ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವರದಕ್ಷಿಣೆ ಕಿರುಕುಳ: ಪತಿ ವಿರುದ್ಧ ಪತ್ನಿ ದೂರು

Rashmi Kasaragodu
Updated On : 25 Jun 2013, 12:27 pm

ಕೆಜಿಎಫ್: ವರದಕ್ಷಿಣೆ ತರುವಂತೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ ಪತಿಯ ವಿರುದ್ಧ ಪತ್ನಿ ಠಾಣೆಯಲ್ಲಿ ದೂರು ನೀಡಿರುವ ಘಟನೆ ನಡೆದಿದೆ.  ಚಾಂಪಿಯನ್‌ರೀಫ್ ಪೊಲೀಸ್ ಠಾಣಾ ವ್ಯಾಪ್ತಿಯ ಇ.ಎಸ್. ಬ್ಲಾಕ್‌ನ ಬುಲೆನ್‌ಶಾಪ್ಟ್ ನಿವಾಸಿ ಮಹಿಮಾಳನ್ನು ಬೆಂಗಳೂರಿನ ಕುಂದರಹಳ್ಳಿ ನಿವಾಸಿ ಸ್ಯಾಂಸನ್‌ಐಸಕ್ ಎಂಬುವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಂದರ್ಭದಲ್ಲಿ  ಸ್ಯಾಂಸನ್‌ಐಸಕ್‌ಗೆ ಹೆಚ್ಚಿನ ವರದಕ್ಷಿಣೆಯನ್ನು ಮಹಿಮಾ ಕುಟುಂಬದವರು ನೀಡಿದ್ದರು. ಮದುವೆಯಾದ ಕೆಲ ತಿಂಗಳು ಇತ್ತೀಚೆಗೆ ತಮ್ಮ ಪತಿ ಸ್ಯಾಂಸನ್‌ಐಸಕ್, ಕುಟುಂಬಸ್ಥರು ತಮ್ಮ ಪೋಷಕರು ನೀಡಿದ ವರದಕ್ಷಿಣೆ ಸಾಲದು  ತವರು ಮನೆಯಿಂದ ನನಗೆ ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಒಂದು ಫ್ಲಾಟ್ ಮತ್ತು ಇನೋವಾ ಕಾರನ್ನು ಕೊಡಿಸುವಂತೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಮಾ ತಮ್ಮ ಪತಿ ವಿರುದ್ಧ ಚಾಂಪಿಯನ್‌ರೀಫ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವರದಕ್ಷಿಣೆ-ಆರೋಪ: ಶ್ರೀನಿವಾಸಪುರ ತಾಲೂಕಿನ ಚಿರುವನಹಳ್ಳಿ ಗ್ರಾಮದ ವಾಸಿ ರೆಡಪ್ಪ ಎಂಬುವರ ಪತ್ನಿ ಮಮತಾ ತನ್ನ ಗಂಡ ವರಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆಂದು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.  ವಿವಾಹ ಸಮಯದಲ್ಲೇ ಹಣ ಮತ್ತು ಒಡವೆಯ ರೂಪದಲ್ಲಿ ವರದಕ್ಷಿಣೆ ನೀಡಿದ್ದು ನಂತರವೂ ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದು ಅಲ್ಲದೇ ವಿಷವನ್ನು ನೀಡಿ ಕೊಲೆ ಮಾಡಲು ಪ್ರಯತ್ನ ಪಟ್ಟಿರುವುದಾಗಿ ಮಮತಾ ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement