ಶಾಸಕರ ಭರವಸೆ: ವಿದ್ಯಾರ್ಥಿಗಳ ಪ್ರತಿಭಟನೆ ವಾಪಸು
ಗುಡಿಬಂಡೆ: ಕಳದ 2 ದಿನಗಳಿಂದ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಆದರ್ಶ ಶಾಲೆ ವಿದ್ಯಾರ್ಥಿಗಳು ನಡಸುತ್ತಿದ್ದ ಪ್ರತಿಭಟನೆ ಶಾಸಕರ ಭರವಸೆ ಮೇರೆಗೆ ಮುಕ್ತಾಯ ಕಂಡಿತು.
ಪ್ರಸ್ತುತ ತಿಂಗಳ 22ನೇ ಸೋಮವಾರದಿಂದ ಶಿಕ್ಷರನ್ನು ನೇಮಿಸುವಂತೆ ಆದರ್ಶ ಶಾಲೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಸ್ಥಳಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಜಿತ್ ಪ್ರಸಾದ್ ಆಗಮಿಸಿದ್ದರೂ ಯಾವುದೇ ಪರಿಹಾರ ದೊರೆತಿಲ್ಲವೆಂದು ಪ್ರತಿಭಟನೆ ಮುಂದುವರೆಸಿದರು.
ಶಾಸಕರ ಭರವಸೆ: ಸಮಸ್ಯೆಯ ಬಗ್ಗೆ ಅರಿತ ಬಾಗೇಪಲ್ಲಿ ಕ್ಷೇತ್ರದ ಎಸ್.ನ್. ಸುಬ್ಬಾರೆಡ್ಡಿ ಇನ್ನು 2 ದಿನಗಳೊಳಗೆ ಶಿಕ್ಷಕರನ್ನು ನಮಿಸುವುದಾಗಿ, ಇಲ್ಲವೇ ನಾನು ನಿಮ್ಮೊಂದಿಗೆ ಸೋಮವಾರದಿಂದ ಪ್ರತಿಭಟನೆ ನಡೆಸುವುದಾಗಿ ಭರವಸೆ ನೀಡಿದ ನಂತರ ಪೋಷಕರು ಪ್ರತಿಭಟನೆಗೆ ತೆರೆ ಎಳೆದರು.