ಕೋಲಾರ

ಕೋಲಾರ-ಚಿಕ್ಕಬಳ್ಳಾಪುರ ರೇಲ್ವೆ ಕಾಮಗಾರಿ ಪರಿಶೀಲನೆ

ಕ.ಪ್ರ.ವಾರ್ತೆ ್ಣ ಕೋಲಾರ ್ಣ ಮಾ.30  
ಕೋಲಾರ-ಚಿಕ್ಕಬಳ್ಳಾಪುರ ಮಾರ್ಗದಲ್ಲಿ ನಡೆಯುತ್ತಿರುವ ರೇಲ್ವೆ ಮಾರ್ಗದ ಕಾಮಗಾರಿಯನ್ನು ಅಧಿಕಾರಿಗಳು ಪರಿಶೀಲಿಸಿದರು.
ಕಾಮಗಾರಿ ವಿಳಂಬವಾಗಿರುವುದರಿಂದ ರೇಲ್ವೆ ಮಾರ್ಗದ ಉದ್ಘಾಟನೆ ವಿಳಂಬವಾಗಿದೆ ಎಂದು ಬೆಂಗಳೂರು ರೈಲ್ವೆ ಇಲಾಖೆ ಹಿರಿಯ ಮಂಡಲ ವಾಣಿಜ್ಯ ಅಧಿಕಾರಿ ಎನ್. ರಮೇಶ್ ತಿಳಿಸಿದರು.
ಶನಿವಾರ ಕೋಲಾರ ಚಿಕ್ಕಬಳ್ಳಾಪುರ ರೈಲ್ವೆ ಮಾರ್ಗದ ಕಾಮಗಾರಿಯನ್ನು ಪರಿಶೀಲಿಸಲು ಬಂದಿದ್ದ 30 ಮಂದಿ ಅಧಿಕಾರಿಗಳ ವಿಶೇಷ ತಂಡದೊಂದಿಗೆ ಆಗಮಿಸಿದ ಅವರನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಚಿಂತಾಮಣಿ, ಶಿಡ್ಲಘಟ್ಟ ಬಳಿ ರೈಲ್ವೆ ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ, ಗೊಟ್ಟಹಳ್ಳಿ ಮತ್ತು ಶ್ರೀನಿವಾಸಪುರ ರೇಲ್ವೆ ಸ್ಟೇಷನ್ಗ್‌ಳಲ್ಲಿ ಕುಡಿಯುವ ನೀರು ಸಂಪರ್ಕ, ಬೆಂಚ್‌ಣಗಳು, ವಾಹನಗಳ ನಿಲ್ದಾಣ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿವೆ. ಇದೆಲ್ಲಾ ಮುಗಿದ ಮೇಲೆ ರೇಲ್ವೆ ಸುರಕ್ಷತಾ ಆಯುಕ್ತ ಎಸ್.ಕೆ. ಸುರೇಶ್‌ಕುಮಾರ್ ಮಿಟ್ಟಲ್ ಮಾರ್ಗ ಪರಿಶೀಲಿಸಿ ಸರ್ಟಿಫಿಕೇಟ್ ನೀಡಬೇಕಾಗಿದೆ.
ಗೊಟ್ಟಿಹಳ್ಳಿ, ಶ್ರೀನಿವಾಸಪುರ, ಚಿಂತಾಮಣಿ, ಶಿಡ್ಲಘಟ್ಟ ಈ ನಾಲ್ಕು ಕಡೆ ಮುಖ್ಯ ರೇಲ್ವೆ ಸ್ಟೇಷನ್ಗ್‌ಳನ್ನು ಕೊಡಲಾಗಿದೆ.  5 ಕೋಟಿ ವೆಚ್ಚದಲ್ಲಿ ಗೊಟ್ಟಹಳ್ಳಿ ಸ್ಟೇಷನ್ಕಾಮಗಾರಿ ನಿರ್ಮಾಣ ನಡೆಯುತ್ತಿದೆ. ಕಾರು, ಬಸ್ ಮುಂತಾದ ವಾಹನ ನಿಲ್ದಾಣಕ್ಕೆ ರೈತರು ಈ ಸ್ಟೇಷನ್ ಬಳಿ 1.32 ಎಕರೆ ಜಮೀನನ್ನು ಒದಗಿಸಿಕೊಡಲು ಮುಂದೆ ಬರಬೇಕೆಂದು ಕೋರಿದ್ದಾರೆ.
ಗೊಟ್ಟಹಳ್ಳಿ ರೇಲ್ವೆ ಸ್ಟೇಷನ್ ಕಾಮಗಾರಿ ಪರಿಶೀಲನೆ ಬಂದಾಗ ಸುತ್ತಮುತ್ತಲಿನ ಗ್ರಾಮಸ್ಥರು ಅಧಿಕಾರಿಗಳಿಗೆ ಹೂಮಾಲೆ ಹಾಕಿ ಸ್ವಾಗತಿಸಿದರು. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ರೈತರಿಗೆ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನೈರುತ್ಯ ರೇಲ್ವೆ ವಲಯದ ಮುಖ್ಯ ಅಭಿಯಂತರ ಹೆಚ್. ಅಗರ್‌ವಾಲ್, ಡಿಪ್ಯೂಟಿ ಮುಖ್ಯ ಅಭಿಯಂತರ ಅಮರ್‌ಗುಂಡಪ್ಪ, ರೇಲ್ವೆ ಅಧಿಕಾರಿಗಳಾದ ಪಿ.ಆರ್. ಶರ್ಮಾ ಮುಂತಾದ ವಿಶೇಷ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!