ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪಾದರಾಜರ ಉತ್ತಾರಾರಾಧನೆ

Rashmi Kasaragodu
Updated On : 24 Jun 2013, 12:58 pm

ಮುಳಬಾಗಲು: ಪಟ್ಟಣದ ಹೊರವಲಯದ ನರಸಿಂಹತೀರ್ಥದಲ್ಲಿ ಭಾನುವಾರ ಶ್ರೀಪಾದರಾಜರ ಉತ್ತಾರಾರಧನೆ ಸಾವಿರಾರು ಮಂದಿ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು. ಶ್ರೀಸ್ವರ್ಣವರ್ಣ ತೀರ್ಥ ವಿಧ್ವತ್ಸಭೆ ಮುಕ್ತಾಯ ಸಮಾರಂಭ, ವೇದವ್ಯಾಸ ಪೂಜೆ, ಸತ್ಯನಾರಾಯಣಪೂಜೆ ಸೇರಿದಂತೆ ಮೂರು ದಿವಸಗಳಲ್ಲಿ ಒಂದು ಲಕ್ಷಕ್ಕೂ ಮಿಗಿಲಾಗಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ವಿವಿಧ ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳು ನಡೆದವು. ಮಠದ ಕೇಶವನಿಧಿತೀರ್ಥರು, ತಹಶೀಲ್ದಾರ್ ಡಿ.ವಿ.ರಾಮಮೂರ್ತಿ, ಮಠದ ಏಜೆಂಟರಾದ ಜಯರಾಜ್, ವೆಂಕಟೇಶ್, ವ್ಯಾಸರಾವ್. ಮುಂತಾದವರು ಭಾಗವಹಿಸಿದ್ದರು.
ಮುಳಬಾಗಿಲಿನಲ್ಲಿ
ಮನೆ ಕಳವು
ಮೈಸೂರು: ಮೈಸೂರು ವಿವಿ ಬಿ.ಇಡಿ ಪದವಿಯ ಪ್ರಥಮ ಸೆಮಿಸ್ಟರ್ (ಸಿಬಿಸಿಎಸ್ ಮತ್ತು ಸಿಎಜಿಪಿ) ಮೇಕಪ್ ಪರೀಕ್ಷೆಯನ್ನು ಜು.9 ರಿಂದ ನಡೆಸಲಿದೆ. ಪ್ರಾಯೋಗಿಕ ಪರೀಕ್ಷೆ ಪ್ರಾರಂಭವಾಗುವ ಮುನ್ನ ಈ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಅರ್ಜಿ ಮತ್ತು ಪರೀಕ್ಷಾ ಶುಲ್ಕವನ್ನು ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರ ಮೂಲಕ ಮೈವಿವಿ ಪರೀಕ್ಷಾಂಗ ವಿಭಾಗದ ಕುಲಸಚಿವರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಪರೀಕ್ಷಾ ಶುಲ್ಕ ಮತ್ತು ಅರ್ಜಿಯನ್ನು ಜೂ.27 ರೊಳಗೆ, ಪ್ರಶ್ನೆಪತ್ರಿಕೆ ಬೇಡಿಕೆ ಪಟ್ಟಿಯನ್ನು ಜೂ.29 ರೊಳಗೆ ಹಾಗೂ ಪರೀಕ್ಷಾ ಅರ್ಜಿ, ಪ್ರವೇಶಪತ್ರ ಮತ್ತು ಅಭ್ಯರ್ಥಿಯ ಪಟ್ಟಿಯನ್ನು ವಿವಿಗೆ ಜು.1 ರೊಳಗೆ ಸಲ್ಲಿಸಬೇಕು. ಪೂರ್ಣ ಪರೀಕ್ಷೆಗೆ 745, ಪ್ರಾಯೋಗಿಕ ಪರೀಕ್ಷೆಯೂಂದಿಗೆ ಒಂದು ವಿಷಯಕ್ಕೆ 435, ಪ್ರಾಯೋಗಿಕ ಪರೀಕ್ಷೆಯಿಲ್ಲದೆ ಒಂದು ವಿಷಯಕ್ಕೆ 250 ಮತ್ತು ಅಂಕಪಟ್ಟಿ ಶುಲ್ಕ 175 ಪಾವತಿಸಬೇಕು.
ಇಂಟರ್‌ನ್ಯಾಷನಲ್ ಟ್ರೇಡ್ ಫೇರ್
ಮಂಡ್ಯ: ಬೆಂಗಳೂರಿನ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಟ್ರೇಡ್ ಚಿಟರ್ ಹಾಗೂ ನವದೆಹಲಿಯ ಕರ್ನಾಟಕ ಸರ್ಕಾರದ ಉದ್ಯಮ ಮತ್ತು ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಷನ್ ವತಿಯಿಂದ ಪ್ರತಿಷ್ಟಿತ ಇಂಡಿಯಾ ಇಂಟರ್ ನ್ಯಾಷನಲ್ ಟ್ರೇಡ್ ಫೇರ್-2013ನ್ನು ನವದೆಹಲಿಯ ಪ್ರಗತಿ ಮೈದಾನದಲ್ಲಿ 2013ರ ನವೆಂಬರ್ 14 ರಿಂದ 27ರವರೆವಿಗೆ ಆಯೋಜಿಸಲಾಗಿದೆ. ಈ ಫೇರ್‌ನಲ್ಲಿ ವ್ಯಾಪಾರ - ವಹಿವಾಟುಗಳ ಜಂಟಿ ಅಧಿವೇಶನಗಳು ಸಹ ನಡೆಯಲ್ಲಿದ್ದು, ಮಂಡ್ಯ  ವತಿಯಿಂದ ಭಾಗವಹಿಸಲು ಇಚ್ಚಿಸುವ ಉದ್ಯಮದಾರರು, ಕುಶಲಕರ್ಮಿಗಳಿಗೆ ರಾಜ್ಯದ ಪೆವಿಲಿಯನ್‌ನಲ್ಲಿ ತಮ್ಮ ಉತ್ಪನ್ನಗಳ ಪ್ರದರ್ಶನಕ್ಕೆ ಉಚಿತವಾಗಿ ಸ್ಥಳ ವ್ಯವಸ್ಥೆ ಮಾಡಿಕೊಡಲಾಗುವುದು. ಈ ಉದ್ಯಮದಾರರು, ಕುಶಲಕರ್ಮಿಗಳಿಗೆ ಬೆಂಗಳೂರಿನಿಂದ ದೆಹಲಿಗೆ, ದೆಹಲಿಯಿಂದ ಬೆಂಗಳೂರಿಗೆ ವಸ್ತುಗಳ ಸಾಗಾಣಿಕ ವೆಚ್ಚ ಭರಿಸಲಾಗುವುದು.  ಆಸಕ್ತರು ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಡ್ಯ ಕಚೇರಿಯಲ್ಲಿ ನೊಂದಾಯಿಸಿಕೊಳ್ಳುವಂತೆ ಜಂಟಿ ನಿರ್ದೇಶಕರು ಕೋರಿರುತ್ತಾರೆ. ದೂ-08232-221358.
ಎಂ.ಟೆಕ್‌ಗೆಪ್ರವೇಶ
ಮೈಸೂರು: ಮೈಸೂರು ವಿವಿ 2013-14ನೇ ಶೈಕ್ಷಣಿಕ ವರ್ಷದ ಎಂ.ಟೆಕ್. ಇನ್ ಮಟೆರಿಯಲ್ಸ್ ಸೈನ್ಸ್ ಸ್ನಾತಕೋತ್ತರ ಕೋರ್ಸಿನ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಿದೆ. ಜು.1 ರೊಳಗೆ ಅರ್ಜಿ ಸಲ್ಲಿಸಬಹುದು. ವಿವರಗಳಿಗೆ ವಿವಿ ವೆಬ್‌ಸೈಟ್ ್ಖಟ್ಝಿ-ಟಣಡ್ಟ್ಠಜ.ಛ್ಛ.್ಝಟಿ ನಲ್ಲಿ ಪಡೆಯಬಹುದು.
ರಾಜಪ್ಪ ಸ್ಮರಣೆ ಸಂಗೀತೋತ್ಸವ
ಮೈಸೂರು:  ಕರ್ನಾಟಕ ಕಲಾತಿಲಕ ಎಂಬ ಕೀರ್ತಿಗೆ ಭಾಜನರಾಗಿದ್ದ ಅಸ್ಥಾನ ಮೃದಂಗ ವಿದ್ವಾನ್ ಎಂ. ಆರ್. ರಾಜಪ್ಪ ಅವರ ಸ್ಮರಣೆ ಅಂಗವಾಗಿ ಶನಿವಾರ ಸಂಗೀತ ಕಾರ್ಯಕ್ರಮ ನಡೆಯಿತು.  ಸರಸ್ವತಿ ಗಾನ ಕಲಾಶಾಲೆ, ಸರಸ್ವತಿ ವಾದ್ಯ ವೃಂದ ಹಾಗೂ ಶೃತಿ ಸಂಗೀತ ಸಂಸ್ಥೆ ಮತ್ತು ವಿದ್ವಾನ್ ರಾಜಪ್ಪ ಕುಟುಂಬ ವರ್ಗವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಿದ್ದ 6ನೇ ಪುಣ್ಯ ಸ್ಮರಣೆಯ ಈ ಕಾರ್ಯಕ್ರಮವನ್ನು ಮೇಲುಕೋಟೆ ವಂಗೀಮಠದ ಇಳೈ ಆಳ್ವಾರ್ ಸ್ವಾಮೀಜಿ ಉದ್ಘಾಟಿಸಿದರು.
ಪುರಾತನ ನರಸಿಂಹ ಸ್ವಾಮಿ ವಿಗ್ರಹ ಪತ್ತೆ

ಮುಳಬಾಗಲು: ತಾಲೂಕಿನ ಕದರಿಪುರ ಗ್ರಾಮದ ಪ್ರಸಿದ್ದ ನರಸಿಂಹಸ್ವಾಮಿ ದೇವಾಲಯದ ಅವರಣದಲ್ಲಿ ಪಾಕಶಾಲೆ ನಿರ್ಮಾಣಕ್ಕಾಗಿ ಕಾಮಗಾರಿ ಮಾಡುತ್ತಿದ್ದ ವೇಳೆಯಲ್ಲಿ ನರಸಿಂಹಸ್ವಾಮಿ ದೇವರ ವಿಗ್ರಹ ಸಿಕ್ಕಿದೆ.
ವಿಗ್ರಹಕ್ಕೆ 500 ವರ್ಷಗಳ ಇತಿಹಾಸವಿರಬಹುದೆನ್ನಲಾಗಿದೆ. ಎರಡುವರೆ ಅಡಿ ಇರುವ ಈ ವಿಗ್ರಹ ಕಪ್ಪು ಶಿಲೆಯಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಅರ್ಚಕ ಭಿಂದುಮಾಧವ್ ಅವರು ವಿಗ್ರಹವನ್ನು ಸ್ವಚ್ಛಗೊಳಿಸಿ ಅರಿಶಿನ ಕುಂಕುಮದೊಂದಿಗೆ ವಿಗ್ರಹಕ್ಕೆ ವಿಶೇಷ ಪೂಜೆ ಮಾಡಿದ್ದು, ಸುತ್ತಮುತ್ತಲ ಗ್ರಾಮಗಳವರು ವಿಗ್ರಹವನ್ನು ಭಕ್ತಿ ಪುರ್ವಕವಾಗಿ ಪೂಜಿಸುತ್ತಿದ್ದರು. ಈ ಕುರಿತು ಕೋಲಾರ ಜಿಲ್ಲೆಯ ಪುರಾತನ ದೇವಾಲಯಗಳ ಮೇಲೆ ಸಂಶೋಧನೆ ನಡೆಸಿರುವ ಹಾಗೂ ದೇವಾಲಯಗಳ ಕುರಿತು ಹಲವಾರು ಪುಸ್ತಕಗಳನ್ನು ರಚಿಸಿರುವ ಪ್ರೊಫೆಸರ್ ಕರುಡುಮಲೆ ಕೆ.ಆರ್.ನರಸಿಂಹನ್ ಅವರನ್ನು ಕನ್ನಡ ಪ್ರಭ ಸಂಪರ್ಕಿಸಿದಾಗ, ವಿಸ್ತೃತ ಮಾಹಿತಿ ನೀಡಿದರು. ಇದರೊಂದಿಗೆ ಚಿಂತಕ ಹಾಗೂ ಹಾಲಿ ಕೋಲಾರ ಪಶುವೈದ್ಯ ಇಲಾಖೆಯ ಅಧಿಕಾರಿ ದಳಸನೂರು ಡಾ.ರಘುರಾಮೇಗೌಡರೂ ಅನೇಕ ವಿಷಯ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement