ಮಹಿಳೆಯರು ಹೇಗೆ ನಡೆದುಕೊಳ್ಳಬೇಕು...
ಕ.ಪ್ರ ವಾರ್ತೆ ್ಣ ಚಿಕ್ಕಬಳ್ಳಾಪುರ ್ಣ ಮಾ.21
ಇಂತಹ ಶೈಲಿಯ ಬಟ್ಟೆಯನ್ನೇ ಮಹಿಳೆಯರು ಕಡ್ಡಾಯವಾಗಿ ಧರಿಸಬೇಕೆಂದೇಳುವುದು ಸರಿಯೇ? ಮನೆಯಲ್ಲಿ ಕುಟುಂಬದವರು ಮಕ್ಕಳ ಸಮೇತ ನೋಡುವ ಟಿವಿ ವಾಹಿನಿಗಳಲ್ಲಿ ಅಶ್ಲೀಲವಾಗಿ ಮಹಿಳೆಯರನ್ನು ತೋರಿಸುತ್ತಿದ್ದರೂ ಅದನ್ನು ಸೆನ್ಸಾರ್ ಏಕೆ ಮಾಡೋದಿಲ.್ಲ ಇದು ಮಹಿಳೆಯರನ್ನು ಕೆಟ್ಟದಾಗಿ ನೋಡುವ ಭಾವನೆಯನ್ನು ಗಂಡಸರಲ್ಲಿ ಬೆಳೆಸುವುದಿಲ್ಲವೇ? ಗಂಡ ಹೇಳಿದ್ದನ್ನೆಲ್ಲಾ ಹೆಂಡತಿ ಕೇಳಬೇಕೇ? ಸಮಾಜದಲ್ಲಿ ಗೌರವವನ್ನು ಪಡೆದುಕೊಂಡು ಉತ್ತಮ ಜೀವನ ನಡೆಸಬೇಕಾದರೆ ಮಹಿಳೆಯರು ಯಾವ ರೀತಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಇವು ನಗರದ ತಾ. ಪಂ. ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಅಧಿನಿಯಮ 2005 ಕಾಯ್ದೆ ಬಗ್ಗೆ ಎರಡು ದಿನಗಳ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರದ ಮೊದಲನೇ ದಿನದಂದು ಪೊಲೀಸರು, ಶಿಶು ಅಭಿವೃದ್ಧಿ ಅಧಿಕಾರಿಗಳು, ಮಹಿಳಾ ಸಾಂತ್ವನ ಕೇಂದ್ರದ ಕಾರ್ಯಕರ್ತರು ಸೇರಿದಂತೆ ಅನೇಕರಿಂದ ಕೇಳಿ ಬಂದ ಬಗೆಬಗೆಯ ಪ್ರಶ್ನೆಗಳು.
ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ಸೇರಿದಂತೆ ನಾನಾ ರೀತಿಯಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವುದು ಹೇಗೆ ಎಂಬುದರ ಕುರಿತು ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ ಹಲವರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕೆಲವರು ಮಹಿಳೆಯರನ್ನು ಕಿರುಕುಳಕ್ಕೆ ಗುರಿ ಮಾಡುವ ನಿಟ್ಟಿನಲ್ಲಿ ಕೆಲ ಅಂಶಗಳು ಪ್ರಭಾವ ಬೀರುತ್ತಿದ್ದರೂ ಕ್ರಮ ಕೈಗೊಳ್ಳದೇ ಸುಮ್ಮನಿದ್ದು ಮತ್ತೊಂದೆಡೆ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯಬೇಕೆಂಬ ಮಾತನ್ನು ಹೇಳಿದರೆ ಏನಾದರೂ ಪ್ರಯೋಜನ ಇದೆಯೇ ಎಂದು ನೇರವಾಗಿ ಕೇಳುವ ಮೂಲಕ ಸಮಾಜದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದುಷ್ಪರಿಣಾಮ ಬೀರುತ್ತಿರುವ ಅಂಶಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮಹಿಳೆಯರ ಡ್ರೆಸ್ ಕೋಡ್ ಬಗ್ಗೆ ಈಗ ಚರ್ಚೆಯಾಗುತ್ತಿದೆ. ಇದರಲ್ಲಿ ಮಹಿಳೆಯರಿಗೆ ಇಂತಹ ಬಟ್ಟೆಗಳನ್ನು ಹಾಕಬೇಕೆಂದು ಒತ್ತಾಯಿಸುವುದು ಸರಿಯೇ ಎಂಬ ಪ್ರಶ್ನೆಗೆ, ಭಾರತ ತನ್ನದೇ ಆದ ಸಂಸ್ಕೃತಿ, ಕಲೆ ಹೊಂದಿದೆ. ಹಾಗೆಯೇ ಮಹಿಳೆಯರಿಗೆ ಇಲ್ಲಿ ವಿಶೇಷ ಸ್ಥಾನಮಾನ ನೀಡಿ ಗೌರವಿಸಲಾಗುತ್ತಿದೆ. ಇಂತಹ ಮಹಿಳೆ ಸಮಾಜದಲ್ಲಿನ ಉತ್ತಮ ವಾತಾವರಣವನ್ನು ಕೆಡಿಸುವ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ. ಮಹಿಳಾ ಸ್ಥಾನಕ್ಕೆ ಗೌರವ ತರುವ ನಿಟ್ಟಿನಲ್ಲಿ ಮಾದರಿಯಾಗಬೇಕು. ಅದೇ ರೀತಿ ಮಹಿಳೆಯರ ಮೇಲೆ ಒತ್ತಡವನ್ನು ಹೇರಿ ಹೀಗೆಯೇ ಇರಬೇಕೆಂದು ಅವರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದು ಸಹ ಸರಿಯಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂತು.
ಇದೀಗ ಟಿವಿಯಲ್ಲಿ ಬರುತ್ತಿರುವ ಧಾರವಾಹಿಗಳು, ಕಾರ್ಯಕ್ರಮಗಳು ಟಿಆರರ್ಪಿ ವ್ಯಾಮೋಹದಿಂದ ದಾರಿ ತಪ್ಪಿವೆ ಎಂಬ ರೀತಿಯಲ್ಲಿ ಪ್ರಸಾರವಾಗುತ್ತಿವೆ. ಹೆಚ್ಚಿಗೆ ಅರೆಬೆತ್ತಲೆಯ ಮಹಿಳೆಯರನ್ನು ತೋರಿಸಲಾಗುತ್ತದೆ. ಹಾಗೆಯೇ ಅಪರಾಧ ಪ್ರಕರಣಗಳನ್ನು ವೈಭವೀಕರಿಸಲಾಗುತ್ತಿದೆ. ಇದಕ್ಕೂ ಕಡಿವಾಣ ಬೇಕಾಗಿರುವುದು ಮೊದಲು ಅವಶ್ಯಕವಿದೆ ಎಂಬ ಒತ್ತಾಯ ಕೇಳಿ ಬಂತು. ಮಹಿಳೆಯರು ದೌರ್ಜನ್ಯ, ಶೋಷಣೆ ವಿರುದ್ಧ ಎಚ್ಚೆತ್ತುಕೊಳ್ಳಬೇಕು. ತಮ್ಮ ಸುತ್ತಮುತ್ತಲಿನಲ್ಲಿ ಇತರೆ ಮಹಿಳೆಯರು ಶೋಷಣೆಗೆ ಗುರಿಯಾದಾಗ ಅವರನ್ನು ರಕ್ಷಿಸಬೇಕು ಎಂದು ಅವರು ತಿಳಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.