ಕೋಲಾರ: ಬಡ್ಡಿ ವ್ಯವಹಾರ ನಡೆಸುತ್ತಿರುವ ನಗರಸಭೆ ಮಾಜಿ ಸದಸ್ಯ ಮುಕ್ಕಡ್ ವೆಂಕಟೇಶ್ ಅವರ ವಿರುದ್ಧ ಜನತೆಯಿಂದ ಅನೇಕ ದೂರು ಬಂದರೂ ಕ್ರಮ ಕೈಗೊಂಡಿಲ್ಲವೆಂಬ ದೂರಿನ ಮೇರೆಗೆ ಕೋಲಾರ ನಗರ ಠಾಣೆಯ ವಿರುದ್ಧ ಕ್ರಮ ಕೈಗೊಳ್ಳದೆ ಅವರಿಗೆ ಬೆಂಬಲ ನೀಡಿದ ಆರೋಪದ ಮೇರೆಗೆ, ನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ಅಂಬರೀಶ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಸಾಲ ಪಡೆವರ ವಿರುದ್ಧ ಮುಕ್ಕಡ್ ವೆಂಕಟೇಶ್ ದೂರಿನ ಬಗ್ಗೆ ಮುತುವರ್ಜಿ ವಹಿಸಿ ಠಾಣೆಗೆ ಕರೆಸಿ ಕಿರುಕುಳ ನೀಡಿದ್ದಾರೆಂದು ಹರಟಿ ಅರ್ಜುನ್ ಎಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು. ಪಿಎಸ್‌ಐ ಅಂಬರೀಶ್ ಅವರನ್ನು ಜಿಲ್ಲಾ ಎಸ್ಪಿ ಡಾ.ರಾಮ್ ನಿವಾಸ್ ಸಪೆಟ್ ಅಮಾನತು ಪಡಿಸಿ ಆದೇಶ ಹೊರಡಿಸಿದ್ದಾರೆ.