ಕೋಲಾರ

ಜನಮನ ಸೆಳೆದ ಹಂಸ ವಾಹನೋತ್ಸವ

ಕೆಜಿಎಫ್: ಕೆಜಿಎಫ್‌ನ ಸುಪ್ರಸಿದ್ಧ ಪ್ರಸನ್ನ ಲಕ್ಷ್ಮೀ ವೆಂಕಟರಮಣ ದೇವಾಲಯದ 78ನೇ ವಾರ್ಷಿಕ ಜಾತ್ರೆಯ ಪ್ರಯುಕ್ತ ಮಲೆಯಾಳಿ ಸಮುದಾಯದವರಿಂದ ಹಂಸವಾಹನೋತ್ಸವ ಅತಿ ವಿಜೃಂಭಣೆಯಿಂದ ನಡೆಯಿತು. ರಾಜ್ಯದ ಗಡಿ ಭಾಗದ ಕೆಜಿಎಫ್ ನಗರದ ಮುಜರಾಯಿ ಇಲಾಖೆಗೆ ಒಳಪಡುವ  ಪ್ರಸನ್ನ ಲಕ್ಷ್ಮೀ ವೆಂಕಟರಮಣ ದೇವಾಲಯದ ಜಾತ್ರಾ ಮಹೋತ್ಸವವು ಕೋಲಾರ ಜಿಲ್ಲೆ ಅಲ್ಲದೆ, ನೆರೆಯ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲೂ ಸಹ ಪ್ರಖ್ಯಾತಿ ಪಡೆದಿದೆ.
ಜಾತ್ರಾ ಮಹೋತ್ಸವದ 8ನೇ ದಿನದಂದು ಮಲಯಾಳಿ ಸಮುದಾಯದವರು ನಡೆಸಿಕೊಡುವ ಹಂಸ ವಾಹನೋತ್ಸವ ಉತ್ಸವ ವೀಕ್ಷಿಸಲು ಕೆಜಿಎಫ್ ಕ್ಷೇತ್ರದ ನಗರ ಹಾಗೂ ಗ್ರಾಮಾಂತರ ಪ್ರದೇಶಗಳು ಮಾತ್ರವಲ್ಲದೆ ಇತರೇ ಪಕ್ಕದ ರಾಜ್ಯಗಳಿಂದ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡರು.
ಅನ್ನ ಸಂತರ್ಪಣೆ: ಬೆಳಗ್ಗೆ 6 ಗಂಟೆಗೆ ದೇವರಿಗೆ ಅಭಿಷೇಕದ ಜತೆಗೆ, ದೇವರಿಗೆ ವಿಶೇಷ ಹೂವಿನ ಅಲಂಕಾರ ಪೂಜೆ  ಮಾಡಿ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಭಕ್ತರ ಮನರಂಜನೆಗಾಗಿ ಕೇರಳ ರಾಜ್ಯದಿಂದ ಆನೆಯನ್ನು ಕರೆತಂದು ದೇವಾಲಯದಿಂದ ಮೆರವಣಿಗೆ ಹೊರಟು ನಗರದ ಪ್ರಮುಖ ರಸ್ಥೆಗಳು, ವೃತ್ತಗಳಲ್ಲಿ ಸಂಚರಿಸಿತು. ಮಹಿಳೆಯರ ಚಂಡೆ ವಾದ್ಯ, ಸ್ಥಬ್ದ ಚಿತ್ರಗಳಾದ ಲಕ್ಷ್ಮೀ, ರಾಮ, ಲಕ್ಷ್ಮಣ ಹಾಗೂ ರಾವಣನ ಪ್ರತಿ ರೂಪವನ್ನು ಪ್ರದರ್ಶಿಸಲಾಯಿತು,
ಕೇರಳ ರಾಜ್ಯದ ಸಂಸ್ಕೃತಿಯ ಕಲಾ ತಂಡಗಳಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಲಯಾಳಿ ಉತ್ಸವದಂದು ಭಕ್ತಾಧಿಗಳ ಗಮನ ಸೆಳೆಯುವುದೆಂದರೆ ಬಾಣಬಿರಸು ಪಟಾಕಿಗಳು ಸಿಡಿಸುವ ದೃಶ್ಯ ಇಲ್ಲಿ ವಿಶೇಷ.
ಹಂಸವಾಹನೋತ್ಸವದಲ್ಲಿ ಅಧ್ಯಕ್ಷ ಸುರೇಶ್ ನಾರಾಯಣಕುಟ್ಟಿ, ಸುರೇಶ್, ಆನಂದಕೃಷ್ಣನ್, ರವಿ, ನಟರಾಜನ್, ಚಂದ್ರಶೇಖರ್ ಸ್ವಾಮೀಜಿ, ಚಂದ್ರರೆಡ್ಡಿ, ಭಾಸ್ಕರ್‌ರೆಡ್ಡಿ, ಗೋಪಿ, ಶಿವದಾಸನ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ