆಯಲ್ಲಿ ನಷ್ಟ ಹೊಂದಿದ್ದ ಗ್ರಾಮದ 76 ರೈತರಿಗೆ ಪರಿಹಾರ ಧನವಾಗಿ ತಲಾ ಒಂದು ಸಾವಿರ ರು. ಗಳನ್ನು ಗ್ರಾಮ ಪಂಚಾಯ್ತಿಯ ಲೆಕ್ಕಿಕ ಮುನಿಶೆಟ್ಟಿ ರವರು ವಿತರಿಸಿದರು. ಮುಖಂಡರಾದ ಸಂಪಂಗಿ, ವೆಂಕಟಾಚಲಪತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement