ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಶ್ವತ ನೀರಾವರಿ ಜಾರಿಗೆ ಜಯಕರ್ನಾಟಕ ಒತ್ತಾಯ

Rashmi Kasaragodu
Updated On : 24 Jun 2013, 12:55 pm

ಕೋಲಾರ: ಬರಪೀಡಿತ ಕೋಲಾರ ಜಿಲ್ಲೆಯನ್ನು ಉಳಿಸಲು ರಾಜ್ಯ ಸರ್ಕಾರ ಕೂಡಲೇ ಡಾ.ಪರಮಶಿವಯ್ಯ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರಬೇಕೆಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಆರ್. ತ್ಯಾಗರಾಜ್ ಒತ್ತಾಯಿಸಿದರು.
ಅವರು ಶನಿವಾರ ಸಂಘಟನೆಯ ಶ್ರೀನಿವಾಸಪುರ ತಾಲೂಕು ಘಟಕ ರಚನೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅಂತರ್ಜಲ ಪಾತಾಳಕ್ಕೆ ಮುಟ್ಟಿದ್ದು ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೀಗೆಯೇ ಮುಂದುವರೆದಲ್ಲಿ ಬರಡು ಭೂಮಿಯಾಗಿ ಮಾರ್ಪಡಲಿದೆ. ಆದ್ದರಿಂದ ಜಿಲ್ಲೆಯ ಹಿತದೃಷ್ಟಿಯಿಂದ ಡಾ.ಪರಮಶಿವಯ್ಯ  ಯೋಜನೆಯನ್ನು ಜಾರಿಗೆ ತಂದು ಜನರಿಗೆ ಅನುಕೂಲ ಮಾಡುವಂತೆ ತಿಳಿಸಿದರು.
ಎತ್ತಿನ ಹೊಳೆ ಯೋಜನೆಯನ್ನು ಕಾಮನ್ ವಾಟರ್ ಗ್ರಿಡ್ ಕೆನಾಲ್ ಯೋಜನೆಯ ಮೂಲಕ ಹರಿಸುವ ಬಗ್ಗೆ ಸರ್ಕಾರವು ಮುಂದಾಗುವಂತೆ ಒತ್ತಾಯಿಸಲು ಜಯ ಕರ್ನಾಟಕ ಸಂಘಟನೆ ವತಿಯಿಂದ ಜಿಲ್ಲೆಯಾದ್ಯಂತ ಹೋರಾಟಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ ಪ್ರತಿನಿಧಿಗಳು ಸಹ ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ತರುವಂತೆ ಆಗ್ರಹಿಸಿದರು.
ಸಂಘಟನೆಯ ಶ್ರೀನಿವಾಸಪುರ ತಾಲೂಕು ಪದಾಧಿಕಾರಿಗಳ ಆಯ್ಕೆ ಸಭೆಯು ಸಹ ಇದೇ ಸಂದರ್ಭದಲ್ಲಿ  ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜು ವಹಿಸಿದ್ದರು.
ಸಭೆಯಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷ ಕೆ.ಎನ್.ಜಗದೀಶ್, ರಾಜ್ಯ ಯುವ ಸಂಘಟನ ಕಾರ್ಯದರ್ಶಿ ಪ್ರಸನ್ನಕುಮಾರ್, ಗಿರಿನಗರ ಬ್ಲಾಕ್ ಅಧ್ಯಕ್ಷ ಕಾರ್ತಿಕ್, ಜಿಲ್ಲಾ ಉಪಾಧ್ಯಕ್ಷ ಕೀಲುಕೋಟೆ ಆಂಜಿನಪ್ಪ, ಸಿ.ಆರ್.ಪಿ.ವೆಂಕಟೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ವಿ.ಶಿವಕುಮಾರ್, ಜಿಲ್ಲಾ ಮುಖಂಡರುಗಳಾದ ಜಿ.ಸುರೇಶ್ ಬಾಬು, ಕೆ.ಎಂ.ಗೋವಿಂದರಾಜು, ಜಿಲ್ಲಾ ಸಲಹೆಗಾರ ಗಾಂಧಿನಗರ ರಾಜಣ್ಣ  ಇದ್ದರು. ಶ್ರೀನಿವಾಸಪುರ ತಾಲೂಕು ಅಧ್ಯಕ್ಷರಾಗಿ ಸಿ.ಬಿ.ಮಂಜುನಾಥ್ ಬೈರೆಡ್ಡಿ, ಕಾರ್ಯಾಧ್ಯಕ್ಷ- ಜಿ.ಎನ್.ಆಂಜನೇಯಪ್ಪ, ಉಪಾಧ್ಯಕ್ಷ- ಕೆ.ಜಿ.ಶ್ರೀನಾಥ್, ಪ್ರಧಾನ ಕಾರ್ಯದರ್ಶಿ- ಟಿ.ಎನ್.ಮಂಜುನಾಥರೆಡ್ಡಿ, ಕಾರ್ಯದರ್ಶಿ- ವಿ.ರಾಮಾಂಜಪ್ಪ, ಜಂಟಿ ಕಾರ್ಯದರ್ಶಿ- ಇ.ರಾಮಾಂಜನಪ್ಪ, ಖಜಾಂಚಿ- ಎಸ್.ವಿ.ಶ್ರೀನಾಥ್,ವಕ್ತಾರ-ಎನ್.ನಾಗರಮಣ, ಸಂಘಟನಾ ಕಾರ್ಯದರ್ಶಿಗಳಾಗಿ ಎಸ್.ಮನೋಹರ್, ಹೆಚ್.ಹೆನ್.ಅಂಬರೀಶ್,ಟಿ.ಆರ್.ರೆಡ್ಡಿ ಶೇಖರ್, ಟಿ.ಎನ್.ಗೋವಿಂದರಾಜು ಅವರುಗಳನ್ನು ಆಯ್ಕೆ ಮಾಡಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement