ಮುಳಬಾಗಲು: ತಾಲೂಕಿನ ರಾಜಕೀಯ ವಿಚಿತ್ರವಾದ ತಿರುವುಗಳನ್ನು ಪಡೆಯುತ್ತಿದೆ. ಪ್ರಮುಖ ಪ್ರಮುಖ ಪಕ್ಷವಾದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಭಿನ್ನಮತದ ಹಾದಿಯಲ್ಲಿ ಸಾಗಿದೆ. ಶುಕ್ರವಾರ ನಡೆದ ರಾಜಕೀಯ ಬೆಳವಣೆಗೆಯಲ್ಲಿ ಜೆಡಿಎಸ್ ಸ್ಧಳೀಯ ಮುಖಂಡರಾದ ಜಿ.ಎಂ. ಗೋವಿಂದಪ್ಪ. ಸಿ.ವಿ.ಗೋಪಾಲ್, ಶ್ರೀಧರ್‌ಮೂರ್ತಿ,ಅಲುವೇಲಮ್ಮ ರಾಜಗೋಪಾಲ್, ಡಾ.ಜಯರಾಮ್, ಶ್ರೀರಾಮಪ್ಪ ಗುರುವಾರ ಅಲಂಗೂರು ಗ್ರಾಮಕ್ಕೆ ಭೇಟಿ ನೀಡಿ ತಾಲೂಕು ಜೆಡಿಎಸ್ ಅಧ್ಯಕ್ಷ ಅಲಂಗೂರು ಶಿವಣ್ಣ ಅವರಿಗೆ ಮನವಿ ಸಲ್ಲಿಸಿ ಸ್ಧಳೀಯರಾದ ತಮ್ಮಲ್ಲಿ ಯಾರಿಗಾದರೂ ಒಬ್ಬರಿಗೆ ಮುಂದಿನ ವಿಧಾನಸಭೆಯಿಂದ ಸ್ಪರ್ಧಿಸಲು ಅವಕಾಶ ನೀಡಲು ಒತ್ತಾಯಿಸಿದ್ದಾರೆ. ಸ್ಧಳೀಯರಾದ ತಮ್ಮಲ್ಲಿ ಯಾರಿಗೆ ಟಿಕೆಟ್ ನೀಡಿ ಟಿಕೆಟ್ ನೀಡಿದರೂ ಸಹ ತಾವುಗಳು ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿ ಅವರು ಮನವಿಯಲ್ಲಿ ತಿಳಿಸಿದ್ದಾರೆ. ತಾವುಗಳು ಈಗಾಗಲೇ ಬೆಂಗಳೂರಿನ ಜೆಡಿಎಸ್ ಕಚೇರಿಗೆ ಭೇಟಿ ನೀಡಿ 'ಬಿ' ಫಾರಂಗಾಗಿ 15000 ರು.ಗಳನ್ನು ಪಾವತಿ ಮಾಡಿರುವುದಾಗಿ ತಿಳಿಸಿದ ಅವರು, ಸ್ಧಳೀಯರಿಗೆ ಮಾತ್ರ ಚುನಾವಣೆಯಲ್ಲಿ ಸ್ಪಧಿಸಲು ಅವಕಾಶ ಮಾಡಿಕೊಡಬೇಕು. ತಪ್ಪಿದಲ್ಲಿ ಈ ಕುರಿತು ತಾವುಗಳು ಪಕ್ಷದ ರಾಷ್ಚ್ರೀಯ ನಾಯಕ ಎಚ್.ಡಿ.ದೇವೇಗೌಡ ಅವರಿಗೂ ಹಾಗೂ ರಾಜ್ಯಾಧ್ಯಕ್ಷರಿಗೂ ಮನವಿ ಸಲ್ಲಿಸುವುದಾಗಿ ಹೇಳಿದರು. ಜಿ.ಎಂ. ಗೋವಿಂದಪ್ಪ ಮಾತನಾಡಿ, ಯಾವುದೇ ಕಾರಣಕ್ಕೂ ಹೊರಗಿನ ರಿಯಲ್ ಎಸ್ಟೇಟ್ ಧಣಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು. ಸ್ಧಳೀಯರಾದ ತಮ್ಮಲ್ಲಿ ಯಾರಿಗೆ ಅವಕಾಶ ನೀಡಿದರೂ ಮಿಕ್ಕವರು ತನು, ಮನ, ಧನಗಳೊಂದಿಗೆ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿ ಗೆಲ್ಲಿಸುವುದಾಗಿ ತಿಳಿಸಿದ್ದಾರೆ. ಈ ಸಂದರ್ಭ ಜೆಡಿಎಸ್ ಮುಖಂಡರಾದ ಎಪಿಎಂಸಿ ಮಾಜಿ ಅಧ್ಯಕ್ಷ ಕುರುಡುಮಲೆ ಮಂಜುನಾಥ್, ಮಂಚಿಗಾನಹಳ್ಳಿ ಚಂದ್ರೇಗೌಡ, ಉತ್ತನೂರು ರಾಮರೆಡ್ಜಿ ಮುಂತಾದವರು ಹಾಜರಿದ್ದರು.
ಲಾರಿ ಪಲ್ಟಿ: ಒಬ್ಬ ಸಾವು
ಮುಳಬಾಗಲು: ತಾಲೂಕಿನ ಜಮ್ಮನಹಳ್ಳಿ ಗ್ರಾಮದ ವಾಸಿಗಳು ಹೊರಟೆದ್ದ ಕಲ್ಲು ಚಪ್ಪಡಿಗಳನ್ನು ಹೊತ್ತಿದ್ದ ಲಾರಿ ತಮಿಳುನಾಡಿನ ವೆಲ್ಲುಪುರಂ ಸಮೀಪದಲ್ಲಿ ಗುರುವಾರ ರಾತ್ರಿ ಪಲ್ಟಿ ಹೊಡೆದ ಕಾರಣ ಜಮ್ಮನಹಳ್ಳಿ ಗ್ರಾಮದ ಒಬ್ಪರು ಮೃತರಾಗಿದ್ದು 4 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬುಚ್ಚಪ್ಪ (30) ಮೃತಪಟ್ಟ ವ್ಯಕ್ತಿ ಎಂದು ಗುರ್ತಿಸಲಾಗಿದೆ. ಗಾಯಗೊಂಡವರು ಚಾಲಕ ಮಂಜುನಾಥ್, ಗೋಪಾಲ್, ನಾಗೇಶ್ ಹಾಗೂ ವಿದ್ಯಾರ್ಥಿ ಸಂತೋಷ್ ಎನ್ನಲಾಗಿದೆ. ಲಾರಿಯ ಮೇಲಿನ ಚಪ್ಪಡಿಗಳ ಮೇಲೆ ಕುಳಿತು ಪ್ರಯಾಣೆಸುತ್ತಿದ್ದ ಇವರೆಲ್ಲ ಅಳುಗಳಡಿ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.ತಮಿಳುನಾಡಿನ ತಿರುವೆನ್ನಲ್ಲೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.