ಸ್ವರಚಿತ ಕವನ ಸ್ಪರ್ಧೆ: ಚಿಂತಾಮಣಿಯ ಹಲವು ಕವಿಗಳ ಆಯ್ಕೆ
ಚಿಂತಾಮಣಿ: ಬೆಂಗಳೂರಿನ ರಂಗ ಶ್ರೀ ಕಲಾಸಂಸ್ಥೆಯು ಆಯೋಜಿಸಿದ್ದ ರಾಜ್ಯ ಮಟ್ಟದ ಸ್ವರಚಿತ ಕವನ ಸ್ಪರ್ಧೆಯಲ್ಲಿ ಚಿಂತಾಮಣಿಯ ಹಲವು ಕವಿಗಳು ಆಯ್ಕೆಯಾಗಿದ್ದಾರೆ. ತಾಲೂಕು ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಾಗತಿ ವಿ. ವೆಂಕಟರತ್ನಂ, ಕಾರ್ಯದರ್ಶಿ ಕೆ.ಎಸ್. ನೂರುಲ್ಲಾ ಹಾಗೂ ಉದಯೋನ್ಮುಖ ಬರಹಗಾರ ಕೆ.ಎನ್. ಅಕ್ರಂಪಾಷ ಅವರ ಮಂದಹಾಸ, ಭ್ರೂಣವು ಮಾತನಾಡಿಯು,ತಾಯಿ ಎಂಬ ಸ್ವರಚಿತ ಕವನಗಳು ಆಯ್ಕೆಗೊಂಡಿವೆ. ಈ ಸಂಬಂಧವಾಗಿ ಅವರನ್ನು ಜುಲೈ 24 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿರುವ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಂಗ ಶ್ರೀ ಕಾವ್ಯ ಸೌರಭ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಸಂಸ್ಥೆಯ ರಾಜ್ಯಾಧ್ಯಕ್ಷರಾದ ರಾಜ್ಯ ಪ್ರಶಸ್ತಿ ಪುರಸ್ಕೃತ ಬಿ.ಎನ್. ಹರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.