ತಾಪಂ ಕಚೇರಿ ಪೀಠೋಪಕರಣ ಜಪ್ತಿ
ಬಾಗೇಪಲ್ಲಿ: ಪಟ್ಟಣದ ಕಾಲೇಜು, ಹಾಸ್ಟೆಲ್ಗಳಿಗೆ ಆಹಾರ- ಪದಾರ್ಥಗಳನ್ನು ಸರಬರಾಜು ಮಾಡಿದ ಬಾಬ್ತಿನ ಹಣವನ್ನು ರಾಜರಾಜೇಶ್ವರಿ ಸ್ವಸಹಾಯ ಸಂಘಕ್ಕೆ ಪಾವತಿಸಲು ವಿಫಲವಾದ ತಾಲೂಕು ಪಂಚಾಯಿತಿ ಕಚೇರಿಯನ್ನು ಜಪ್ತಿ ಮಾಡುವಂತೆ ಸ್ಥಳೀಯ ನ್ಯಾಯಾಲಯ ಆದೇಶದ ಹಿನ್ನೆಲೆಯಲ್ಲಿ ಕೋರ್ಟಿನ ಸಿಬ್ಬಂದಿ ತಾಪಂ ಕಚೇರಿಯ ಪೀಠೋಪಕರಣಗಳು ಮತ್ತು ಕಚೇರಿಯ ವಾಹನಗಳನ್ನು ಜಪ್ತಿ ಮಾಡಿದ ಘಟನೆ ನಡೆದಿದೆ. ಪಟ್ಟಣದ ರಾಜರಾಜೇಶ್ವರಿ ಸ್ವಸಹಾಯ ಸಂಘದ ವತಿಯಿಂದ ಪಟ್ಟಣದ ಬಿಸಿಎಂ ಹಾಸ್ಟೆಲ್ಗಳಿಗೆ 2010- 11ನೇ ಸಾಲಿನಲ್ಲಿ ಆಹಾರ ಪದಾರ್ಥ ಸರಬರಾಜು ಮಾಡಿದ್ದು, ಒಟ್ಟು 5ಲಕ್ಷ 52 ಸಾವಿರ ಪಾವತಿಸಬೇಕಾಗಿತ್ತು. ಆದರೆ, ಕೇವಲ 1.93 ಲಕ್ಷ ನೀಡಿ ಉಳಿದ 3.59 ಲಕ್ಷ ನೀಡಲು ಸುಮಾರು ಎರಡು ವರ್ಷಗಳಿಂದಲೂ ಸತಾಯಿಸುತ್ತಾ ಬಂದಿದ್ದ ಇಲ್ಲಿನ ತಾಪಂ ಸಿಬ್ಬಂದಿ ಮತ್ತು ಇಲಾಖೆಯ ವಿರುದ್ಧ ರಾಜರಾಜೇಶ್ವರಿ ಸ್ವಸಹಾಯ ಸಂಘದ ಅಧ್ಯಕ್ಷರು ಸ್ಥಳೀಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಸ್ವಸಹಾಯ ಸಂಘಕ್ಕೆ ಪಾವತಿಸಬೇಕಾಗಿದ್ದ 3.59 ಲಕ್ಷ, ಅದಕ್ಕೆ ಬಡ್ಡಿ, ಖರ್ಚು ಇತರೆ ಸೇರಿ ಒಟ್ಟು 4.38 ಲಕ್ಷ ಪಾವತಿಸುವಂತೆ ಆದೇಶ ನೀಡಿತ್ತು. ಇದರಂತೆ ತಾಪಂ ಅಧಿಕಾರಿಗಳು ನಡೆದುಕೊಳ್ಳದಿದ್ದರಿಂದ ತಾಪಂ ಕಚೇರಿಯನ್ನು ಜಪ್ತಿ ಮಾಡಲು ನ್ಯಾಯಾಲಯ ಆದೇಶ ನೀಡಿದ್ದು, ನ್ಯಾಯಾಲಯದ ಅಮೀನ್ ಅವರು ತಾಪಂ ಕಚೇರಿಗೆ ಆಗಮಿಸಿ ಕಚೇರಿಯಲ್ಲಿದ್ದ ಪೀಠೋಪಕರಣ ಮತ್ತು ಕಚೇರಿಯ ವಾಹನ ಜಪ್ತಿ ಮಾಡಿದರು.
ಸರ್ಕಾರಿ ಶಾಲೆಯಲ್ಲಿ ಬ್ಯಾಟರಿ ಕಳವು
ಕೋಲಾರ: ತಾಲೂಕಿನ ಆರಾಭಿಕೊತ್ತನೂರಿನ ಸರ್ಕಾರಿ ಪ್ರೌಢಶಾಲೆಯ ಕಂಪ್ಯೂಟರ್ ಕೊಠಡಿಯ ಬಾಗಿಲು ಮುರಿದು ಯಾರೋ ಕಳ್ಳರು ಸುಮಾರು 1.90 ಲಕ್ಷ ರು. ಬೆಲೆ ಬ್ಯಾಟರಿಗಳನ್ನು ಕಳ್ಳತನ ಮಾಡಿದ್ದಾರೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು ಮಂಗಳವಾರ ಶಾಲೆ ತೆರೆಯಲು ಶಿಕ್ಷಕರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮಾಂತರ ಪೊಲೀಸ್ ಠಾಣೆಗೆ ಶಾಲಾ ಮುಖ್ಯ ಶಿಕ್ಷಕಿ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.