ಕೋಲಾರ

ವರ್ತೂರ್ ಕುರುಬ ಸಮಾಜಕ್ಕೆ ಏನೂ ಮಾಡಿಲ್ಲ

ಕ.ಪ್ರ.ವಾರ್ತೆ ್ಣ ಕೋಲಾರ ್ಣ ಮಾ.29
ಸಚಿವ ವರ್ತೂರು ಪ್ರಕಾಶ್ ಅವರು ಕುರುಬ ಸಮಾಜಕ್ಕೆ ಸೇರಿದವರಾದರೂ ಸಮಾಜದ ಏಳಿಗೆಗೆ ಏನನ್ನು ಮಾಡಿಲ್ಲ, ಗ್ರಾಮೀಣ ಪ್ರದೇಶದಲ್ಲಿ ಜನತೆಯ ನಡುವೆ ಇದ್ದ ಸೌಹಾರ್ದತೆ ಹಾಳು ಮಾಡಿರುವುದೇ ಅವರ ಐದು ವರ್ಷಗಳ ಸಾಧನೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ನಾಗಭೂಷಣ್ ಟೀಕಿಸಿದರು.
ಅವರು ಶುಕ್ರವಾರ ಜೆಡಿಎಸ್ ಅಭ್ಯರ್ಥಿ ಕೆ. ಶ್ರೀನಿವಾಸಗೌಡರ ಪರವಾಗಿ ನರಸಾಪುರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿ, ಸಚಿವರು ಸುರಿಸುವ ಮೊಸಳೆ ಕಣ್ಣೀರಿಗೆ ಕುರುಬ ಜನಾಂಗ ಕರಗದೆ, ಸಚಿವರ ದೌರ್ಜನ್ಯಕ್ಕೆ ಹೆದರದೆ ಧೈರ್ಯವಾಗಿ ಜೆಡಿಎಸ್ ಅಭ್ಯರ್ಥಿ ಕೆ. ಶ್ರೀನಿವಾಸಗೌಡರನ್ನು ಬೆಂಬಲಿಸಬೇಕೆಂದು ತಿಳಿಸಿದರು.
ಕುರುಬ ಜನಾಂಗದ ಯುವ ಮುಖಂಡ ಜಯಪ್ರಕಾಶ್ ನಾರಾಯಣ ಮಾತನಾಡಿ, ಕನಿಷ್ಠ ಕೋಲಾರ ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಕುರುಬರ ಹಾಸ್ಟೆಲ್‌ನ್ನು ಪೂರ್ಣಗೊಳಿಸಲಾಗದ ಸಚಿವರು ಇತರೆ ಸಮಾಜಕ್ಕೆ ಏನು ತಾನೇ ಮಾಡಿಯಾರು ಎಂದು ಪ್ರಶ್ನಿಸಿದರಲ್ಲದೆ, ಸಚಿವರ ಆಶ್ವಾಸನೆಗಳೆಲ್ಲಾ ಪೊಳ್ಳಾಗಿದ್ದು, ಇದನ್ನು ಮತದಾರರು ಅರಿತು ಜನಪರ ಕಾಳಜಿ ಇರುವ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಕೋರಿದರು.
ಪಕ್ಷದ ಹಿಂದುಳಿದ ವರ್ಗಗಳ ತಾಲೂಕು ಅಧ್ಯಕ್ಷ ಕೀಲುಕೋಟೆ ಆರ್. ಶ್ರೀನಿವಾಸ್ ಮಾತನಾಡಿ, ಕಳೆದ ನಗರಸಭೆ ಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷದಿಂದ ಸ್ಪರ್ಧಿಸಿದ್ದ ಕುರುಬ ಜನಾಂಗದ ಅಭ್ಯರ್ಥಿಗಳನ್ನು ಸೋಲಿಸಿರುವ ಸಚಿವರಿಗೆ ಸಮಾಜದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲವೆಂದು ಹೇಳಿದರು.
ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ರಾಜರಾಜೇಶ್ವರಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೌಡೇಶ್ವರಿ ರಾಮಚಂದ್ರ ಮಾತನಾಡಿದರು.
ಅಭ್ಯರ್ಥಿ ಕೆ. ಶ್ರೀನಿವಾಸಗೌಡರು ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ನಮ್ಮ ಎದುರಾಳಿ ಕಾಂಗ್ರೆಸ್ಪ್‌ಕ್ಷವಾಗಿದ್ದು, ವರ್ತೂರು ಪ್ರಕಾಶ್ ಮೂರನೇ ಸ್ಥಾನದಲ್ಲಿರುತ್ತಾರೆಂದು ಹೇಳಿದರು. ಮುಖಂಡರಾದ ಮೂರಾಂಡಹಳ್ಳಿ ಗೋಪಾಲ್, ನಾಗನಾಳ ಸೋಮಣ್ಣ, ಈರಪ್ಪ, ಬಣಕನಹಳ್ಳಿ ನಟರಾಜ್, ಆಂಜನಮ್ಮ,  ಹೋಬಳಿ ಅಧ್ಯಕ್ಷ ಬೆಳಮಾರನಹಳ್ಳಿ ಆನಂದ್ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video