ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಛಾಯಾಗ್ರಾಹಕರ ಪ್ರತಿಭಟನೆ

Rashmi Kasaragodu
Updated On : 25 Jun 2013, 12:38 pm

ಶಿಡ್ಲಘಟ್ಟ: ಚುನಾವಣಾ ಕಾರ್ಯದ ವೀಡಿಯೋ ಚಿತ್ರಿಕರಣ ಬಾಡಿಗೆ ಬಾಕಿ ಉಳಿಸಿಕೊಂಡಿದ್ದು, 2 ತಿಂಗಳಾದರೂ ಬಾಕಿ ಹಣ ಪಾವತಿಸದೇ ಇದ್ದ ಕಾರಣ ಛಾಯಾಗ್ರಾಹಕರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ ಮೇ 5ರಂದು ನಡೆದ ವಿಧಾನಸಭಾ ಚುನಾವಣೆಯ ವೀಡಿಯೋ ಚಿತ್ರೀಕರಣ ಮಾಡಲು ಚುನಾವಣಾಧಿಕಾರಿಗಳು ಆದ ತಹಸೀಲ್ದಾರ್ ಅವರ ಲಿಖಿತ ಮನವಿಯ ಮೇರೆಗೆ 30 ದಿನಗಳ ಕಾಲ ಒಟ್ಟು 457 ಯೂನಿಟ್‌ಗಳು ಕಾರ್ಯನಿರ್ವಹಿಸಿದ್ದು, ಪ್ರತಿ ಯೂನಿಟ್‌ಗೆ 1500 ರಂತೆ ಜಿಲ್ಲಾಧಿಕಾರಿಗಳು ದರ ನಿಗದಿಪಡಿಸಿ ಚುನಾವಣಾ ಕಾರ್ಯಕ್ಕೆ ನೇಮಿಸಿದ್ದರು. ಒಟ್ಟು ಬಾಬತ್ತು 6,75 ಲಕ್ಷಗಳಾಗಿತ್ತು. ಅದರಲ್ಲಿ 1,50 ಲಕ್ಷವನ್ನು ಪಾವತಿಸಿದ್ದು, ಉಳಿದ ಹಣವನ್ನು 2 ತಿಂಗಳಾದರೂ ಪಾವತಿಸದೆ ಇದ್ದ ಕಾರಣ ಛಾಯಾಗ್ರಾಹಕರ ಸಂಘದಿಂದ ಧರಣಿ ಹಮ್ಮಿಕೊಂಡಿದ್ದರು. ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿ ಕೇಳಿದ್ದಕ್ಕಾಗಿ ಎಲ್ಲ ಹಣ ಬಿಡುಗಡೆ ಮಾಡಿರುವುದಾಗಿ ಹಾಗೂ ತಹಸೀಲ್ದಾರ್ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದರೂ ತಹಸೀಲ್ದಾರ್ ಅವರು ಹಣ ಬಿಡುಗಡೆ ಮಾಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. 2ನೇ ಗ್ರೇಡ್ ತಹಸೀಲ್ದಾರ್ ರಮೇಶ್ ಶೀಘ್ರ ಹಣ ಪಾವತಿ ಮಾಡುವುದಾಗಿ ಭರವಸೆ ನೀಡಿದರು. ಬಳಿಕ ಛಾಯಾಗ್ರಾಹಕರು ಧರಣಿ ಹಿಂದಕ್ಕೆ ಪಡೆದರು.
ರೂಪಸಿ ರಮೇಶ್, ಮೇಘನಾ ಶ್ರೀನಿವಾಸ್, ಮಂಜು, ಎಸ್. ಮುನಿಕೃಷ್ಣ, ಎಚ್.ಮಂಜುನಾಥ್ ಹಾಗೂ ಛಾಯಾಗ್ರಾಹಕ ಸಂಘದ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು. ಪುರಠಾಣೆ ಪಿಎಸ್‌ಐ ಪುರುಷೋತ್ತಮ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement