ಉಚಿತ ವಿವಾಹ ಮಹೋತ್ಸವ
ಚಿಕ್ಕಬಳ್ಳಾಪುರ: ತಾಲೂಕಿನ ಗಂಗರೆಕಾಲುವೆ ಗ್ರಾಮದ ಶ್ರೀ ಜಲಗಣಪತಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಉಚಿತ ವಿವಾಹ ಕಾರ್ಯಕ್ರಮ ನಡೆಯಿತು. ಇಬ್ಬರು ದಂಪತಿಗಳು ಕಾರ್ಯಕ್ರಮದಲ್ಲಿ ತಮ್ಮ ನೂತನ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು.
ಜಿಪಂ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಕಳೆದ ಕೆಲ ವರ್ಷಗಳ ಹಿಂದೆ ಗ್ರಾಮದ ಪಾಳುಬಾವಿಯಲ್ಲಿ ಗಣೇಶನ ವಿಗ್ರಹ ದೊರೆಯಿತು.ಅದನ್ನು ತಂದು ಜಲಗಣಪತಿ ಹೆಸರಿನಲ್ಲಿ ಪ್ರತಿಷ್ಠಾಪಿಸಿದ್ದು ಇದರ ನೆನೆಪಿಗಾಗಿ ಪ್ರತಿವರ್ಷ ನ.1 ರಂದು ಉಚಿತ ಸಾಮೂಹಿಕ ಮದುವೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ಹೋಮ ಪೂಜಾ ಕಾರ್ಯಕ್ರಮ,ದೇವರಿಗೆ ವಿಶೇಷ ಅಭಿಷೇಕ,ಅಲಂಕಾರವನ್ನು ಕೈಗೊಳ್ಳಲಾಯಿತು.
ಕೆಜಿಎಫ್ನಲ್ಲಿ ಕನ್ನಡ ರಾಜ್ಯೋತ್ಸವ
ಕೆಜಿಎಫ್: ಕಸ್ತೂರಿ ಕನ್ನಡ ಸಂಘದ ವತಿಯಿಂದ ಸ್ವರ್ಣನಗರದಲ್ಲಿ ಕನ್ನಡ ರಾಜ್ಯೋತ್ಸವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ವರ್ಣನಗರ ಮತ್ತು ವಿವೇಕನಗರ ಬಡಾವಣೆಗಳ ಪ್ರಮುಖರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕನ್ನಡ ಪರ ಸಂಘಗಳ ಸದಸ್ಯರು ಭಾಗವಹಿಸಿದ್ದರು. ಈ ವೇಳೆ ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ವಿ.ಎಸ್. ಪ್ರಕಾಶ್ ಅವರ ನೇತೃತ್ವದಲ್ಲಿ ನಗರಸಭೆ ಪೌರಾಯುಕ್ತ ವಿ. ಬಾಲಚಂದ್ರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಗಸಭೆ ಸದಸ್ಯ ಮುರುಗೇಶ್, ಎನ್.ಆರ್. ಪುರುಷೋತ್ತಮ, ಮದನ್ಗೋಪಾಲ್, ವೆಂಕಟರಾಮಯ್ಯ, ದೇವೆಂದ್ರಾಚಾರಿ, ನಾಗೇಂದ್ರ, ವೆಂಕಟೇಶ್, ಕೊಂಡಪ್ಪ, ರಾಜಣ್ಣ, ವೇಲು, ರಾಧಾಕೃಷ್ಣ, ಹರೀಶ್, ಕೇಶವರೆಡ್ಡಿ, ಮಂಜುನಾಥ್ ಇದ್ದರು.