ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗಿರವಿಯಿಟ್ಟಿದ್ದ ಆಭರಣ ಬಿಡಿಸಿಕೊಡದ್ದಕ್ಕೆ ಪತ್ನಿ ಆತ್ಮಹತ್ಯೆ

Rashmi Kasaragodu
Updated On : 24 Jun 2013, 12:53 pm

ಚಿಕ್ಕಬಳ್ಳಾಪುರ: ಕಾರು ಖರೀದಿಸಲು ಹೆಂಡತಿಯ ಚಿನ್ನಾಭರಣ ಗಿರವಿಯಿಟ್ಟಿದ್ದ ಗಂಡ ಚಿನ್ನಾಭರಣ ಮರಳಿ ಕೊಡಿಸಲು ವಿಳಂಬ ಮಾಡಿದರಿಂದ ಬೇಸತ್ತ ಗೃಹಿಣಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಹಿದ್ಗಾ ಮೈದಾನದ ಬಳಿ ನಡೆದಿದೆ. ಈ ನಡುವೆ ಮೃತಳ ಪೋಷಕರಿಂದ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದೆ.
ಚಾಲಕನಾಗಿರುವ ನಗರ ವಾಸಿ ಮುಕ್ತಿಯಾರ್ ಕಾರು ಖರೀದಿಗೆಂದು ತನ್ನ ಹೆಂಡತಿ ನಸೀಬಾಳ ಬೆಲೆ ಬಾಳುವ ಚಿನ್ನಾಭರಣಗಳನ್ನು 45 ಸಾವಿರ ರು.ಗೆ ಗಿರವಿ ಇಟ್ಟಿದ್ದ. ಆ ಹಣದಲ್ಲಿ ಮತ್ತಷ್ಟು ಹಣ ಸೇರಿಸಿ ಕಾರು ಕೊಂಡಿದ್ದ. ಈ ನಡುವೆ ಗಿರವಿ ಇಟ್ಟ ತನ್ನ ಚಿನ್ನಾಭರಣಗಳನ್ನು ಬಿಡಿಸಿಕೊಡುವಂತೆ ಹೆಂಡತಿ ಒತ್ತಾಯಿಸಿದ್ದಾಳೆ. ಆದರೆ, ಮುಕ್ತಿಯಾರ್ ಬಿಡಿಸಿಕೊಟ್ಟಿಲ್ಲ. ಇದರಿಂದ ಮನನೊಂದ ನಸೀಬಾ ನೇಣು ಹಾಕಿಕೊಂಡು ಮೃತಪಟ್ಟಿದ್ದಾಳೆ.
ಆದರೆ ತಮ್ಮ ಮಗಳ ಸಾವಿಗೆ ಅಳಿಯ ಮುಕ್ತಿಯಾರ್ ಕಾರಣ. ಮದುವೆ ಸಂದರ್ಭದಲ್ಲಿ 80 ಸಾವಿರ ನಗದು ಹಾಗೂ 120 ಗ್ರಾಂ ಚಿನ್ನಾಭರಣಗಳನ್ನು ವರದಕ್ಷಿಣೆ ರೂಪದಲ್ಲಿ ನೀಡಿ ಮದುವೆ ಮಾಡಿಕೊಟ್ಟಿದ್ದರೂ ಯಾವಾಗಲೂ ಹಣ ತರುವಂತೆ ತಮ್ಮ ಮಗಳಿಗೆ ಪೀಡಿಸುತ್ತಿದ್ದ. ವರದಕ್ಷಿಣೆ ಕಿರುಕುಳ ನೀಡಿ ತಮ್ಮ ಮಗಳು ಸಾಯುವಂತೆ ಮಾಡಿದ್ದಾನೆ ಎಂದು ಮೃತಳ ತಂದೆ ಚಾಂದಪಾಷ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement