ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಇಂಗ್ಲಿಷ್ ವ್ಯಾಮೋಹ: ವಿಶ್ವದಲ್ಲಿ 250 ಭಾಷೆ ನಾಶ

Rashmi Kasaragodu
Updated On : 2 Nov 2013, 12:45 pm

ಗೌರಿಬಿದನೂರು: ಇಂಗ್ಲಿಷ್ ವ್ಯಾಮೋಹ ಕೇವಲ ಕನ್ನಡ ಭಾಷೆಗೆ ಮಾತ್ರವಲ್ಲದೆ ವಿಶ್ವದಲ್ಲಿ 250 ಭಾಷೆಗಳು ನಶಿಸಿರುವುದು ಭಾಷೆಗೆ ತಗಲಿರುವ ಶಾಪವಾಗಿದೆ ಎಂದು ಕನ್ನಡ ಪ್ರಾಧ್ಯಾಪಕ ಪ್ರೊ.ಕೆ.ಪಿ.ನಾರಾಯಣಪ್ಪ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 58ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಕನ್ನಡ ಭಾಷೆಗೆ 2,500 ವರ್ಷಗಳ ಇತಿಹಾಸವಿದ್ದು, ಕಾವೇರಿ ನದಿತೀರದಿಂದ ಗೋದಾವರಿ ನದಿ ತೀರದವರೆಗೂ ಕನ್ನಡದ ಕಂಪು ಹರಡಿರುವುದು ಇತಿಹಾಸ ತಿಳಿಸುತ್ತದೆ ಎಂದರು.
ವಿಧಾನ ಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿ, ಕನ್ನಡನಾಡು ಹಲವು ಮಹನೀಯರ ಹೋರಾಟ ಹಾಗೂ ಶ್ರಮದ ಫಲವೇ ಇಂದು ನಾವು ರಾಜ್ಯೋತ್ಸವ ಆಚರಿಸುತ್ತಿದ್ದೇವೆಂದರು. ಕನ್ನಡ ಭಾಷೆಯನ್ನು ಅಭಿವೃದ್ಧಿಗೊಳಿಸುವ ಕೆಲಸ ಆಗುತ್ತಿರುವುದು ಗಮನಾರ್ಹ ಸಂಗತಿ ಎಂದರು.
ನಂತರ ತಾಲೂಕು ದಂಡಾಧಿಕಾರಿ ಪ್ರಾಸ್ತಾವಿಕ ಭಾಷಣದಲ್ಲಿ ಮಾತನಾಡಿ, ಕನ್ನಡಿಗರೇ ಆದ ನಾಡನ್ನು ಮೊದಲು ಹುಟ್ಟು ಹಾಕಿದವರು ಕದಂಬ ನಂತರ ಗಂಗರಿಂದ ಸ್ಥಾಪಿತವಾಯಿತು. ನಂತರ ಸವಣರು ಮತ್ತು ಹೊಯ್ಸಳರ ಕಾಲದ ಯುದ್ಧಗಳಿಂದ ಕನ್ನಡ ಒಡೆದಿದ್ದು, ಆಗ ಒಡೆದ ಕನ್ನಡ ಒಂದಾಗಲು ಶತಮಾನಗಳೇ ಬೇಕಾದವವು ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಜಾಗೃತಿ ಮೂಡಿಸುವ ದ್ವಿಚಕ್ರ ವಾಹನವನ್ನು ಉಪಾ ಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿಯವರು ಚಾಲನೆ ನೀಡಿದರು. ಹಾಗೂ ಹಲವಾರು ಕ್ಷೇತ್ರದಲ್ಲಿ ದುಡಿದಂತ ಗಣ್ಯರಿಗೆ ರಾಜ್ಯೋತ್ಸವ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.
ವಿಷೇಶವಾಗಿ ಪತ್ರಿಕಾ ರಂಗದಲ್ಲಿ ಪಿ.ವಿ. ರಾಜಣ್ಣ, ಶಿಕ್ಷಣ ಕ್ಷೇತ್ರದಲ್ಲಿ ಪ್ರೊ.ಕೆ.ಪಿ. ನಾರಾಯಣಪ್ಪ ಮತ್ತು ಕನ್ನಡದ ಹೋರಾಟಗಾರರ ಪರವಾಗಿ ಕಲ್ಲೂಡಿ ಶ್ರೀನಿವಾಸ್ರವರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ವಿವಿಧ ಶಾಲಾ ಮಕ್ಕಳಿಂದ ಕನ್ನಡ ಗೀತೆಗಳ ನೃತ್ಯ ಜನಮನಸೋರೆಗೊಂಡಿರುವುದು ವಿಶೇಷವಾಗಿತ್ತು. 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪುರಸಭಾ ಮುಖ್ಯಾಧಿಕಾರಿ ಹನುಮಂತೇಗೌಡ, ವೃತ್ತ ನಿರೀಕ್ಷಕ ಕೆ. ನಾಗರಾಜು ಹಾಗೂ ತಾಪಂ ಅಧ್ಯಕ್ಷ ಪಾರ್ವತಮ್ಮ, ಉಪಾಧ್ಯಕ್ಷ ಲಕ್ಷ್ಮೀದೇವಮ್ಮ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement