ವೇಮಗಲ್ಗೆ ನೀರು ಪೂರೈಸಲು ಒತ್ತಾಯಿಸಿ ಜಿ.ಪಂ ಸಿಇಓಗೆ ಮನವಿ
ಕೋಲಾರ: ತಾಲೂಕಿನ ವೇಮಗಲ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಸರ್ಕಾರದ ವಿವಿಧ ಯೋಜನೆಗಳಡಿ ನೀರಿನ ವ್ಯವಸ್ಥೆ ಮಾಡಲು ಒತ್ತಾಯಿಸಿ ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆಯ ಕಾರ್ಯಕರ್ತರು ಶುಕ್ರವಾರ ಜಿಲ್ಲಾ ಪಂಚಾಯಿತಿ ಸಿಇಓ ಝಲ್ಫಿಕರ್ವುಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ವೇಮಗಲ್ ಗ್ರಾಮ ನಿವಾಸಿಗಳು ಕುಡಿಯುವ ನೀರಿನ ಪೂರೈಕೆ ಇಲ್ಲದೇ ಕಳೆದ ಆರು ತಿಂಗಳ ಕಾಲದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿನ ಸ್ಥಳಿಯ ಆಡಳಿತವು ಕುಡಿಯುವ ನೀರು ಪೂರೈಸುವಲ್ಲಿ ಇದುವರೆಗೂ ಯಾವುದೇ ಪರಿಹಾರಾತ್ಮಕ ಕ್ರಮ ಕೈಗೊಳ್ಳದೇ ಸಂಪೂರ್ಣ ವಿಫಲಗೊಂಡಿದೆ. ಆದ್ದರಿಂದ ವಿವಿಧ ಯೋಜನೆಗಳಡಿ ಗ್ರಾಮಕ್ಕೆ ಕುಡಿಯುವ ನೀರನ್ನು ಪೂರೈಸುವಂತೆ ಅವರು ಆಗ್ರಹಪಡಿಸಿದರು.
ಇಲ್ಲಿನ ತೋಟಗಳ ಮಾಲೀಕರ ಮನಮೊಲಿಸಿ ಇಲ್ಲಿಂದ ನೀರಿನ ಸಂಪರ್ಕ ಪಡೆದು ಅಥವಾ ಟ್ಯಾಂಕರ್ಗಳ ಮೂಲಕ ನೀರನ್ನು ತಂದು ಮುಖ್ಯ ಟ್ಯಾಂಕ್ಗೆ ತುಂಬಿಸಿ ಅಲ್ಲಿಂದ ಗ್ರಾಮದ ಸಾರ್ವಜನಿಕ ಕೊಳಾಯಿಗಳ ಜತೆಗೆ ಮನೆಗಳಿಗೆ ಸಂಪರ್ಕ ನೀಡಿರುವ ನಲ್ಲಿಗಳಿಗೆ ನೀರು ಪೂರೈಸುವಂತೆ ಅವರು ಒತ್ತಾಯಿಸಿದರು. ಇಲ್ಲವೇ ವಿವಿಧ ಯೋಜನೆಗಳಡಿ ಹೊಸ ಕೊಳವೆ ಬಾವಿಗಳನ್ನು ಕೊರೆದು ನೀರು ಪೂರೈಸುವಂತೆ ಮನವಿ ಮಾಡಿದರು.
ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆಯ ರಾಜ್ಯಾಧ್ಯಕ್ಷ ಕೆ. ನರೇಂದ್ರಬಾಬು, ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣರೆಡ್ಡಿ, ಕೆ. ಸುಮನ್, ಸೋಮಶೇಖರ್, ರವಿಚಂದ್ರ, ಎನ್. ಶ್ರೀನಿವಾಸಗೌಡ, ರವೀಂದ್ರಬಾಬು, ಸುಧಾಕರ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.