ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಒಳ್ಳೆಯ ಕೆಲಸದಿಂದ ಜೀವನ ಸಾರ್ಥಕತೆ'

Vishwanath S
Updated On : 30 Jun 2013, 12:34 pm

ಮಾಲೂರು: ಜೀವಿಗಳಲ್ಲೇ ಮಾನವ ಜನ್ಮ ಶ್ರೇಷ್ಠವಾಗಿದ್ದು, ಮನುಷ್ಯ ಬದುಕಿದ್ದಾಗ ನಾಲ್ಕು ಒಳ್ಳೆಯ ಕೆಲಸ ಮಾಡುವ ಮೂಲಕ ಜೀವನ ಸಾರ್ಥಕತೆ ಪಡೆದುಕೊಳ್ಳಬೇಕು ಎಂದು ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು ಹೇಳಿದರು.
ಅವರು ತಾಲೂಕಿನ ದುಡವನಹಳ್ಳಿ ಗ್ರಾಮದಲ್ಲಿ ಶ್ರೀದೇವಿ-ಭೂದೇವಿ ಸಮೇತ ವರದರಾಯಸ್ವಾಮಿ ನೂತನ ಉತ್ಸವ ಮೂರ್ತಿ ಪ್ರತಿಷ್ಠಾಪನಾ ಕಾರ್ಯದಲ್ಲಿ ಭಾಗವಹಿಸಿ ಆಶೀರ್ವಚನ ನೀಡುತ್ತಾ ಮಾವನ ತಾನೂ ಬದುಕುವ ಜೊತೆಯಲ್ಲಿ ಇತರರು ಬದುಕಲು ಬಿಡಬೇಕು ಎಂದರು.
ಇದೇ ಸಂಧರ್ಭದಲ್ಲಿ ಉತ್ಸವ ಮೂರ್ತಿಯನ್ನು ದಾನವಾಗಿ ನೀಡಿದ ಎ.ವಿ.ನಾರಾಯಣಪ್ಪ, ಸತ್ಯನಾರಾಯಣ,ಶ್ರೀನಿವಾಸ ಮೂರ್ತಿ, ಗಂಗಯ್ಯ, ರಂಗಸ್ವಾಮಿ ಕುಟುಂಬದವರನ್ನು ಸನ್ಮಾನಿಸಲಾಯಿತು. ಶಿವಗಂಗೆ ಮಹಾಲಕ್ಷ್ಮಿ ಮಹಾಸಂಸ್ಥಾನದ ಜ್ಞಾನಾನಂದ ಮಹಾಸ್ವಾಮಿಗಳು, ಸುರೇಶನಾಂದ ಭಾರತಿ ಮಹಾಸ್ವಾಮಿಗಳು, ಸೌಮ್ಯನಾಥ ಮಹಾಸ್ವಾಮಿ, ಆನಂದ ಗುರೂಜಿ, ನೀರಾವರಿ ತಜ್ಞ ಡಾ.ಪರಮಶಿವಯ್ಯ, ಜಿ.ಪಂ.ಸದಸ್ಯೆ ಯಶೋಧಮ್ಮ ಕೃಷ್ಣಮೂರ್ತಿ, ಎ.ಪಿ.ಎಂ.ಸಿ.ಸದಸ್ಯ ರಮೇಶ್, ರಾಮಾಂಜಪ್ಪ,ಎ.ಬಿ.ನಾರಾಯಣಪ್ಪ, ಸುಬ್ಬಣ್ಣ, ಗೋವಿಂದಪ್ಪ, ಬಾಲಪ್ಪ, ಮಂಜು, ಯತೀಶ್, ನಾಗರಾಜ್ ಹಾಗೂ ದುಡುವನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement