2.48 ಕೋಟಿ ಕ್ರಿಯಾ ಯೋಜನೆಗೆ ಅಸ್ತು
ಕ.ಪ್ರ.ವಾರ್ತೆ , ಕೋಲಾರ , ಜು.31
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸಿದ್ಧಪಡಿಸಿರುವ 2 ಕೋಟಿ 48 ಲಕ್ಷದ 56 ಸಾವಿರ ರು. ಕ್ರಿಯಾ ಯೋಜನೆಗೆ ತಾಲೂಕು ಪಂಚಾಯಿತಿ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಕೋಲಾರ ತಾಪಂ ಸಭಾಂಗಣದಲ್ಲಿ ಬುಧವಾರ ತಾಪಂ ಅಧ್ಯಕ್ಷೆ ಭಾಗ್ಯಲಕ್ಷ್ಮೀ ನಾರಾಯಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸರ್ವಸದಸ್ಯರ ಸಭೆಯಲ್ಲಿ 13ನೇ ಹಣಕಾಸಿನ ಯೋಜನೆಯಡಿ 2012-13ನೇ ಸಾಲಿಗೆ ಬಿಡುಗಡೆ ಆಗಿರುವ 48.56 ಲಕ್ಷ, 2013-14ನೇ ಅನುದಾನ 1 ಕೋಟಿ ಹಾಗೂ ಅಭಿವೃದ್ಧಿ ಅನುದಾನ 1 ಕೋಟಿ ಸೇರಿದಂತೆ ಒಟ್ಟು 2 ಕೋಟಿ 48 ಲಕ್ಷದ 56 ಸಾವಿರ ರು.ಗಳಿಗೆ ತಾಪಂ ಸದಸ್ಯರ ಅಭಿಪ್ರಾಯದಂತೆ ಸಿದ್ಧಪಡಿಸಿರುವ ಕ್ರಿಯಾ ಯೋಜನೆಗೆ ಅನುಮೋದನೆ ದೊರೆಯಿತು.
ಈ ಕ್ರಿಯಾ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಶೇಕಡ 25, ವಿಕಲಚೇತನರ ಪುನಶ್ಚೆತನಕ್ಕೆ ಶೇ.3 ಹಾಗೂ ರಸ್ತೆಗಳ ಅಭಿವೃದ್ಧಿಗೆ ಶೇ.20ರಷ್ಟು ಅನುದಾನ ಖರ್ಚು ಮಾಡಿ ಉಳಿದ ಹಣವನ್ನು ಶಾಶ್ವತ ಕಾಮಗಾರಿಗಳ ಮೂಲಕ ತಾಲೂಕು ಪಂಚಾಯಿತಿಯ ಆಸ್ತಿಯನ್ನು ಅಭಿವೃದ್ಧಿ ಪಡಿಸಲು ಬಳಕೆ ಮಾಡಲಾಗುವುದೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಭಟ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಎಂಜನಿಯರಿಂಗ್ ವಿಭಾಗದ ಎಇಇ ಮಂಜುನಾಥ್ ಮಾತನಾಡಿ, ರಾಜ್ಯ ಸರ್ಕಾರ ಜು.27ರಂದು ಆದೇಶವೊಂದನ್ನು ಹೊರಡಿಸಿ ಇನ್ನು ಮುಂದೆ 1 ಲಕ್ಷ ರು. ವೆಚ್ಚದ ಯಾವುದೇ ಕಾಮಗಾರಿಗೆ ಟೆಂಡರ್ ಕರೆಯಬೇಕೆಂದು ಸೂಚಿಸಿ, ಈ ಹಿಂದೆ 5 ಲಕ್ಷವರೆಗಿನ ಕಾಮಗಾರಿಗೆ ಟೆಂಡರ್ ಕರೆಯಬೇಕೆಂದು ಇದ್ದ ನಿಯಮವನ್ನು ರದ್ದು ಪಡಿಸಿರುವುದರಿಂದ ಸದಸ್ಯರು ಸಹಕಾರ ನೀಡಬೇಕೆಂದು ತಿಳಿಸಿದರು.
ಆಕ್ಷೇಪ: ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ತಾಪಂ ಸದಸ್ಯರಾದ ರಾಮಕೃಷ್ಣಪ್ಪ ಹಾಗೂ ಮುನಿಬೈರಪ್ಪ ಇನ್ನಿತರರು 1 ಲಕ್ಷ ರು. ತುಂಡು ಕಾಮಗಾರಿಗೆ ಟೆಂಡರ್ ಕರೆಯಬೇಕೆಂಬ ಹೊಸ ಮಾರ್ಗಸೂಚಿ ಸರಿಯಿಲ್ಲ. ಇದರಿಂದ ಗುಣಮಟ್ಟದ ಕಾಮಗಾರಿಗೆ ಕಷ್ಟವಾಗುತ್ತದೆ. ಸರ್ಕಾರ ಈ ಮುಂಚಿನ ರೀತಿಯಲ್ಲೇ 5 ಲಕ್ಷ ರು.ವರೆಗಿನ ಕಾಮಗಾರಿಗೆ ಟೆಂಡರ್ ಕರೆಯುವುದನ್ನು ಮುಂದುವರಿಸಬೇಕೆಂದು ಒತ್ತಾಯಿಸಿದರು.
ನಿರ್ಣಯ ಸರ್ಕಾರಕ್ಕೆ: ಇದಕ್ಕೆ ಪ್ರತಿಕ್ರಿಯಿಸಿದ ಎಇಇ ಮಂಜುನಾಥ್, ಸರ್ಕಾರದ ಹೊಸ ಆದೇಶವನ್ನು ಹಿಂದಕ್ಕೆ ಪಡೆಯಲು ಜನಪ್ರತಿನಿಧಿಗಳು ಸಂಬಂಧಪಟ್ಟ ಸಚಿವರ ಮೇಲೆ ಒತ್ತಡ ತರಲು ಯತ್ನಿಸುತ್ತಿದ್ದು, ಸದಸ್ಯರು 1 ಲಕ್ಷ ರು.ವರೆಗಿನ ಕಾಮಗಾರಿಗಳಿಗೆ ಟೆಂಡರ್ ಬೇಡವೆಂದು ನಿರ್ಣಯ ಕೈಗೊಂಡಲ್ಲಿ ಅದನ್ನು ಸರ್ಕಾರಕ್ಕೆ ಕಳುಹಿಸುತ್ತೇವೆಂದರು. ಸಭೆಗೆ ಹಾಜರಿದ್ದ ಸದಸ್ಯರು 1 ಲಕ್ಷ ರು.ವರೆಗಿನ ಕಾಮಗಾರಿಗೆ ಟೆಂಡರ್ ಬೇಡವೆಂದು ಒಕ್ಕೊರಲಿನಿಂದ ತಿಳಿಸಿದಾಗ ಸದಸ್ಯರ ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ತಾಪಂ ಇಒ ಕೆ.ಎಸ್.ಭಟ್ ತಿಳಿಸಿದರು.
ಕೋಲಾರ ತಾಲೂಕಿನಲ್ಲಿ ಮಳೆಯಿಲ್ಲದಿರುವುದರಿಂದ ಟ್ಯಾಂಕರ್ ಮೂಲಕ ಅಗತ್ಯವಿರುವ ಕಡೆ ನೀರು ಸರಬರಾಜು ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಟ್ಯಾಂಕರ್ ಇಲ್ಲವೇ ರೈತರ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡುವುದಕ್ಕೆ ಸರ್ಕಾರ ಕೆಲ ಷರತ್ತುಗಳನ್ನು ಹಾಕಿದ್ದು ಇದರಿಂದ ನೀರು ಸರಬರಾಜಿನಲ್ಲಿ ಸರ್ಕಾರದ ಹಣ ದುರುಪಯೋಗವಾಗುವುದು ತಪ್ಪುತ್ತದೆ ಎಂದು ಕೆ.ಎಸ್.ಭಟ್ ಹೇಳಿದರು.
ಇನ್ನು ಮುಂದೆ ಗ್ರಾಮೀಣ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದಲ್ಲಿ ಸಂಬಂಧಪಟ್ಟ ಗ್ರಾಮದ ನೀರುಗಂಟಿ ಯಾವ ಗ್ರಾಮಕ್ಕೆ ಎಷ್ಟು ಟ್ಯಾಂಕರ್ಗಳು ಬಂದಿವೆ, ಎಷ್ಟು ನೀರು ಸರಬರಾಜು ಮಾಡಲಾಗಿದೆ ಎಂದು ದೃಢೀಕರಣ ಮಾಡಿದಲ್ಲಿ ಮಾತ್ರ ಬಿಲ್ ಪಾವತಿಸಲಾಗುತ್ತದೆ. ಜತೆಗೆ ಲಾಗ್ ಪುಸ್ತಕ ಟ್ಯಾಂಕರ್ ಮಾಲೀಕರು ಕಡ್ಡಾಯವಾಗಿ ಹೊಂದಿರಬೇಕೆಂದು ತಿಳಿಸಿದರು.
ಬಹುತೇಕಸದಸ್ಯರು, ಅಧಿಕಾರಿಗಳು ಗೈರು
ಸರ್ವಸದಸ್ಯರ ಸಭೆಗೆ ತಾಪಂನ 25 ಸದಸ್ಯರ ಪೈಕಿ ಕೇವಲ 15 ಮಂದಿ ಹಾಜರಾಗಿದ್ದರು. ಅಧ್ಯಕ್ಷೆ ಭಾಗ್ಯಲಕ್ಷ್ಮೀ, ಉಪಾಧ್ಯಕ್ಷೆ ಸರಸ್ವತಿ ಸೇರಿ 17 ಮಂದಿ ಸಭೆಯಲ್ಲಿ ಭಾಗವಹಿಸಿದ್ದರಿಂದ ಕೋರಂ ಇದೆ ಎಂದು ಭಾವಿಸಿ ಸಭೆಯನ್ನು ನಡೆಸಲಾಯಿತು. ಈ ವಿಶೇಷ ಸಭೆಗೆ ತಾಪಂ ಇಒ, ಎಇಇ, ಸಭಾ ನಡಾವಳಿಕೆಗಳನ್ನು ದಾಖಲಿಸುವ ಸಿಬ್ಬಂದಿ ಹಾಗೂ ಒಂದಿಬ್ಬರು ತಾಪಂ ಅಧಿಕಾರಿಗಳು ಹೊರತುಪಡಿಸಿದರೆ ಬೇರೆ ಯಾವುದೇ ಇಲಾಖೆಗಳ ಅಧಿಕಾರಿಗಳು ಹಾಜರಿರಲಿಲ್ಲ.