ಟೇಕಲ್ ರೇಲ್ವೆ ಪ್ರಯಾಣಿಕರ ತೀರದ ಗೋಳು
ಟೇಕಲ್: ಟೇಕಲ್ ರೇಲ್ವೆ ನಿಲ್ದಾಣದಿಂದ ದಿನವಹಿ ಸುಮಾರು 20 ರಿಂದ 25 ಪ್ಯಾಸೆಂಜರ್ ರೈಲು ಹಾಗೂ 10 ರಿಂದ15 ಎಕ್ಸ್ಪ್ರೆಸ್ ರೈಲುಗಳು ಓಡಾಡುತ್ತಿದ್ದು, ಟೇಕಲ್ ಸುತ್ತಮುತ್ತಲಿನಿಂದ ಓಡಾಡುವ ಜನಕ್ಕೆ ರೈಲಿನಲ್ಲಿ ಹೋಗಿಬರುವುದೇ ಯಮಯಾತನೆಯಾಗಿದ್ದು, ಮಹಿಳೆಯರಿಗಂತೂ ಹೇಳತೀರದ ಹಿಂಸೆಯಾಗಿದೆ.
ಟೇಕಲ್ನಿಂದ ದಿನಂಪ್ರತಿ 3 ರಿಂದ 4 ಸಾವಿರ ಜನ ಉದ್ಯೋಗಕ್ಕಾಗಿ ಮಾಲೂರು, ದೇವನಗುಂದಿ, ವೈಟ್ಫೀಲ್ಡ್, ಕೆ.ಆರ್.ಪುರಂ, ಹೂಡಿ, ಹಾಗೂ ಬೆಂಗಳೂರು ಸಿಟಿ ರೈಲು ನಿಲ್ದಾಣದವರೆಗೂ ಹೋಗುತ್ತಿದ್ದು, ತುಂಬಿ ತುಳುಕುವ ರೈಲಿಗೆ ಟೇಕಲ್ನಿಂದ ಹತ್ತಲು ಆಗದ ಸ್ಥಿತಿಯಿದೆ. ಅದರಲ್ಲೂ ರೈಲಿನ ಬೋಗಿಯ ಬಾಗಿಲ ಬಳಿಯಲ್ಲೆ ಸುಮಾರು ಹುಡುಗರು ಗುಂಪು ಗೂಡಿ ಹತ್ತುವುದಕ್ಕೂ ಸಾಧ್ಯವಾಗದಂತೆ ನಿಂತಿರುತ್ತಾರೆ. ಇನ್ನು ಬೋಗಿಯೊಳಗೆ ಸುಮಾರು 8 ಜನ ಕೂರುವ ಸ್ಥಳದಲ್ಲಿ 16 ರಿಂದ 20 ಜನ, ಒಬ್ಬರು ಕೂರುವ ಸ್ಥಳದಲ್ಲಿ ಇಬ್ಬರಿಂದ ಮೂರು ಜನ ಕೂರುತ್ತಾರೆ. ಈ ಬಗ್ಗೆ ದಿನನಿತ್ಯ ಪ್ರಯಾಣಿಕರ ಗೋಳು ಹೇಳತೀರದಾಗಿದೆ.
ಬೋಗಿಯ ಕಿಟಕಿಯ ಕಂಬಿಗಳನ್ನು ಹಿಡಿದು ಹುಡುಗರು ದಿನವಹಿ ಓಡಾಡುವುದು ರೈಲ್ವೆ ಪೊಲೀಸರಿಗೆ ಕಾಣಸಿಗುತ್ತಿಲ್ಲ. ಹೀಗೆ ಹತ್ತಲು ಇಳಿಯಲು ಹೋಗಿ ಕೆಲವರು ಮೃತಪಟ್ಟಿರುವುದು ಉಂಟು.
ಈ ಹಿಂದೆ ನಮ್ಮ ಜಿಲ್ಲೆಯವರೆ ಆದ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರು ಕೆಲವು ರೈಲುಗಳ ಬೋಗಿಗಳ ಸಂಖ್ಯೆ ಹೆಚ್ಚಳ ಮಾಡುತ್ತೇನೆ ಎಂದು ಹಾಗೂ ಮಾರಿಕುಪ್ಪಂನಿಂದ ಬೆಂಗಳೂರಿಗೆ ಇನ್ನೂ 2 ರೈಲುಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು.
ಅದು ಯಾವುದೂ ಕೈಗೂಡಿಲ್ಲ. ಕೇಂದ್ರ ರೇಲ್ವೆ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಯವರು ಇತ್ತ ಗಮನಹರಿಸಿ ಜನತೆಯ ಬವಣೆಯನ್ನು ನಿವಾರಿಸಬೇಕಾಗಿದೆ.
ಇನ್ನು ಮಹಿಳೆಯರಿಗೆ, ವಯೋವೃದ್ಧರಿಗೆ ಟೇಕಲ್ ರೈಲು ನಿಲ್ದಾಣದಲ್ಲಿ ರಾತ್ರಿ ವೇಳೆ ರಕ್ಷಣೆಯೇ ಇಲ್ಲವಾಗಿದೆ. ಆದರೆ ರೇಲ್ವೆ ಪೊಲೀಸರು ಟೇಕಲ್ ರೈಲು ನಿಲ್ದಾಣದಲ್ಲಿ ಕೆಲಸ ನಿಗದಿ ಪಡಿಸಿದ್ದರು ಯಾರೂ ಬರುವುದಿಲ್ಲ. ಇನ್ನಾದರೂ ರೇಲ್ವೆ ಇಲಾಖೆ ಇತ್ತ ಗಮನಹರಿಸಿ ಜನತೆಗೆ ಮೂಲ ಸೌಲಭ್ಯಗಳನ್ನು ಒದಗಿಸಬೇಕೆಂಬುದು ಪ್ರಯಾಣಿಕರ ಆಗ್ರಹ.
ಟೇಕಲ್ ರೇಲ್ವೆ ನಿಲ್ದಾಣದಿಂದ ದಿನವಹಿ ಸುಮಾರು 20 ರಿಂದ 25 ಪ್ಯಾಸೆಂಜರ್ ರೈಲು ಹಾಗೂ 10 ರಿಂದ15 ಎಕ್ಸ್ಪ್ರೆಸ್ ರೈಲುಗಳು ಓಡಾಡುತ್ತಿದ್ದು, ಟೇಕಲ್ ಸುತ್ತಮುತ್ತಲಿನಿಂದ ಓಡಾಡುವ ಜನಕ್ಕೆ ರೈಲಿನಲ್ಲಿ ಹೋಗಿಬರುವುದೇ ಯಮಯಾತನೆಯಾಗಿದ್ದು, ಮಹಿಳೆಯರಿಗಂತೂ ಹೇಳತೀರದ ಹಿಂಸೆಯಾಗಿದೆ.
ಟೇಕಲ್ನಿಂದ ದಿನಂಪ್ರತಿ 3 ರಿಂದ 4 ಸಾವಿರ ಜನ ಉದ್ಯೋಗಕ್ಕಾಗಿ ಮಾಲೂರು, ದೇವನಗುಂದಿ, ವೈಟ್ಫೀಲ್ಡ್, ಕೆ.ಆರ್.ಪುರಂ, ಹೂಡಿ, ಹಾಗೂ ಬೆಂಗಳೂರು ಸಿಟಿ ರೈಲು ನಿಲ್ದಾಣದವರೆಗೂ ಹೋಗುತ್ತಿದ್ದು, ತುಂಬಿ ತುಳುಕುವ ರೈಲಿಗೆ ಟೇಕಲ್ನಿಂದ ಹತ್ತಲು ಆಗದ ಸ್ಥಿತಿಯಿದೆ. ಅದರಲ್ಲೂ ರೈಲಿನ ಬೋಗಿಯ ಬಾಗಿಲ ಬಳಿಯಲ್ಲೆ ಸುಮಾರು ಹುಡುಗರು ಗುಂಪು ಗೂಡಿ ಹತ್ತುವುದಕ್ಕೂ ಸಾಧ್ಯವಾಗದಂತೆ ನಿಂತಿರುತ್ತಾರೆ. ಇನ್ನು ಬೋಗಿಯೊಳಗೆ ಸುಮಾರು 8 ಜನ ಕೂರುವ ಸ್ಥಳದಲ್ಲಿ 16 ರಿಂದ 20 ಜನ, ಒಬ್ಬರು ಕೂರುವ ಸ್ಥಳದಲ್ಲಿ ಇಬ್ಬರಿಂದ ಮೂರು ಜನ ಕೂರುತ್ತಾರೆ. ಈ ಬಗ್ಗೆ ದಿನನಿತ್ಯ ಪ್ರಯಾಣಿಕರ ಗೋಳು ಹೇಳತೀರದಾಗಿದೆ.
ಬೋಗಿಯ ಕಿಟಕಿಯ ಕಂಬಿಗಳನ್ನು ಹಿಡಿದು ಹುಡುಗರು ದಿನವಹಿ ಓಡಾಡುವುದು ರೈಲ್ವೆ ಪೊಲೀಸರಿಗೆ ಕಾಣಸಿಗುತ್ತಿಲ್ಲ. ಹೀಗೆ ಹತ್ತಲು ಇಳಿಯಲು ಹೋಗಿ ಕೆಲವರು ಮೃತಪಟ್ಟಿರುವುದು ಉಂಟು.
ಈ ಹಿಂದೆ ನಮ್ಮ ಜಿಲ್ಲೆಯವರೆ ಆದ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರು ಕೆಲವು ರೈಲುಗಳ ಬೋಗಿಗಳ ಸಂಖ್ಯೆ ಹೆಚ್ಚಳ ಮಾಡುತ್ತೇನೆ ಎಂದು ಹಾಗೂ ಮಾರಿಕುಪ್ಪಂನಿಂದ ಬೆಂಗಳೂರಿಗೆ ಇನ್ನೂ 2 ರೈಲುಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು.
ಅದು ಯಾವುದೂ ಕೈಗೂಡಿಲ್ಲ. ಕೇಂದ್ರ ರೇಲ್ವೆ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಯವರು ಇತ್ತ ಗಮನಹರಿಸಿ ಜನತೆಯ ಬವಣೆಯನ್ನು ನಿವಾರಿಸಬೇಕಾಗಿದೆ.
ಇನ್ನು ಮಹಿಳೆಯರಿಗೆ, ವಯೋವೃದ್ಧರಿಗೆ ಟೇಕಲ್ ರೈಲು ನಿಲ್ದಾಣದಲ್ಲಿ ರಾತ್ರಿ ವೇಳೆ ರಕ್ಷಣೆಯೇ ಇಲ್ಲವಾಗಿದೆ. ಆದರೆ ರೇಲ್ವೆ ಪೊಲೀಸರು ಟೇಕಲ್ ರೈಲು ನಿಲ್ದಾಣದಲ್ಲಿ ಕೆಲಸ ನಿಗದಿ ಪಡಿಸಿದ್ದರು ಯಾರೂ ಬರುವುದಿಲ್ಲ. ಇನ್ನಾದರೂ ರೇಲ್ವೆ ಇಲಾಖೆ ಇತ್ತ ಗಮನಹರಿಸಿ ಜನತೆಗೆ ಮೂಲ ಸೌಲಭ್ಯಗಳನ್ನು ಒದಗಿಸಬೇಕೆಂಬುದು ಪ್ರಯಾಣಿಕರ ಆಗ್ರಹ.
-ಟೇಕಲ್ ಲಕ್ಷ್ಮೀಶ್