ನಾಳೆ ಪಾಲುಕ್ಕಮ್ಮ ದೇವಾಲಯ ಉದ್ಘಾಟನೆ
ಕೋಲಾರ: ತಾಲೂಕಿನ ಹರಟಿ ಪಂಚಾಯತಿಯ ಕೋಟಿಗಾನಹಳ್ಳಿಯಲ್ಲಿ ಜು.1 ರಂದು ಸೋಮವಾರ ಗ್ರಾಮ ದೇವತೆಯಾದ ಪಾಲುಕ್ಕಮ್ಮ ದೇವಾಲಯದ ನೂತನ ನಿರ್ಮಿತ ವಿಮಾನ ಗೋಪುರ ಕಳಶ ಪ್ರತಿಷ್ಠಾಪನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಜೂ.30ರಂದು ಸಂಜೆ 6 ಗಂಟೆಗೆ ಗಣಪತಿ ಪೂಜೆ, ಕಳಶ ಸ್ಥಾಪನೆ, ಪ್ರಧಾನ ಹೋಮ ಏರ್ಪಡಿಸಲಾಗಿದೆ. ಬೆಂಗಳೂರಿನ ಪುಣ್ಯ ಪ್ರಕಾಶನ ಹಾಗೂ ಪಿ.ಮುನಿಶಾಮಪ್ಪ ಪ್ರತಿಷ್ಠಾಪನಾ ಕೋಟಿಗಾನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಡಾ. ವೀಣಾ ಸಂಪಾದಿಸಿರುವ ನನ್ನ ಪ್ರೀತಿಯ ಹಿಟ್ಲರ್ ಪುಸ್ತಕ ಬಿಡುಗಡೆ ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅಂದು ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ರಾಮನಗರ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಶಕುಂತಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ತಾಂತ್ರಿಕ ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಕೆ.ವಿ. ನಂಜುಂಡಗೌಡ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸರ್ಕಾರದ ಅಡ್ವೋಕೆಟ್ ಜನರಲ್ ರವಿವರ್ಮ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ.