ಕೋಳಿ ಜೂಜಾಟ: ಒಂಬತ್ತು ಮಂದಿ ಸೆರೆ
ಚಿಂತಾಮಣಿ: ಕೋಳಿ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ನಡೆಸಿರುವ ಪೊಲೀಸರು ಕೋಳಿಗಳ ಸಮೇತ ಸಾವಿರಾರು ರುಪಾಯಿ ನಗದು ಮತ್ತು 9 ಮಂದಿಯನ್ನು ಬಂಧಿಸಿರುವ ಘಟನೆ ಭಾನುವಾರ ಬಟ್ಲಹಳ್ಳಿ ಠಾಣೆ ವ್ಯಾಪ್ತಿಯ ಕೊಂಡವೆನಕಪಲ್ಲಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಕೊಂಡವೆನಕಪ್ಪಲ್ಲಿ ಗ್ರಾಮದ ಕೆರೆ ಅಂಗಳದಲ್ಲಿ ಕೋಳಿ ಜೂಜಾಟದಲ್ಲಿದ್ದ ವೆಂಕಟರವಣಪ್ಪ, ಮಂಜುನಾಥ, ನಾರಾಯಣಪ್ಪ, ಮುನಿಶಾಮಿ, ಲಕ್ಷ್ಮಣ, ಸೀತಾರಾಮ, ವೆಂಕಟರವಣ, ಲಗುಮಪ್ಪ, ರವಣಪ್ಪ ಅವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.