ನ್ಯಾಯಾಂಗ ಬಂಧನದಲ್ಲಿದ್ದ ವ್ಯಕ್ತಿ ಸಾವು: ಶವವಿಟ್ಟು ಪ್ರತಿಭಟನೆ
ಕ.ಪ್ರ ವಾರ್ತೆ ್ಣ ಮುಳಬಾಗಿಲು ್ಣ ಮಾ. 19ನ್ಯಾಯಾಂಗ ಬಂಧನದಲ್ಲಿದ್ದ ವ್ಯಕ್ತಿಯೊಬ್ಬರು ಮೃತರಾದ ಹಿನ್ನೆಲೆಯಲ್ಲಿ ಕಾರಣ ತಿಳಿಯಲು ಪೊಲೀಸರು ಅವಕಾಶ ನೀಡಿಲ್ಲವೆಂದು ಆರೋಪಿಸಿ ಮೃತನ ಬಂಧುಗಳು ಮಂಗಳವಾರ ಮಿನಿ ವಿಧಾನಸೌಧ ಬಳಿ ಶವವಿಟ್ಟು ಪ್ರತಿಭಟನೆ ನಡೆಸಿದಾಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಉಂಟಾಯಿತು.
ವಿವೇಕಾನಂದ ನಗರದ ಮಹೇಶ್(35) ಎಂಬುವರು ಕಳವು ಮಾಡಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಮೃತರಾದ ಕಾರಣ ಅವರ ಶವ ಮುಳಬಾಗಿಲು ಪೊಲೀಸರು ಅವರ ಮನೆಗೆ ಸಾಗಿಸಿದ್ದರು. ಸಾವಿಗೆ ಕಾರಣವೇನೆಂದು ಮೃತನ ಸಂಬಂಧಿಕರು ಕೇಳಿದಾಗ ಪೊಲೀಸರು ಉತ್ತರ ನೀಡದಿದ್ದರಿಂದ ಸಾವಿಗೆ ಕಾರಣ ತಿಳಿಯಲು ಪುರಸಭೆ ಮಾಜಿ ಅಧ್ಯಕ್ಷ ಕೆ.ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಮೃತರ ಬಂಧುಗಳು ಶವವನ್ನು ಮಿನಿವಿಧಾನಸೌಧ ಬಳಿ ಇಟ್ಟು ಪ್ರತಿಭಟನೆ ನಡೆಸಿದರು. ಶವವಿಟ್ಟು ಪ್ರತಿಭಟನೆ ನಡೆಸುವುದು ಕಾನೂನು ಬಾಹಿರವೆಂದು ಪೊಲೀಸರು ಹೇಳಿದಾಗ ಸಿಪಿಐ ಶಿವಕುಮಾರ್, ಪ್ರತಿಭಟನಾಕಾರರ ನಡುವೆ ಚಕಮಕಿ ನಡೆಯಿತು.
ರಾಜ್ಯ ಕಿಸಾನ್ಸಭಾ ಮುಖಂಡ ಎಂ. ಗೋಪಾಲ್ ಮತ್ತು ದಲಿತ ಮುಖಂಡ ವಿಜಯಕುಮಾರ್. ಕಸುವುಗಾನಹಳ್ಳಿ ರಾಜು ಮುಂತಾದವರು ಸಾವಿಗೆ ಕಾರಣ ತಿಳಿಯಲು ಮೃತನ ಕಡೆಯವರಿಗೆ ಅಧಿಕಾರವಿದೆ ಎಂದರು. ತಹಸೀಲ್ದಾರ್ ರಾಮಮೂರ್ತಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರಾದರೂ, ಸಿಪಿಐ ಶಿವಕುಮಾರ್ ಅವರು ಪ್ರತಿಭಟನಾಕಾರರೊಂದಿಗೆ ದರ್ಪದಿಂದ ವರ್ತಿಸಿದ್ದಾರೆ, ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪಟ್ಟು ಹಿಡಿದರು. ಡಿವೈಎಸ್ಪಿ ಸಿದ್ದರಾಮಯ್ಯ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.