'ಕನ್ನಡ ಭಾಷೆಯನ್ನು ಕಡೆಗಣಿಸಬೇಡಿ'
ಶ್ರೀನಿವಾಸಪುರ: ಕನ್ನಡ ಭಾಷೆಯನ್ನು ಕಡೆಗಣಿಸಬೇಡಿ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎನ್. ಶಿವಣ್ಣ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾಲೇಜಿನಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದ ಸಂಪತ್ತುನ್ನು ಉಳಿಸಲು ಯುವ ಪೀಳಿಗೆ ಮುಂದಾಳತ್ವ ವಹಿಸಬೇಕು ಎಂದರು. ಉಪನ್ಯಾಸಕ ಶೇಷಗಿರಿ ಮಾತನಾಡಿದರು. ಸಿ. ರವಿ ಮತ್ತು ಉಪನ್ಯಾಸಕರು ಇದ್ದರು.