ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶೋಷಿತರಿಗೆ ಸವಲತ್ತು ತಲುಪಿಸಲು ಯತ್ನ

Vishwanath S
Updated On : 24 Jul 2013, 12:36 pm

ಕ.ಪ್ರ.ವಾರ್ತೆ ,  ಕೋಲಾರ ,  ಜು.23
ಶೋಷಿತ ವರ್ಗಗಳಿಗೆ ತಲುಪಬೇಕಾದ ಸರ್ಕಾರಿ ಸವಲತ್ತುಗಳನ್ನು ಎಂದಿನಂತೆ ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಡೆಯುತ್ತದೆ ಎಂದು ಶಾಸಕ ವರ್ತೂರು ಪ್ರಕಾಶ್ ಹೇಳಿದರು.
ತಾಲೂಕಿನ ಕುರುಗಲ್ ಗ್ರಾಮದಲ್ಲಿ ಜೆಡಿಎಸ್ ತೊರೆದ ಕೆಲ ಮುಖಂಡರನ್ನು ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಕ್ಷೇತ್ರದಲ್ಲಿ ಸಮಾನತೆಯ ವಾತಾವರಣವನ್ನು ಕಳೆದ 5 ವರ್ಷದ ಹಿಂದೆಯೇ ತಾವು ನಿರ್ಮಾಣ ಮಾಡಿದ್ದು, ಶೋಷಿತ ವರ್ಗಗಳ ಏಳಿಗೆಯೇ ತಮ್ಮ ಗುರಿಯಾಗಿರುವುದರಿಂದ ಆ ವರ್ಗಗಳ ಹಿತರಕ್ಷಣೆ ನನ್ನ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಳೆದ ಬಾರಿ ಶಾಸಕನಾದ ಸಂದರ್ಭದಲ್ಲೂ ಈ ವರ್ಗಗಳಿಗೆ ಸಲ್ಲಬೇಕಾದ ಸವಲತ್ತುಗಳನ್ನು ದೊರಕಿಸಿಕೊಟ್ಟಿದ್ದೇನೆ, ಈ ವರ್ಗಗಳ ಆರ್ಥಿಕಾಭಿವೃದ್ಧಿಗೆ ಶ್ರಮಿಸಿದ್ದು, ಮುಂದಿನ ದಿನಗಳಲ್ಲೂ ಶೋಷಿತ ಮತ್ತು ಮುಂದುವರೆದ ಸಮಾಜಗಳ ಕಷ್ಟ ಸುಖಗಳಲ್ಲಿ ಭಾಗಿಯಾಗುವುದಾಗಿ ಸ್ಪಷ್ಟಪಡಿಸಿದರು.
ಒಂದೇ ಜಾತಿಯ ಬೆಂಬಲದಿಂದ ಶಾಸಕನಾಗುವುದು ಅಸಾಧ್ಯದ ಮಾತು, ಎಲ್ಲಾ ವರ್ಗಗಳ ಜನತೆಯ ಆಶೀರ್ವಾದ ಇದ್ದಲ್ಲಿ ಮಾತ್ರ ರಾಜಕೀಯ ಅಧಿಕಾರ ಸಾಧ್ಯ ಎಂದರಲ್ಲದೆ ನನಗೆ ಮತ ನೀಡಿದವರು, ನೀಡದವರನ್ನು ಸಮಾನ ದೃಷ್ಟಿಯಿಂದ ಕಾಣುತ್ತೇನೆ. ಒಬ್ಬ ಶಾಸಕನಾಗಿ ನನ್ನ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸುವುದಾಗಿ ತಿಳಿಸಿದರು.
ವಿಧಾನಸಭೆ ಚುನಾವಣೆ ಮುಗಿದು ಇನ್ನು ಮೂರು ತಿಂಗಳೂ ಮುಗಿದಿಲ್ಲ, ಆಗಲೇ ತಮ್ಮ ಬಣದತ್ತ ಬೇರೆ ಪಕ್ಷದವರು ಒಲವು ತೋರುತ್ತಿದ್ದಾರೆ. ಜನಸೇವೆಗಾಗಿ ಯಾರೇ ತಮ್ಮ ಬಣಕ್ಕೆ ಬಂದರೂ ಸೇರಿಸಿಕೊಳ್ಳುವುದಾಗಿ ಪ್ರಕಟಿಸಿದರು.
ಕುರುಗಲ್ ಗ್ರಾಮದ ಮುಖಂಡರಾದ ಕೆ.ಆರ್. ಮಂಜುನಾಥ್, ಶ್ರೀನಿವಾಸ್, ಶ್ರೀರಾಮ್, ಮುನಿಸ್ವಾಮಿ, ಮುನಿರಾಜು ಜೆಡಿಎಸ್ ತೊರೆದು ಶಾಸಕರ ಬಣ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಬೆಗ್ಲಿ ಪ್ರಕಾಶ್, ನಗರಸಭೆ ಮಾಜಿ ಅಧ್ಯಕ್ಷರಾದ ರಘುರಾಂ, ವಿ.ಪ್ರಕಾಶ್, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜಣ್ಣ, ಸದಸ್ಯ ಸೋಮಶೇಖರ್, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣೇಗೌಡ, ಮುನಿರಾಜು, ಅಪ್ಪಿ, ಸ್ಥಳೀಯರಾದ ತಮ್ಮಣ್ಣ, ಸುಬ್ರಮಣಿ, ಮಲ್ಲೇಶ್, ರಮೇಶ್, ಆನಂದ್, ಕೃಷ್ಣಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement