ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತಾಲೂಕು ಕಚೇರಿ ಎದುರು ರೈತ ಸಂಘ ಧರಣಿ

Parashurama
Updated On : 19 Mar 2013, 11:37 am

ಕ.ಪ್ರ.ವಾರ್ತೆ ್ಣ ಬಂಗಾರಪೇಟೆ ್ಣ ಮಾ.19
ಪಟ್ಟಣದಲ್ಲಿ ಹೆಚ್ಚುವರಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ರೈತರಿಂದ ಬಲವಂತವಾಗಿ ಭೂಮಿ ವಶಪಡಿಸಿಕೊಂಡಿರುವುದನ್ನು ವಿರೋಧಿಸಿ ರೈತ ಸಂಘದ ಮುಖಂಡರು ತಾಲೂಕು ಕಚೇರಿ ಮುಂದೆ ಧರಣಿ ಮಾಡಿದರು.
ಪಟ್ಟಣದಲ್ಲಿರುವ ನ್ಯಾಯಾಲಯದಲ್ಲಿ ಪ್ರಕರಣಗಳು ಹೆಚ್ಚಾಗಿರುವುದರಿಂದ ಮತ್ತೊಂದು ಹೆಚ್ಚುವರಿ ನ್ಯಾಯಾಲಯ ಮಂಜೂರಾಗಿದ್ದು ಇದಕ್ಕೆ ಹೊಸ ಕಟ್ಟಡ ಕಟ್ಟಲು ದೊಡ್ಡಅಂಕಂಡಹಳ್ಳಿ ಗ್ರಾಮದ ಬಿ.ಆರ್. ಮಂಜುನಾಥ್, ಶಂಕರಪ್ಪ, ಶಶಿಕಲಾ ಮತ್ತು ಲಕ್ಷ್ಮಮ್ಮ ಎಂಬುವರಿಗೆ ಸೇರಿದ ನಾಲ್ಕು ಎಕರೆ ಜಮೀನು ಕೆ.ಸಿ. ರೆಡ್ಡಿ ಪ್ರಥಮ ದರ್ಜೆ ಕಾಲೇಜು ಎದುರಿಗೆ ಜಾಗವನ್ನು ರೈತರಿಂದ ಬಲವಂತವಾಗಿ ಉಪ ವಿಭಾಗಾಧಿಕಾರಿಗಳು ವಶಪಡಿಸಿಕೊಳ್ಳಲಾಗಿದೆ. ಭೂಸ್ವಾಧೀನ ಬಗ್ಗೆ ಎಚ್ಚರಿಕೆ ಸಹ ನೀಡದೆ ಅಗ್ಗದ ಬೆಲೆಗೆ ಜಮೀನನ್ನು ಖರೀದಿ ಮಾಡಿದ್ದಾರೆ ಎಂದು ಆರೋಪಿಸಿರುವ ರೈತರು ಈ ಜಮೀನುಗಳೇ ಸಂತ್ರಸ್ತ ರೈತರಿಗೆ ಜೀವನಾಂಶಕ್ಕೆ ದಾರಿಯಾಗಿದ್ದು, ಕೂಡಲೇ ರೈತರಿಂದ ವಶಪಡಿಸಿಕೊಂಡಿರುವ ಜಮೀನಿಗೆ ಮಾರುಕಟ್ಟೆ ಬೆಲೆ ಕೊಡಬೇಕು ಇಲ್ಲದಿದ್ದರೆ ಪರ್ಯಾಯ ಜಮೀನನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಉಪವಿಬಾಗಾಧಿಕಾರಿಗಳು ರೈತರಿಗೆ ನೋಟಿಸ್ ನೀಡದೆ ಮತ್ತು ರೈತರಿಂದ ಬೆಲೆ ಬಗ್ಗೆ ಚರ್ಚಿಸದೆ ಏಕಾಏಕಿ ತೀರ್ಮಾನ ತೆಗೆದುಕೊಂಡು ರೈತರನ್ನು ವಂಚಿಸುವ ಹುನ್ನಾರ ಮಾಡಿದ್ದಾರೆ. ಇರುವ ಭೂಮಿಯನ್ನು ಕಳೆದುಕೊಂಡು ರೈತರು ಬೀದಿಪಾಲಾಗುವುದು ಖಚಿತವಾಗಿದೆ ಆದ್ದರಿಂದ ಕೂಡಲೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟು ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ಒದಗಿಸಿ ನಂತರ ಮುಂದುವರೆಯಲಿ ಎಂದು ಆಗ್ರಹಿಸಿದರು ತಹಸೀಲ್ದಾರ್ ನಾಗರಾಜ್ ಅವರಿಗೆ ಮನವಿ ಪತ್ರ ನೀಡಿದರು. ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ರಾಮೇಗೌಡ, ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ಕಾಮಸಮುದ್ರ ಘಟಕದ ಅಧ್ಯಕ್ಷ ರಮೇಶ್, ರಾಮಕೃಷ್ಣಪ್ಪ,ಶ್ರೀನಿವಾಸ್, ಮಂಜುನಾಥ್, ಲಕ್ಷ್ಮಣ್, ನಾರಾಯಣಸ್ವಾಮಿ ಮುನಿಸ್ವಾಮಿಗೌಡ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments