ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಒಕ್ಕೂಟಕ್ಕೆ ಗುಣಮಟ್ಟದ ಹಾಲು ನೀಡಿ'

Vishwanath S
Updated On : 30 Jun 2013, 12:34 pm

ಗೌರಿಬಿದನೂರು: ಹೈನೋದ್ಯಮ ಹಾಲು ಉತ್ಪಾದನೆ ಗ್ರಾಮೀಣ ರೈತರ ಆರ್ಥಿಕ ಶಕ್ತಿಯಾಗಿದ್ದು, ಸಂಘದ ಸದಸ್ಯರು ಸಹಕಾರ ನೀಡುವ ಮೂಲಕ ಹಾಲು ಉತ್ಪಾದನೆ ಹೆಚ್ಚಿಸಿ ಆರ್ಥಿಕವಾಗಿ ಸಧೃಢ ಹಾಗೂ ಸ್ವಾವಲಂಬಿಗಳಾಗಿ ಎಂದು ಶಾಸಕ ಶಿವಶಂಕರರೆಡ್ಡಿ ತಿಳಿಸಿದರು.
ಅವರು ಗೌರಿಬಿದನೂರು ತಾಲೂಕು ಡಿ.ಪಾಳ್ಯ ಹೋಬಳಿ ನಾಮಗೊಂಡ್ಲು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ನಡೆಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ನಿರ್ದೇಶಕ ಕೆ.ವಿ. ನಾಗರಾಜ್ ಮಾತನಾಡಿ ಕರ್ನಾಟಕ ಹಾಲು ಮಹಾಮಂಡಳವು ಗುಜರಾತ್‌ನ  ಅಮೂಲ್‌ನಂತೆ ಮಾದರಿ ಸಹಕಾರಿ ಸಂಘವಾಗಿ ಬೆಳೆದಿದೆ. ಶಾಲಾ ಮಕ್ಕಳಿಗೆ ಶೀಘ್ರದಲ್ಲಿಯೇ 150 ಎಂ.ಎಲ್ ಹಾಲು  ದೊರೆಯಲಿದೆ ಎಂದರು. ಕೋಲಾರ, ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘದಿಂದ ಹಾಲು ಮಾರುಕಟ್ಟೆಗಾಗಿ ಶೀಘ್ರದಲ್ಲಿ ಪನ್ನೀರ್ ಪ್ಲಾಂಟ್ ಆರಂಭಗೊಳ್ಳಲಿದ್ದು ಸರ್ಕಾರಕ್ಕೆ ಹತ್ತು ಲಕ್ಷ ರು.ಗೆ ಬೇಡಿಕೆ ಇಟ್ಟಿದ್ದು ಹಿಂದಿನ ಬಜೆಟ್‌ನಲ್ಲಿ 4 ಲಕ್ಷ ಮಂಜೂರಾಗಿದೆ. ಮುಂದಿನ ಬಜೆಟನಲ್ಲಿ ಅನುದಾನಕ್ಕೆ ಮನವಿ ಮಾಡಲಾಗಿದೆ ಎಂದರು. ಹಿರಿಯ ಅಧಿಕಾರಿ ಕೆ.ವಿ.ನಾರಾಯಣ ಸ್ವಾಮಿ ಮಾತನಾಡಿ, ನಾಮಗೊಂಡ್ಲು ಹಾಲು ಉತ್ಪಾದಕರ ಸಂಘದ ಸಾಧನೆ ಪ್ರಸಂಶನೀಯ ಎಂದರು.
ಕಾರ್ಯಕ್ರಮದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಮಂಜುನಾಥ ರೆಡ್ಡಿ, ಜಿಲ್ಲಾ ಪಂಚಾಯಿತಿ ಉಪಾದ್ಯಕ್ಷ ರಾಘವೇಂದ್ರ ಹನುಮಾನ್, ನಿರ್ದೇಶಕ ಎಸ್.ವಿ.ಸುಬ್ಬಾರೆಡ್ಡಿ, ನಾಮಗೊಂಡ್ಲು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎ.ಮಂಜುನಾಥ ರೆಡ್ಡಿ, ತಾಪಂ ಅಧ್ಯಕ್ಷ ನಿರಂಜನ್, ತಾಪಂ ಸದಸ್ಯರಾದ ಪದ್ಮಾ ಪ್ರಕಾಶ್, ಯುವ ಮುಖಂಡ ಪ್ರಕಾಶ್, ಕಾರ್ಯನಿರ್ವಾಹಕ ನಿರ್ದೇಶಕ ಹನುಮೇಶ್, ತಾಲೂಕು ಲಯನ್ಸ್‌ಸಂಸ್ಥೆಯ ಅಧ್ಯಕ್ಷ ಡಿ.ಅಶ್ಥರೆಡ್ಡಿ, ಉಪ ವ್ಯವಸ್ಥಾಪಕ ಪಿ.ಬಿ.ಚಂದ್ರಮೋಹನ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಮಹಮ್ಮದ ಹರ್ಷದ್, ವಿಸ್ತರಣಾಧಿಕಾರಿ ಶಂಕರಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement