ರಣಬೇರಮ್ಮ ಹೂವಿನ ಆನಂದೋತ್ಸವ
ಕ.ಪ್ರ.ವಾರ್ತೆ , ಮುಳಬಾಗಲು , ಜು.30
ಪಟ್ಚಣದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಪೂರೈಸಲು ಹಾಗೂ ಒಳಚರಂಡಿ ವ್ಯವಸ್ಥೆ ಮಾಡಲು ಸರ್ಕಾರದಿಂದ 26 ಕೋಟಿ ರು.ಗಳನ್ನು ಮಂಜೂರು ಮಾಡಿಸಿರುವುದಾಗಿ ಶಾಸಕ ಕೊತ್ತೂರು ಮಂಜುನಾಥ್ ನುಡಿದರು.
ಪಟ್ಟಣದ ಗ್ರಾಮ ದೇವತೆ ರಣಬೇರಮ್ಮ ದೇವರ 61 ವಾರ್ಷಿಕ ಹೂವಿನ ಆನಂದೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಗ್ರಾಮ ದೇವತೆ ರಭಬೇರಮ್ಮ ದೇವಾಲಯಕ್ಕೆ ಮುಂದಿನ ವರ್ಷದೊಳಗೆ ರಾಜಗೋಪುರ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಪಟ್ಟಣದ ಶ್ರಿನಿವಾಸಪುರ ರಸ್ತೆಯ ತಿರುಪತಿ ಗಂಗಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ರಣಬೇರಮ್ಮ ದೇನಾಲಯದ ಮುಖ್ಯ ಅರ್ಚಕ ಭಿಂದು ಮಾಧವ, ಶ್ರೀನಾವಾಸವಿಠಲ, ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಮು.ಕೃಪದ್ಮನಾಭರಾವ್, ಕಾಫಿ ಪುಡಿ ಭೀಮಣ್ಣ, ಧನಂಜಯ,ಗೀತಮ್ಮ, ಗುಬ್ಬಿ ನರಸಿಂಹಮೂರ್ತಿ ಮುಂತಾದವರು ಭಾಗವಹಿಸಿದ್ದರು.
'ಕಲಿಕೆಗೆ ಬಡತನ ಅಡ್ಡಿಯಾಗದು'
ಗೌರಿಬಿದನೂರು: ಅಕ್ಷರ ಕಲಿಕೆಗೆ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ. ಕಲಿಯಲು ಇಚ್ಛಿಸುವ ಪ್ರತಿಯೊಬ್ಬರಲ್ಲಿಯೂ ತನ್ನದೇ ಆದ ನಿರ್ದಿಷ್ಟ ಗುರಿ ಹೊಂದಿದ್ದರೆ ಮಾತ್ರ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಪಿಎಲ್ಡಿ ಬ್ಯಾಂಕ್ ವ್ಯವಸ್ಥಾಪಕ ಎಚ್.ಮುರಳೀಧರ ಅಭಿಪ್ರಾಯಪಟ್ಟರು. ವೈಚಕೂರಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ತಟ್ಟೆ ಮತ್ತು ಲೋಟ ವಿತರಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿನ ಬಹುತೇಕ ಮಕ್ಕಳಲ್ಲಿ ಉತ್ತಮ ಪ್ರತಿಭೆ ಅಡಕಗೊಂಡಿರುತ್ತದೆ. ಆದರೆ, ಅದನ್ನು ಸೂಕ್ತ ರೀತಿಯಲ್ಲಿ ಗುರ್ತಿಸಿ ಅವರ ಸಾಧನೆಗೆ ಪ್ರೇರಣೆ ನೀಡಿದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಗ್ರಾಪಂ ಸದಸ್ಯ ಕೆ.ಎನ್.ನಾಯಕ್ ಮಾತನಾಡಿ, ದಾನಿಗಳು ನೀಡಿದ ವಸ್ತುಗಳನ್ನು ಸಮರ್ಪಕವಾಗಿ ಬಳಸಿ ಹಾಳು ಮಾಡದಂತೆ ಕಾಪಾಡಿಕೊಳ್ಳುವುದು ಶಾಲೆಯ ಪ್ರತಿಯೊಬ್ಬರ ಕರ್ತವ್ಯ ಎಂದು ಕಿವಿಮಾತು ಹೇಳಿದರು.ಸಾಮಾಜಿಕ ಕಾರ್ಯಕರ್ತ ಪ್ರೇಮ್ಸಿಂಗ್, ಅನನ್ಯ ಆಸ್ಪತ್ರೆ ಮಾಲೀಕ ಹರೀಶ್ರೆಡ್ಡಿ, ಶಿಕ್ಷಕ ಎಂ.ಎನ್.ವಿಜ ಯಕುಮಾರ್, ಅಂಗನವಾಡಿ ಕಾರ್ಯಕರ್ತರು, ಗ್ರಾಮಸ್ಥರು ಹಾಜರಿದ್ದರು.
ಬೆದರಿಸಿ ಹಣ ಕಸಿದು ಪರಾರಿ
ಕೋಲಾರ: ನಕಲಿ ಕೀಟನಾಶಕ ಔಷಧಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ಸಂಘದ ಮುಖಂಡ ಕೆ.ಶ್ರೀನಿವಾಸಗೌಡ ಅವರು ಪ್ರಕಾಶ್ ಎಂಬವರಿಂದ ಬಯೋ ಮ್ಯಾಜಿಕ್ ಔಷಧಿಗಳನ್ನು ಕಸಿದು, ಇದು ನಕಲಿ ಔಷಧಿಯಾಗಿದೆ. ಆದ್ದರಿಂದ 25000 ಕೊಡದಿದ್ದಲ್ಲಿ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿ, 23000 ಕಸಿದು ಪರಾರಿಯಾಗಿರುವ ಘಟನೆ ತಾಲೂಕಿನ ಕಾಮದೇನಹಳ್ಳಿಯಲ್ಲಿ ಜು.27ರಂದು ನಡೆದಿದೆ.ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇಲಾಖಾ ಪರೀಕ್ಷೆಗೆ ಉಚಿತ ತರಬೇತಿ
ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಇಲಾಖಾ ಪರೀಕ್ಷೆಗೆ ಕುಳಿತಿರುವ ಅಭ್ಯರ್ಥಿಗಳಿಗೆ ಆ.1 ರಿಂದ ಪ್ರತಿ ದಿನ ಸಂಜೆ 6 ಗಂಟೆಯಿಂದ ನೌಕರರ ಭವನದಲ್ಲಿ ಉಚಿತ ತರಬೇತಿ ನೀಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ್ ತಿಳಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ಸೂಕ್ತ ಸಂಪನ್ಮೂಲವ್ಯಕ್ತಿಗಳಿಂದ ಇಲಾಖಾ ಪರೀಕ್ಷಾ ತರಬೇತಿ ನೀಡಲಿದ್ದು, ಪರೀಕ್ಷೆ ತೆಗೆದುಕೊಂಡಿರುವ ನೌಕರರು ತರಬೇತಿಯ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.