ಕೋಲಾರ

ಚಿಂತಾಮಣಿಯಲ್ಲಿ ಜೆಡಿಎಸ್ ಜಯಭೇರಿ ಶತಸಿದ್ಧ: ಕೃಷ್ಣಾರೆಡ್ಡಿ

ಕ.ಪ್ರ. ವಾರ್ತೆ ್ಣ ಚಿಂತಾಮಣಿ ್ಣ  ಮಾ.29
ಕ್ಷೇತ್ರದಲ್ಲಿ ಜೆಡಿಎಸ್ ಜಯಭೇರಿ ಗಳಿಸುವುದು ಶತಸಿದ್ಧವೆಂದು ಜೆಡಿಎಸ್ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಜೆ.ಕೆ. ಕೃಷ್ಣಾರೆಡ್ಡಿ ತಿಳಿಸಿದರು.
ಅವರು ತಾಲೂಕಿನ ಬಟ್ಲಹಳ್ಳಿ ಮತ್ತು ಕಡದಲಮರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಜೆಡಿಎಸ ಪರ ಪ್ರಚಾರವನ್ನು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ನಂತರ ಕಾರ್ಯಕರ್ತರನ್ನು ಹಾಗೂ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಜೆ.ಕೆ. ಕೃಷ್ಣಾರೆಡ್ಡಿ ಕಳೆದ 5 ವರ್ಷಗಳಿಂದ ಚಿಂತಾಮಣಿ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಾಜ ಸೇವೆ ಜೊತೆಗೆ ಅಭಿವೃದ್ಧಿ ಕೆಲಸಗಳನ್ನು ಜನ ಸ್ವೀಕರಿಸಿ ನನ್ನನ್ನು ಆಶೀರ್ವಾದ ಮಾಡಿದ ಫಲವಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಜಯಭೇರಿ ಗಳಿಸುವುದು ಖಚಿತವೆಂದು ನುಡಿದರು.
ಸ್ವಾತಂತ್ರ್ಯ ಬಂದು 60 ವರ್ಷ ಕಳೆದರೂ ಅಭಿವೃದ್ಧಿ ಎಂದು ಹೇಳುವ ಸ್ಥಳೀಯ ಜನಪ್ರತಿನಿಧಿಗಳು ನೀರು, ರಸ್ತೆ, ವಿದ್ಯುತ್, ವಸತಿ ಸೌಲಭ್ಯಗಳನ್ನು ಜನರಿಗೆ ಕಲ್ಪಿಸುವಲ್ಲಿ ವಿಫಲಗೊಂಡಿರುವುದಾಗಿ ಶಾಸಕರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
 ಕೇವಲ 20 ತಿಂಗಳಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯ, ಉಚಿತ ಬೈಸಿಕಲ್, ವೃದ್ಧಾಪ್ಯ ವೇತನಾ ಸೇರಿದಂತೆ ಜನಪರ ಕಾರ್ಯಕ್ರಮಗಳನ್ನು ಜನರು ಇಂದಿಗೂ ಜೆಡಿಎಸ್ ಆಡಳಿತವನ್ನು ಬಯಸುತ್ತಿದ್ದಾರೆಂದು ಅವರು ತಿಳಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸ್ವಾಂಪಲ್ಲಿ, ಬಟ್ಲಹಳ್ಳಿ, ಅಂಕಾಲಮಡುಗು, ಕಡದಲಮರಿ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಜೆಡಿಎಸ್ ಬೆಂಬಲಿಸುವಂತೆ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ತಳಗವಾರ ರಾಜಗೋಪಾಲ್, ವಕೀಲರ ಸಂಘದ ಮಾಜಿ  ಅಧ್ಯಕ್ಷ ಬಿ.ಆರ್. ಶ್ರೀನಾಥ್,ನಗರಸಭಾ ಮಾಜಿ ಸದಸ್ಯ ಮಹಮದ್‌ಗೌಸ್, ಮುಖಂಡರಾದ ಯನಮಲಪಾಡಿ ಚಂದ್ರಾರೆಡ್ಡಿ, ಅಬ್ಬುಗುಂಡು ಸುಬ್ಬಾರೆಡ್ಡಿ, ದಿನ್ನಮಿಂದಪಲ್ಲಿ ಬೈರಾರೆಡ್ಡಿ, ಕೃಷ್ಣಮೂರ್ತಿ,ಶ್ರೀರಾಮರೆಡ್ಡಿ, ಮದ್ದಿರೆಡ್ಡಿ, ಶಿವಾರೆಡ್ಡಿ, ಕಿಟ್ಟಣ್ಣ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ