ಮತಪಟ್ಟಿಗೆ ಅರ್ಹ ದಾಖಲೆ ಮಾತ್ರ ಪರಿಗಣಿಸಿ
ಮಾಲೂರು: ಮತದಾರ ಪಟ್ಟಿಗೆ ಅರ್ಹ ದಾಖಲೆಗಳಿಲ್ಲದ ಅರ್ಜಿಗಳನ್ನು ಪರಿಗಣಿಸದಂತೆ ಆದೇಶ ನೀಡಿರುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಹೇಳಿದರು. ತಾಲೂಕಿನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಾಗಿ ನಿರ್ಮಿಸಿರುವ ಮತಗಟ್ಟೆಗಳಿಗೆ ಸೋಮವಾರ ಭೇಟಿ ನೀಡಿದ ನಂತರ ಪತ್ರಕರ್ತರೊಡನೆ ಮಾತನಾಡಿದ ಅಳರು, ಮತದಾರ ಪಟ್ಟಿಗಾಗಿ ಅರ್ಜಿ ನೀಡುವ ವಿಳಾಸಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಇನ್ನು ಸೆರ್ಪೆಡೆಗೆ ಅವಕಾಶ ಇದೆ ಎಂದರು. ಹೆಸರು ಸೇರ್ಪೆಡೆಗಳಿಗೆ ಒಬ್ಬನೇ ವ್ಯಕ್ತಿ ಸಮಾಜ ಸೇವೆ ಹೆಸರಿನಲ್ಲಿ ಒಟ್ಟಿಗೆ ನೂರಾರು ಅರ್ಜಿ ನೀಡುತ್ತಿದ್ದು, ಕೆಲವು ಗ್ರಾಮಗಳ ಮತಗಟ್ಟೆಯಲ್ಲಿ ನೂರಾರು ಮತದಾರರು ಹೆಚ್ಚಾಗುತ್ತಿರುವ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಒಬ್ಬನೇ ವ್ಯಕ್ತಿ ನೂರಾರು ಅರ್ಜಿ ತಂದು ಸೇರ್ಪಡೆಗೆ ಪ್ರಯತ್ಸಿಸಿದರೆ ಅದನ್ನು ತಿರಸ್ಕರಿಸಬೇಕಾಗಿ ಸ್ಥಳದಲ್ಲಿದ್ದ ತಹಸೀಲ್ದಾರ್ ನಂಜಯ್ಯ ರವರಿಗೆ ಆದೇಶಿಸಿದರು. ಅಂತಹ ವ್ಯಕ್ತಿ ಸಮಾಜ ಸೇವೆಯನ್ನು ಚುನಾವಣೆ ನಂತರ ಇಟ್ಟುಕೊಳ್ಳಬೇಕಾಗಿ ತಿಳಿಸಿದರು.
ಮುಸ್ಲಿಂ ಜನಾಂಗ ಶಿಕ್ಷಣಕ್ಕೆ ಆದ್ಯತೆ ನೀಡಲಿ
ಗೌರಿಬಿದನೂರು: ಮುಸ್ಲಿಂ ಜನಾಂಗ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಶಾಸಕ ಶಿವಶಂಕರರೆಡ್ಡಿ ಕಿವಿಮಾತು ಹೇಳಿದ್ದಾರೆ. ಜಾಮಿಯಾ ಮಸೀದಿ ಆಡಳಿತ ಮಂಡಳಿ ಆಶ್ರಯದಲ್ಲಿ ನ್ಯಾಮತ್ಬೀಬೀ ದರ್ಗಾ ಆವರಣದಲ್ಲಿ ಏರ್ಪಡಿಸಿದ್ದ ಮುಸ್ಲಿಂ ಜನಾಂಗ ವಧೂ-ವರರ ಉಚಿತ ಸಾಮೂಹಿ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿದರು. ಉಚಿತ ವಿವಾಹಗಳಿಂದ ಬಡವರಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ ಅಲ್ಪ ಸಂಖ್ಯಾತರಿಗೆ ಇರುವ ಸರ್ಕಾರಿ ಯೋಜನೆಗಳನ್ನು ಸದ್ಬಳಿಕೆ ಮಾಡಿಕೊಂಡು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದರು. ಮಸೀದಿಯ ಇಮಾಮ್ ಮೌಲಾನಾ ಅಶ್ರಫ್ ಅಲಿ ಮಾತನಾಡಿದರು.ಚಿಕ್ಕಬಳ್ಳಾಪುರದ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಬಸ್.ರಫೀ ಉಲ್ಲಾಖಾನ್, ಪುರಸಭಾ ಸದಸ್ಯರಾದ ಷಫೀಕ್ಖಾನ್, ಕಲೀಂಉಲ್ಲಾ, ಸುಭಾನ್, ಜಿ.ಪಂ.ಸದಸ್ಯ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು. ಸಾಮೂಹಿಕ ವಿವಾಹದಲ್ಲಿ 15 ಜೋಡಿಗಳು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನೇಮಕ
ಕೋಲಾರ: ಜಿಲ್ಲಾ ಜೆಡಿಎಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್ ಮುಖಂಡ ಆರ್.ದಯಾನಂದ್ ಅವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.