ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಿಥಿಲಾವಸ್ಥೆಯಲ್ಲಿ ಪೊಲೀಸ್ ವಸತಿ ಗೃಹಗಳು

Rashmi Kasaragodu
Updated On : 25 Jun 2013, 12:22 pm

 ಟೇಕಲ್ ಲಕ್ಷ್ಮೀಶ
ಟೇಕಲ್: ಇಲ್ಲಿನ ಕೆ.ಜಿ. ಹಳ್ಳಿ ಹಳೆ ಗ್ರಾಪಂ ಕಚೇರಿ ಹಿಂಭಾಗದಲ್ಲಿರುವ ಅನೇಕ ವರ್ಷಗಳ ಹಿಂದೆ ಕಟ್ಟಿಸಿರುವ ಪೊಲೀಸ್ ವಸತಿಗೃಹಗಳು ಈಗ ಶಿಥಿಲಾವಸ್ಥೆಯಲ್ಲಿದ್ದು ಇಲ್ಲಿ ಸಂಸಾರ ನಡೆಸುತ್ತಿರುವ ಪೊಲೀಸರು ಆತಂಕ ಎದುರಿಸುತ್ತಿದ್ದಾರೆ.
ವಸತಿಗೃಹಗಳು ಇರುವ ಕಟ್ಟಡದಲ್ಲಿ ಗಿಡ ಮರ ಬಳ್ಳಿಗಳು ಬೆಳೆದು ಬಹುತೇಕ ಕಟ್ಟಡ ಭಾಗ ಬೀಳುವ ಸ್ಥಿತಿಯಲ್ಲಿದೆ. ಆದರೂ ಸಂಬಂಧಪಟ್ಟವರು ಯಾರು ಗಮನಹರಿಸಿಲ್ಲ.
ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ: ಹಿಂದಿನಿಂದಲೂ ಹಲವಾರು ಜನಪ್ರತಿನಿಧಿಗಳು ಇಲ್ಲಿ ಭೇಟಿ ನೀಡಿದ್ದು ಇದರ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. 2010-11 ನೇ ಸಾಲಿನಲ್ಲಿ ಇಲ್ಲಿ ಟೇಕಲ್ ಹೊರಠಾಣೆ ಮಂಜೂರಾಗಿದ್ದು ಕಟ್ಟಡದ ವ್ಯವಸ್ಥೆ ಮುಗಿದು ಹೊರಠಾಣೆ ಕೆಲಸ ನಿರ್ವಹಿಸುತ್ತಿದೆ. ಆದರೆ ಅದರ ಪಕ್ಕದಲ್ಲಿಯೆ ಅವರಿಗಾಗಿ ನಿರ್ಮಿಸಿರುವ ವಸತಿ ಗೃಹಗಳು ಶಿಥಿಲವಾಗುತ್ತ ಬರುತ್ತಿದೆ. ಕೋಲಾರ ಜಿಲ್ಲೆಗೆ ಬಂದ ಬಹುತೇಕ ಜಿಲ್ಲಾ ವರಿಷ್ಠಾಧಿಕಾರಿಗಳು ಬಂದು ಸ್ಥಳ ವೀಕ್ಷಿಸಿ ಹೋದರೂ ಯಾವುದೇ ಅಭಿವೃದ್ಧಿ ಮಾಡಲು ಮುಂದಾಗಿಲ್ಲ.
ಹೊರಠಾಣೆ ಮೇಲ್ದರ್ಜೆ: ಟೇಕಲ್ ಹೋಬಳಿಯಲ್ಲಿ ಸುಮಾರು 97 ಕ್ಕೂ ಹೆಚ್ಚು ಗ್ರಾಮಗಳಿದ್ದು ಯಾವುದಾದರೊಂದು ಗಲಾಟೆ ನಡೆಯುತ್ತಿರುತ್ತದೆ. ಈ ಬಗ್ಗೆ ದೂರು ಸಲ್ಲಿಸಬೇಕಾದರೆ ಟೇಕಲ್‌ನಿಂದ ಸುಮಾರು 18 ಕಿ.ಮೀ ದೂರದ ಮಾಸ್ತಿಗೆ ತೆರಳಿ ಅಲ್ಲಿ ಕೇಸು ದಾಖಲಿಸಬೇಕು. ಈ ಹಿಂದೆ ರಾಜ್ಯದಲ್ಲಿ ಗೃಹ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಅಶೋಕ್ ಅವರು ಟೇಕಲ್ ಹೊರಠಾಣೆಯನ್ನು ಮೇಲ್ದರ್ಜೆಗೇರಿಸುವ ಭರವಸೆ ನೀಡಿದರು. ಆದರೆ ಅದು ನಿಜವಾಗಲಿಲ್ಲ. ತದನಂತರ ಮಂತ್ರಿಗಳಾದ ಎಸ್.ಎನ್. ಕೃಷ್ಣಯ್ಯಶೆಟ್ಟಿ ಅವರದೇ ಸರ್ಕಾರ ಇದ್ದಾಗ ಅವರೇ ಮಂತ್ರಿಯಾಗಿದ್ದು ಅದೇಕೋ ಮನಸ್ಸು ಮಾಡಲಿಲ್ಲ.
ಪೊಲೀಸ್ ಪೇದೆಗಳಿಗೆ ಸಹಾಯಕ: ಈ ವಸತಿ ಗೃಹಗಳು ಪುನರ್‌ನಿರ್ಮಾಣವಾದರೆ ಸುಮಾರು 5 ರಿಂದ 6 ಪೊಲೀಸ್ ಪೇದೆಗಳ ಕುಟುಂಬ ಇರಲು ಸಹಾಯವಾಗುತ್ತದೆ. ಇಲ್ಲಿ ವಸತಿ ಗೃಹ ನಿರ್ಮಾಣಕ್ಕೆ, ಠಾಣೆಯನ್ನು ಮೇಲ್ದರ್ಜೆಗೆರಿಸುವುದಕ್ಕೆ ಸಾರ್ವಜನಿಕರಿಂದ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳಾದ ಮಾಲೂರು ತಾಲೂಕು ಶಾಸಕ ಮಂಜುನಾಥಗೌಡ ಹಾಗೂ ಟೇಕಲ್ ಜಿ.ಪಂ. ಸದಸ್ಯೆ ರತ್ನಮ್ಮ ನಂಜೇಗೌಡ, ತಾ.ಪಂ. ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡರು ಇನ್ನಾದರೂ ಇತ್ತ ಗಮನಹರಿಸಿ ಜಿಲ್ಲಾಡಳಿತದ ಮೇಲೆ ಒತ್ತಾಯ ಹೇರಿ ವಸತಿ ಗೃಹಗಳ ನಿರ್ಮಾಣಕ್ಕೆ ಮುಂದಾಗಬೇಕೆಂಬುದೆ ಜನರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement