ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾವೇರಿ ಪಾತ್ರದಲ್ಲಿ ಉತ್ತಮ ಮಳೆ

Rashmi Kasaragodu
Updated On : 24 Jun 2013, 12:57 pm

ಕ.ಪ್ರ.ವಾರ್ತೆ   ಮಡಿಕೇರಿ   ಜೂ.23
ಮಡಿಕೇರಿ- ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಮಡಿಕೇರಿಯಲ್ಲಿ ಭಾನುವಾರವೂ ದಿನವಿಡೀ ಧಾರಾಕಾರ ಮಳೆಯಾಗಿದೆ. ಹಾರಂಗಿ ಜಲಾಶಯಕ್ಕೆ 937 ಕ್ಯೂಸೆಕ್ ನೀರಿನ ಒಳಹರಿವಿದೆ. 2859 ಅಡಿ ಗರಿಷ್ಠ ಸಂಗ್ರಹಣಾ ಸಾಮರ್ಥ್ಯದ ಹಾರಂಗಿಯಲ್ಲಿ ಪ್ರಸ್ತುತ 2830 ಅಡಿಗಳಷ್ಟು ನೀರು ಸಂಗ್ರಹವಿದೆ. ಜಲಾಶಯ ಭರ್ತಿಯಾಗಲು 29 ಅಡಿಗಳಷ್ಟು ನೀರಿನ ಅಗತ್ಯವಿದೆ. ಕಳೆದ ವರ್ಷ ಹಾರಂಗಿಯಲ್ಲಿ ಇದೇ ಅವಧಿಯಲ್ಲಿ 2810 ಅಡಿ ನೀರಿನ ಸಂಗ್ರಹವಿತ್ತು.
ಹಾರಂಗಿಗೆ ಭಾನುವಾರ 937 ಕ್ಯೂಸೆಕ್ ನೀರಿನ ಒಳಹರಿವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯಕ್ಕೆ 604 ಕ್ಯೂಸೆಕ್ ನೀರಿನ ಒಳಹರಿವಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement