ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗುರುರಾಯರ ಮಠದಲ್ಲಿ ವಿಶೇಷ ಹೂವಿನಾಲಂಕಾರ

Parashurama
Updated On : 19 Mar 2013, 11:36 am

ಕೋಲಾರ: ನಗರದ ಬ್ರಾಹ್ಮಣರ ಬೀದಿಯಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಜಿಗಳ 418ನೇ ಜಯಂತಿ ಪ್ರಯುಕ್ತ ರಾಯರ ಬೃಂದಾವನಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಸಮಾಜ ಸೇವಕ, ನಗರಸಭೆ ಮಾಜಿ ಸದಸ್ಯ ಮುಕ್ಕಡ್ ವೆಂಕಟೇಶ್ ಅವರು ಹೂವಿನ ಅಲಂಕಾರದ ಸೇವಾಕರ್ತರಾಗಿ ಗುರುರಾಯರಿಗೆ ಹರಿಕೆ ತೀರಿಸಿದರು. ಮಠದಲ್ಲಿ ವಿಶೇಷ ಪೂಜೆ, ಸಂಜೆ ಪುಷ್ಪಪಲ್ಲಕಿ ಉತ್ಸವ ನಡೆಯಿತು. ನೂರಾರು ಭಕ್ತಾಧಿಕಾರಿಗಳು ರಾಯರ ದರ್ಶನ ಪಡೆದರು.
ರಾಜಪಕ್ಷೆ ನೀತಿ ಖಂಡಿಸಿ ಪ್ರತಿಭಟನೆ
ಕೆಜಿಎಫ್: ಶ್ರೀಲಂಕ ದೇಶದಲ್ಲಿ ತಮಿಳಿಗರನ್ನು ಅತಿ ಕ್ರೂರವಾಗಿ ಕೊಲ್ಲುತ್ತಿರುವ ಮತ್ತು ಮಾನವ ಹಕ್ಕನ್ನು ಉಲ್ಲಂಘನೆ ಮಾಡುತ್ತಿರುವ ಶ್ರೀಲಂಕ ದೇಶದ ಪ್ರಧಾನಿ ರಾಜಪಕ್ಷೆ ನೀತಿ ಖಂಡಿಸಿ ಕೆಜಿಎಫ್ ಘಟಕದ ನಾಮ್ ತಮಿಳರ್ ಕಚ್ಚಿ ಸೇರಿದಂತೆ ಇತರೆ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳು ಕೆಜಿಎಫ್ ನಗರಸಭೆ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿದರು. ಶ್ರೀಲಂಕ ದೇಶದಲ್ಲಿ ವಾಸಿಸುವ ತಮಿಳರ ಮೇಲೆ ನಿರಂತರವಾಗಿ ಅತ್ಯಾಚಾರ, ಮಾನಭಂಗ, ಹಿಂಸೆ, ಕೊಲೆ ಮುಂತಾದ ದಾಳಿ ನಡೆಸುತ್ತಿರುವ ಅಲ್ಲಿನ ಸರ್ಕಾರ ತಮಿಳರನ್ನು ಮಾನವೀಯತೆ ದೃಷ್ಟಿಯಿಂದ ಕಾಣದೆ ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ಮಾನವ ಹಕ್ಕನ್ನು ಉಲ್ಲಂಘನೆ ಮಾಡುತ್ತಿರುವ ಶ್ರೀಲಂಕದ ಪ್ರಧಾನಿ ರಾಜಪಕ್ಷೆ ಕೂಡಲೇ ರಾಜಿನಾಮೆ ನೀಡಬೇಕು.
ಅಲ್ಲಿನ ತಮಿಳರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಕೆಜಿಎಫ್ ಶಾಸಕ ವೈ.ಸಂಪಂಗಿ ಶ್ರೀಲಂಕ ದೇಶದಲ್ಲಿ ತಮಿಳರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡನೀಯ. ತಾವುಗಳು ನಡೆಸುತ್ತಿರುವ ಹೋರಾಟದಲ್ಲಿ ಎಲ್ಲರೂ ಪಕ್ಷಭೇದ ಮರೆತು ಅಲ್ಲಿನ ತಮಿಳರಿಗೆ ನ್ಯಾಯ ಸಿಗಲು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದರು.
ರಾಜಕೀಯ ಮುಂಖಂಡರು, ಸಂಘ ಸಂಸ್ಥೆಗಳ ಮುಖಂಡರು ಸೇರಿದಂತೆ ಮಾನವ ಹಕ್ಕುಗಳ ಸಂಸ್ಥೆಯ ಮುಖಂಡರು, ಮಸೀದಿಯ ಇಮಾಮ್ ಸಾಬ್, ಚರ್ಚ್ ಫಾದರ್‌ಗಳು ಹಾಗೂ ನಾಮ್ ತಮಿಳರ್ ಕಚ್ಚಿಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments