ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸರ್ಕಾರಿ ನೌಕರರ ಚುನಾವಣೆ ಫಲಿತಾಂಶ

Vishwanath S
Updated On : 24 Jul 2013, 12:40 pm

ಗೌರಿಬಿದನೂರು:  ತೀವ್ರ ಕುತೂಹಲ ಮೂಡಿಸಿದ್ದ ಸರ್ಕಾರಿ ನೌಕರರ ಸಂಘದ ಚುನಾವಣೆ ಪ್ರಕ್ರಿಯೆ ಮುಗಿದಿದ್ದು, ತಾಲ್ಲೂಕಿನ ಬಹುತೇಕ ಇಲಾಖೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ. ಶಿಕ್ಷಣ ಇಲಾಖೆ ಪ್ರಾಥಮಿಕ ಶಾಲಾ ಶಿಕ್ಷಕರ 3 ಸ್ಥಾನ, ಪ್ರೌಢಶಾಲೆ ಶಿಕ್ಷಕರ 1 ಸ್ಥಾನ, ಕಂದಾಯ ಇಲಾಖೆಯ 2 ಸ್ಥಾನ, ರೇಷ್ಮೆ ಇಲಾಖೆಯ 1 ಸ್ಥಾನ, ತೋಟಗಾರಿಕೆ ಇಲಾಖೆಯ 1 ಸ್ಥಾನ, ಭೂ ಮಾಪನ ಮತ್ತು ನೋಂದಣಿ ಇಲಾಖೆಯ 1 ಸ್ಥಾನಕ್ಕೆ ಚುನಾವಣೆ ನಡೆಯಿತು. ಪ್ರಾಥಮಿಕ ಶಿಕ್ಷಕರ ವಿಭಾಗದಿಂದ ಎನ್.ಆರ್. ಮಂಜುನಾಥ್, ಎನ್.ಜಿ.ರೆಡ್ಡಿಪ್ಪ, ಜನಾರ್ದನ ಮೂರ್ತಿ ಆಯ್ಕೆಯಾದರೆ, ಪ್ರೌಢ ಶಾಲೆ ವತಿಯಿಂದ ನಾಗರಾಜರಾವ್, ಕಂದಾಯ ಇಲಾಖೆ ವತಿಯಿಂದ ನಾಗೇಶ್, ಹಾಗೂ ಸೂರ್ಯನಾರಾಯಣ, ಭೂ ಮಾಪನ ಇಲಾಖೆ ವತಿಯಿಂದ ವಸಂತ್ ಆಯ್ಕೆಯಾಗಿದ್ದಾರೆ. ತಾಲೂಕು ನೌಕರರ ಸಂಘದ ಸದಸ್ಯ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಆಯ್ಕೆಯಾಗಿರುವ 25 ಸದಸ್ಯರ ನಡುವೆ ಅಧ್ಯಕ್ಷ ಖಜಾಂಚಿ ಹಾಗೂ ರಾಜ್ಯ ಸಮಿತಿ ಸದಸ್ಯರ ಸ್ಥಾನಗಳಿಗೆ ಮತ್ತೊಂದು ಸುತ್ತಿನ ಸ್ಪರ್ಧೆ ನಡೆಯಲಿದೆ.

ಇಂದು ಪ್ರತಿಭಟನೆ
ಮಾಲೂರು:  ಆದಾಯ ತೆರಿಗೆ ಇಲಾಖೆಯವರು ಬೆಂಗಳೂರಿನ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿಕ್ಷಣ ಸಂಸ್ಥೆಗಳ ಮೇಲೆ ನಡೆಸಿರುವ ದಾಳಿ ಖಂಡಿಸಿ ತಾಲೂಕು ಒಕ್ಕಲಿಗರ ಸಂಘ ಬುಧವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ.
ಬೆಳಿಗ್ಗೆ 11.30ಕ್ಕೆ ಪಟ್ಟಣದ ರೇಲ್ವೆ ನಿಲ್ದಾಣ ಬಳಿಯ ಬಿಜಿಎಸ್ ವಿದ್ಯಾ ಸಂಸ್ಥೆಯಿಂದ ಹೊರಡುವ ಪ್ರತಿಭಟನಾ ಮೆರವಣಿಗೆ ತಾಲೂಕು ಕಚೇರಿಗೆ ತೆರಳುವುದು. ಬಳಿಕ ಪ್ರತಿಭಟನಾ ಧರಣಿ ನಡೆಸಲಾಗುವುದು.

ಅಂಗಡಿ ಶೆಲ್ಟರ್ ಮುರಿದು ಕಳ್ಳತನ
ಕೋಲಾರ: ನಗರದ ಶಾರದಾ ಚಿತ್ರ ಮಂದಿರ ರಸ್ತೆಯಲ್ಲಿ ಜು.22ರ ರಾತ್ರಿ ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿದೆ. ಪ್ರಜಾ ಹಾರ್ಡ್‌ವೇರ್ ಅಂಗಡಿಯ ಶೆಲ್ಟರ್ ಮುರಿದು ಕಳ್ಳರು 700 ರು.ನಗದು ಹಾಗೂ 3500 ರು. ಬೆಲೆ ಪೈಂಟ್‌ಗಳನ್ನು ದೋಚಿದ್ದಾರೆ.ಹಾರ್ಡ್‌ವೇರ್ ಅಂಗಡಿಯ ಪಕ್ಕದಲ್ಲಿನ ಅನ್ವರ್‌ಖಾನ್ ಎಂಬುವರಿಗೆ ಸೇರಿದ ಮೊಬೈಲ್ ಅಂಗಡಿಯಲ್ಲೂ ಕಳ್ಳರು 5200 ರು. ಬೆಲೆ 3 ಮೊಬೈಲ್‌ಗಳನ್ನು ಕಳ್ಳತನ ಮಾಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಪ್ರತ್ಯೇಕ ಅಪಘಾತ; ಇಬ್ಬರು ಸಾವು
ಕೋಲಾರ: ಜಿಲ್ಲೆಯ ಎರಡು ಕಡೆ ಕಳೆದ ರಾತ್ರಿ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಹತ್ತು ಕೆಲವರು ಗಾಯಗೊಂಡಿದ್ದಾರೆ. ಕೋಲಾರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಬಸವನತ್ತ ಗ್ರಾಮದ ಬಳಿ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಎ.ಕೊತ್ತಪಲ್ಲಿ ಗ್ರಾಮದ ದೇವರಾಜ್ ತೀವ್ರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ. ಕೋಲಾರ ತಾಲೂಕಿನ ಮಡೇರಹಳ್ಳಿಯ ಸಮೀಪ ಟಿಪ್ಪರ್ ರಸ್ತೆ ಬದಿಗೆ ಉರುಳಿಬಿದ್ದ ಪರಿಣಾಮ ಮಾಲೂರು ತಾಲೂಕಿನ ಕೊಮ್ಮನಹಳ್ಳಿಯ ನಿವಾಸಿ ನಾಗೇಶ್ ಮೃತಪಟ್ಟು ಸುರೇಶ್ ಮತ್ತು ರಾಜು ಗಾಯಗೊಂಡಿದ್ದಾರೆ. ಟಿಪ್ಪರ್ ಚಾಲಕ ವಾಹನವನ್ನು ಅತಿ ವೇಗದಿಂದ ಓಡಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಪದವಿ ತರಗತಿ ಉದ್ಘಾಟನೆ
ಗೌರಿಬಿದನೂರು:  ವಿದ್ಯಾರ್ಥಿಗಳು ಶ್ರದ್ಧೆ, ಭಕ್ತಿ, ತಾಳ್ಮೆ, ಏಕಾಗ್ರತೆಯಿಂದ ವಿದ್ಯಾರ್ಜನೆ ಮಾಡಬೇಕು ಎಂದು ನ್ಯಾಷನಲ್ ಕಾಲೇಜು ಶಿಕ್ಷಣ ಸಂಸ್ಥೆ ಅಧ್ಯಕ್ಷ, ರಾಜ್ಯ ಪ್ರಶಸ್ತಿ ಪುರಸ್ಕೃತ ಎ.ಎಚ್.ರಾಮರಾವ್ ಹೇಳಿದರು.
ಪಟ್ಟಣದ ನ್ಯಾಷನಲ್ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಬಿ.ಎ., ಬಿ.ಕಾಂ,, ಬಿ.ಎಸ್ಸಿ. ಡಿಗ್ರಿ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲರಾದ ಪ್ರೊ. ಸಂಪತ್‌ಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆ ಗೌರವ ಕಾರ್ಯದರ್ಶಿ ಎಸ್.ಎನ್.ನಾಗರಾಜ ರೆಡ್ಡಿ, ತಾಪಂ ಅಧ್ಯಕ್ಷ ನಿರಂಜನ್, ಪದವಿಪೂ ಕಾಲೇಜು ಪ್ರಾಂಶುಪಾಲರಾದ ಸಿ.ನಾಗರಾಜ್, ಪದವಿ ಕಾಲೇಜು ಉಪ ಪ್ರಾಂಶುಪಾಲ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಪ್ರಸಾದ್ ನೇಮಕ
ಚಿಂತಾಮಣಿ:  ಕಾಂಗ್ರೆಸ್ ಎಸ್.ಟಿ. ಘಟಕಕ್ಕೆ ರಾಜ್ಯ ಸಂಚಾಲಕರಾಗಿ ತಾಲೂಕಿನ ಯಗವಕೋಟೆ ಗ್ರಾಮದ ಆ.ನಾ.ಪ್ರಸಾದ್ ಅವರನ್ನು ಕೆಪಿಸಿಸಿ ಪರಿಶಿಷ್ಟ ಪಂಗಡಗಳ ವಿಭಾಗ ರಾಜ್ಯಾಧ್ಯಕ್ಷ ಟಿ.ಈಶ್ವರ್ ನೇಮಿಸಿ ಆದೇಶ ಹೊರಡಿಸಿದ್ದಾರೆ.

ರಸ್ತೆ ಸಂಪರ್ಕ ಕಲ್ಪಿಸಲು ಒತ್ತಾಯ
ಗೌರಿಬಿದನೂರು:  ತಾಲೂಕಿನ ಚೀಲೆನಹಳ್ಳಿಯಿಂದ ಮಿಂಡೇನಹಳ್ಳಿಯವರೆಗೆ ಮಣ್ಣು ರಸ್ತೆಯಾಗಿದ್ದು, ಪ್ರಸಿದ್ಧ ರಂಗನಾಥಸ್ವಾಮಿ ಬೆಟ್ಟದ ಮಾರ್ಗವಾಗಿ ತೋಂಡೆಬಾವಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಡಾಂಬರೀಕರಣಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಚೀಲೆನಹಳ್ಳಿ ಶ್ರೀರಂಗನಾಥಸ್ವಾಮಿ ದೇವಾಲಯ ಪ್ರಸಿದ್ಧವಾಗಿದೆ. ಇಲ್ಲಿಗೆ ದೂರದ ಬೆಂಗಳೂರು, ಮೈಸೂರು, ತುಮಕೂರು ಜಿಲ್ಲೆ ಹಾಗೂ ಜಿಲ್ಲೆಯ ಅನೇಕ ಭಾಗಗಳಿಂದ ದೇವರ ದರ್ಶನಕ್ಕಾಗಿ ಭಕ್ತರು. ಆಗಮಿತ್ತಾರೆ. ಆದರೆ, ಸೂಕ್ತ ರಸ್ತೆ ಸೌಲಭ್ಯವಿಲ್ಲವಾಗಿದೆ ಎಂದಿದ್ದಾರೆ. ಈ ಭಾಗದ ರೈತರು, ವ್ಯಾಪಾರಿಗಳು, ಕೂಲಿ ಕಾರ್ಮಿಕರು, ತೊಂಡೆಬಾವಿ ಮೂಲಕ ಸಂಚರಿಸಿ, ಕಡಿಮೆ ಸಮಯದಲ್ಲಿ ತಾಲೂಕು ಕೇಂದ್ರಕ್ಕೆ ಹಾಗೂ ದೊಡ್ಡಬಳ್ಳಾಪುರ, ಬೆಂಗಳೂರಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ ಎಂದಿದಿದ್ದಾರೆ. ಶೀಘ್ರವಾಗಿ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಗ್ರಾಮದ ಸುಬಾನ್ ಬೇಗ್, ಅಭೀಬ್, ವೆಂಕಟೇಶ್, ಪಾಪಣ್ಣ, ಮಿಂಡೇನಹಳ್ಳಿ ಪ್ರಕಾಶ್, ಬಸಪ್ಪ ಹಾಗೂ ಈ ಭಾಗದ ಜನರು ಒತ್ತಾಯಿಸಿದ್ದಾರೆ.

ಗುರುತಿನ ಚೀಟಿ ವಿತರಣೆ
ಚಿಂತಾಮಣಿ:  ಪಟ್ಟಣದ ಎಂ.ಸಿ. ಆಂಜನೇಯರೆಡ್ಡಿ ಕಲ್ಯಾಣ ಮಂಟಪದಲ್ಲಿ 25 ರವರೆಗೆ ರಾಜ್ಯ ವಕ್ಕಲಿಗರ ಸಂಘದ ವತಿಯಿಂದ ಸಂಘ ಸದಸ್ಯರಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯಕ್ರಮ ಬೆಳಿಗ್ಗೆ 10 ರಿಂದ ಸಂಜೆ 5 ತನಕ ನಡೆಯಲಿದೆ ಎಂದು ವಕ್ಕಲಿಗರ ಸಂಘದ ಮುಖಂಡ, ರಾಯಲ್ ವಿದ್ಯಾ ಸಂಸ್ಥೆ ಅಧ್ಯಕ್ಷ ಕೆ.ರಾಮಕೃಷ್ಣ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement