'ಆರೋಗ್ಯ ಶಿಬಿರ ಸದುಪಯೋಗವಾಗಲಿ'
ಗೌರಿಬಿದನೂರು: ಸಂಘ ಸಂಸ್ಥೆಗಳು ಸೇವಾ ಮನೋಭಾವದಿಂದ ಮಾಡುವ ಉಚಿತ ವೈದ್ಯ ಶಿಬಿರದ ಪ್ರಯೋಜನವನ್ನು ಗ್ರಾಮೀಣ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಎಸಿಸಿ ಸಿಮೆಂಟ್ ಕಾರ್ಖಾನೆಯ ವ್ಯವಸ್ಥಾಪಕ ಮನೋಜ್ ಸೂರ್ಯವಂಶಿ ಕಿವಿಮಾತು ಹೇಳಿದ್ದಾರೆ.
ಇತ್ತೀಚಿಗೆ ಬೇವಿನಹಳ್ಳಿ ಗ್ರಾಮ ಪಂಚಾಯ್ತಿ ಕಚೆರಿ ಆವರಣದಲ್ಲಿ ಎಸಿಸಿ ಸಿಮೆಂಟ್ ಕಾರ್ಖಾನೆ, ಮಾನಸ ಆಸ್ಪತ್ರೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
'ನಮ್ಮ ಗ್ರಾಮ' ಕಾರ್ಯಕ್ರಮದಡಿ ಕಾರ್ಖಾನೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚರಂಡಿಗಳನ್ನು ಶುಭ್ರ ಮಾಡಲಾಗುವುದು ಈ ಕಾರ್ಯಕ್ರಮಕ್ಕೆ ಜನರು, ಗ್ರಾಮ ಪಂಚಾಯ್ತಿ ಸಹಕಾರ ನೀಡಬೇಕೆಂದರು. ಪರಿಸರ ಸ್ವಚ್ಛತೆ ಹಾಗೂ ವ್ಯಕ್ತಿಗತ ಶುಭ್ರತೆಯಿಂದ ಇಡಿ ಕುಟುಂಬ ಆರೋಗ್ಯವಾಗಿರಲುಸಾಧ್ಯ ಎಂದು ವೈದ್ಯ ಮಂಜುನಾಥ್ ಅಭಿಪ್ರಾಯ ಪಟ್ಟರು. ಶಿಬಿರದಲ್ಲಿ 110 ಮಂದಿ ರೋಗಿಗಳನ್ನು ಪರೀಕ್ಷಿಸಿ ಉಚಿತವಾಗಿ ಔಷಧ ನೀಡಲಾಯಿತು. ಡಾ.ಮಂಜುನಾಥ್, ಡಾ.ಕಲ್ಯಾಣಿ ಮತ್ತಿತರೆ ವೈದ್ಯರ ತಂಡ ತಪಾಸಣೆ ನಡಿಸಿದರು. ಮೂರ್ತಿ, ಸಿದ್ದೇಗೌಡ, ರಷೀದ್, ರಾಜಗೋಪಾಲ್, ಹುಸೈನೀ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.