28ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ನಾಪತ್ತೆ: ಪತ್ನಿ ದೂರು
ಕೋಲಾರ: ನಗರದ ವಾರ್ಡ್ ನಂ.28ರಿಂದ ನಗರಸಭಾ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಮುನಿರಾಜು ಎಂಬುವರು ಶುಕ್ರವಾರ ಬೆಳಿಗ್ಗೆ 5.30ರಲ್ಲಿ ಮನೆಯಿಂದ ಹೊರ ಬಂದು ನಿಗೂಢ ರೀತಿಯಲ್ಲಿ ನಾಪತ್ತೆ ಆಗಿದ್ದಾರೆ.
ಈ ಸಂಬಂಧ ನಗರಠಾಣೆಗೆ ದೂರು ನೀಡಿರುವ ಮುನಿರಾಜು ಪತ್ನಿ ನಾಗಮ್ಮ ತಮ್ಮ ಪತಿಯನ್ನು ಯಾರೋ ಅಪಹರಣ ಮಾಡಿದ್ದು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.
ಮನೆಯಿಂದ ಹೊರ ಹೋದ ಪತಿ 20 ನಿಮಿಷಗಳ ನಂತರ ತಮ್ಮ ಮೊಬೈಲ್ ಫೋನಿನಲ್ಲಿ ನನ್ನ ಜತೆ ಮಾತನಾಡಿ ಯಾರೋ ನನ್ನನ್ನು ಅಪಹರಿಸಿದ್ದಾರೆಂದು ಹೇಳಿದರು.
ನೀನು ಮತ್ತು ಮಕ್ಕಳು ಜೋಪಾನ ಎಂದು ಆಳುತ್ತಾ ಹೇಳಿದರೆಂದು ದೂರಿನಲ್ಲಿ ತಿಳಿಸಿರುವ ಪತ್ನಿ ನಾಗಮ್ಮ, ಮತ್ತೆ ತಾವು ಫೋನ್ ಮಾಡಿದಾಗ ಪತಿಯ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ತಿಳಿಸಿದ್ದಾರೆ. ಪತಿಯ ನಾಪತ್ತೆ ಬಗ್ಗೆ ನಾಗಮ್ಮ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಅವರಿಗೂ ದೂರು ನೀಡಿದ್ದಾರಲ್ಲದೆ, ನಗರಠಾಣೆಯ ಮುಂದೆ ತಮ್ಮ ಸಂಬಂಧಿಕರ ಜತೆ ಪ್ರತಿಭಟನೆ ನಡೆಸಿ ಮುನಿರಾಜು ಅವರನ್ನು ಅಪಹರಣ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.