ಜಾನುವಾರು ಆರೋಗ್ಯ ತಪಾಸಣೆ
ಕ.ಪ್ರ.ವಾರ್ತೆ ಕೋಲಾರ ಜೂ. 24
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಕೋಲಾರ ಮತ್ತು ಆತ್ಮಯೋಜನೆ ಸಂಯುಕ್ತಾಶ್ರಯದಲ್ಲಿ ಕೋಲಾರ ತಾಲೂಕಿನ ನಡುಪಳ್ಳಿ ಗ್ರಾಮದಲ್ಲಿ ಪಶುಆರೋಗ್ಯ ಶಿಬಿರ ಆಯೋಜಿಸಲಾಯಿತ್ತು. ಸದರಿ ಶಿಬಿರದಲ್ಲಿ ತಾಲೂಕಿನ ಸಹಾಯಕ ನಿರ್ದೇಶಕ ಡಾ. ಚನ್ನಕೇಶವಯ್ಯ, ಪಶು ವೈದ್ಯರಾದ ಡಾ. ಅಫ್ಜಲ್ ಪಾಷ, ಡಾ. ಆಡಂ ಷಪಿವುಲ್ಲಾ, ಡಾ. ಮೂರ್ತಿ, ನಜೀರ್, ಪಶು ವೈದ್ಯ ಪರೀಕ್ಷಕರು ಪಶುಗಳಿಗೆ ಎಚ್.ಎಸ್.ಲಸಿಕೆ, ಜಂತು ನಾಶಕ ಔಷಧಿ, ಬರಡು ರಾಸುಗಳ ತಪಾಸಣೆ ಮತ್ತು ಚಿಕಿತ್ಸೆ, ಕುರಿ ಮತ್ತು ಮೇಕೆಗಳಿಗೆ ಪಿ.ಪಿ.ಆರ್ ಲಸಿಕೆ ಹಾಗೂ ಲವಣ ಮಿಶ್ರಣವನ್ನು ಉಚಿತವಾಗಿ ನೀಡಿದರು.